ಕವನ

ಮೊದಲ ಮಳೆಯ ಸಿಂಚನಕೆ ಅರಳಿ ನಿಂತಿದೆ ಭೂ ವನ

ಮೊದಲ ಪ್ರೀತಿ ಸಂಭ್ರಮಕೆ ತೋಯ್ದು ಹೋಯ್ತು ಈ ಮನ

ಮಳೆಯು ಗೀಚಿದೆ ಹಸಿರೆಲೆಗಳ ಮೇಲೆ ಹನಿಗವನಗಳ ಸಾಲು,

ಈ ಮನದ ತುಂಬೆಲ್ಲಾ ಕನಸುಗಳ ಚಿಗುರು,

ಸೋನೆ ಮಳೆಯು ಹನಿಗಳಷ್ಟೇಯಾದರೂ,

ಕಾದು ನಿಂತ ಬರಡು ನೆಲಕೆ ಎಂದೂ ಬತ್ತದ ಪ್ರೀತಿಯೊರತೆಯು.

ಹನಿಗಳು ಅಷ್ಟೇ ಜೋರು ಮಳೆಯಲ್ಲ ಆದರೂ ಸಾಕು

ಜೀವನ ಸವೆಸಲು ನೆನಪುಗಳೇ ಮಧುರ.

Leave a Reply

Your email address will not be published. Required fields are marked *

Back To Top