ವರ್ತುಲ ರೈಲ್ವೆ – ೨೫೦೦ ಎಕರೆ ಭೂಸ್ವಾಧೀನ

ವರ್ತುಲ ರೈಲ್ವೆ – ೨೫೦೦ ಎಕರೆ ಭೂಸ್ವಾಧೀನ

ಬೆಂಗಳೂರು ಸುತ್ತಲಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ವರ್ತುಲ ರೈಲ್ವೆ ಯೋಜನೆಗೆ 2500 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಲಾಗಿದೆ. ಕೇಂದ್ರ ರೈಲ್ವೆ ಇಲಾಖೆಯು ಭೂಮಿ ನೀಡಿದವರಿಗೆ ಪರಿಹಾರ ನೀಡಲಿದೆ. ಈ ಯೋಜನೆಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 8 ಪಟ್ಟಣಗಳನ್ನು ರೈಲು ಸಂಪರ್ಕದ ಮೂಲಕ ಬೆಸೆಯಲಿದ್ದು, 287 ಕಿ.ಮೀ. ವಿಸ್ತೀರ್ಣ ಹೊಂದಿರಲಿದೆ. ಮುಂದಿನ 50 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಡಿಪಿಆರ್ ಸಿದ್ಧಪಡಿಸಲಾಗುವುದು ಎಂದು ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ವರ್ತುಲ ರೈಲ್ವೆ ಯೋಜನೆಗೆ ಬೆಂಗಳೂರು ಸುತ್ತಮುತ್ತಲ ಪ್ರದೇಶಗಳಲ್ಲಿ 2500 ಎಕರೆ ಭೂಸ್ವಾಧೀನ. ಭೂಮಿ ನೀಡಿದವರಿಗೆ ಪರಿಹಾರವನ್ನು ಕೇಂದ್ರ ರೈಲ್ವೆ ಇಲಾಖೆಯಿಂದ ನೀಡಲಾಗುವುದು ಎಂದ ಸಚಿವ ವಿ.ಸೋಮಣ್ಣ. 287 ಕಿಲೋಮೀಟರ್ ವೃತ್ತಾಕಾರದ ರೈಲ್ವೆ ಯೋಜನೆ ಇದಾಗಿದ್ದು, 81 ಸಾವಿರ ಕೋಟಿ ರೂ. ವೆಚ್ಚ.
ಬೆಂಗಳೂರು : ವರ್ತುಲ ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ ಬೆಂಗಳೂರು ಸುತ್ತಮುತ್ತಲ ಪ್ರದೇಶಗಳಲ್ಲಿ 2500 ಎಕರೆ ಭೂಸ್ವಾಧೀನಕ್ಕೆ ನಿರ್ಧಾರ ಮಾಡಲಾಗಿದೆ. ಭೂಮಿ ನೀಡಿದವರಿಗೆ ಪರಿಹಾರವನ್ನು ಕೇಂದ್ರ ರೈಲ್ವೆ ಇಲಾಖೆಯೇ ನೀಡಲಿದೆ ಎಂದು ಕೇಂದ್ರ ಸರ್ಕಾರದ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಬೆಂಗಳೂರು ಸುತ್ತಮುತ್ತ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಈ ವರ್ತುಲ ರೈಲ್ವೆ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ 8 ಪ್ರಮುಖ ಪಟ್ಟಣಗಳನ್ನು ರೈಲು ಸಂಪರ್ಕದ ಮೂಲಕ ಬೆಸೆಯಲಾಗುತ್ತಿದೆ. ಒಟ್ಟು 287 ಕಿ.ಮೀ. ವೃತ್ತಾಕಾರದ ರೈಲ್ವೆ ಯೋಜನೆ ಇದಾಗಿದ್ದು, 81 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಈಗಾಗಲೇ ಸಮೀಕ್ಷಾ ಕಾರ್ಯ ನಡೆಯುತ್ತಿದೆ. ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಹಾಗೂ ಬೆಂಗಳೂರು ನಗರವನ್ನು ಸಂಪರ್ಕಿಸುವ ವೃತ್ತಾಕಾರದ ರೈಲ್ವೆ ಸಂಚಾರ ಆರಂಭಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಕುಮಾರಕೃಪಾ ಅತಿಥಿಗೃಹದಲ್ಲಿ ರೈಲ್ವೆ ಇಲಾಖೆಯ ಸಹಾಯಕ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ರಾಜ್ಯದ ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದ ಸಭೆ ನಡೆಯಿತು. ಈ ಸಭೆಯಲ್ಲಿ ವಿ.ಸೋಮಣ್ಣ ಮಾತನಾಡಿದರು. ಮುಂದಿನ 50 ವರ್ಷಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ವರ್ತುಲ ರೈಲ್ವೆ ಯೋಜನೆ ರೂಪಿಸಲಾಗುತ್ತಿದೆ. ಇದಕ್ಕೆ ಅಗತ್ಯ ಡಿಪಿಆರ್ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು. (ಅಮಿತ್ ಶಾ ಅವರನ್ನು ಭೇಟಿ ಮಾಡಿದ ವಿ.ಸೋಮಣ್ಣ)
ಮುಂದಿನ 50 ವರ್ಷಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ವರ್ತುಲ ರೈಲ್ವೆ ಯೋಜನೆ ರೂಪಿಸಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸಲಾಗಿದೆ. ಕೆಲ ನ್ಯೂನತೆ ಹಾಗೂ ಸವಾಲುಗಳಿರುವ ಬಗ್ಗೆ ಸಂಸದರು ತಿಳಿಸಿದ್ದಾರೆ. ಅವುಗಳನ್ನು ಸರಿಪಡಿಸಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ರೂಪಿಸಲಾಗುವುದು ಎಂದು ವಿವರಿಸಿದರು.
ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್, ಭದ್ರಾವತಿ-ಚಿಕ್ಕಜಾಜೂರು ಸ್ಥಳ ಸಮೀಕ್ಷೆಗೆ ರೈಲ್ವೇ ಬೊರ್ಡ್ ಒಪ್ಪಿಗೆ, ಚನ್ನಗಿರಿಗೂ ಬರಲಿದೆ ರೈಲು ಮೂರು ಹಂತಗಳಲ್ಲಿ ಯೋಜನೆ.

ಹಂತ 1 – ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಿಡವಂದ – ದೊಡ್ಡಬಲ್ಳಾಪುರ – ದೇವನಹಳ್ಳಿ – ಕೋಲಾರದ ಮಾಲೂರುವರೆಗೂ.
ಹಂತ 2 – ಕೋಲಾರಮಾಲೂರು – ಬೆಂಗಳೂರು ಗ್ರಾಮಾಂತರದ ಆನೇಕಲ್ – ಬೆಂಗಳೂರು ನಗರದ ಹೆಜ್ಜಾಲವರೆಗೂ.
ಹೆಜ್ಜಾಲ – ರಾಮನಗರ ಜಿಲ್ಲೆಯ ಸೋಲೂರು – ನಿಡವಂದ.
ಉಪನಗರ ರೈಲು ಕೂಡ ಸೇರ್ಪಡೆ :
ವರ್ತುಲ ರೈಲು ಯೋಜನೆಗೆ ಸಾಧ್ಯವಿರುವೆಡೆ ಉಪನಗರ ರೈಲನ್ನು ಜೋಡಣೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಜತೆಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ, ರಾಜ್ಯ ಹೆದ್ದಾರಿಗಳು ಕೂಡ ಸಂಪರ್ಕ ಹೊಂದಲಿವೆ. ಇದು ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಸಚಿವ ವಿ.ಸೋಮಣ್ಣ ಮಾಹಿತಿ ನೀಡಿದರು.
ಭೂ ಸ್ವಾಧೀನಕ್ಕೆ ಸಮಿತಿ :
ಭೂಸ್ವಾಧೀನಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚನೆ ಮಾಡಲಾಗುವುದು. ನೈರುತ್ಯ ರೈಲ್ವೆ ಬೆಂಗಳೂರು ವಿಭಾಗೀಯ ವ್ಯವಸ್ಥಾಪಕರು, ಭೂಸ್ವಾಧೀನ ಅಧಿಕಾರಿ, ಉನ್ನತಾಧಿಕಾರಿಗಳು, ಕೆಐಎಡಿಬಿ, ಕೆ-ರೈಡ್, ಬಿಬಿಎಂಪಿ, ನಗರ ಹಾಗೂ ಗ್ರಾಮಾಂತರ ಜಿಲ್ಲಾಡಳಿತ ಸೇರಿದ ಎಲ್ಲ ಅಧಿಕಾರಿಗಳು ಈ ಸಮಿತಿಯಲ್ಲಿ ಎಂದು ಸಚಿವರು ತಿಳಿಸಿದರು.
ಪರಿಹಾರ ಹೇಗೆ :
ಯೋಜನೆಗೆ ಭೂಸ್ವಾಧೀನ ಮಾಡಿಕೊಂಡವರಿಗೆ ಪರಿಹಾರವನ್ನು ರೈಲ್ವೆ ಇಲಾಖೆ, ರಾಜ್ಯ ಸರ್ಕಾರ, ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ಅನುಸರಿಸಲಾಗುವುದು. ಯಾರಿಗೂ ತೊಂದರೆಯಾಗದಂತೆ ಖಾಸಗಿ ಜಮೀನು ಪಡೆಯಲು ಕ್ರಮವಹಿಸಲಾಗುತ್ತದೆ ಎಂದು ವಿ.ಸೋಮಣ್ಣ ಭರವಸೆ ನೀಡಿದರು.

Leave a Reply

Your email address will not be published. Required fields are marked *

Back To Top