ತಾಯಂದಿರ ದಿನ ಅಂದರೆ ಕೇವಲ ಬೊಕ್ಕೆ, ಹೂಗುಚ್ಛ, ಉಡುಗೊರೆ ನೀಡುವ ದಿನ ಮಾತ್ರವಲ್ಲ. ನಮ್ಮನ್ನು ರಕ್ಷಿಸಲು, ಪೋಷಿಸಲು ಮತ್ತು ನಮ್ಮನ್ನು ಬಲಿಷ್ಠ ವ್ಯಕ್ತಿಗಳಾಗಿ ಬೆಳೆಸಲು ಸಮಾಜದಲ್ಲಿ ಎಲ್ಲಾ ರೀತಿಯಲ್ಲೂ ಹೋರಾಡುವ ಬಲಿಷ್ಠ ಮಹಿಳೆಯರಿಗೆ ಗೌರವ, ವಂದನೆ ಸಲ್ಲಿಸುವ ದಿನ ಇದಾಗಿದೆ.
ತಾಯಮ್ಮ ಎಂಬ ಮಹಿಳೆಯ ಕಥೆಯು ಪ್ರಪಂಚದ ಪ್ರತಿಯೊಂದು ಮೂಲೆಯ ತಾಯಂದಿರ ಸಹಿಷ್ಣುತೆ ಮತ್ತು ತ್ಯಾಗಕ್ಕೆ ಅಂತಹ ಒಂದು ಸಾಕ್ಷಿಯಾಗಿದೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಒಂದು ಸಣ್ಣ ಹಳ್ಳಿಯಿಂದ ಬಂದ ತಾಯಮ್ಮ ಅವರಿಗೆ ಮೂವರು ಮಕ್ಕಳಿದ್ದಾರೆ : ಇಬ್ಬರು ಗಂಡು ಮತ್ತು ಒಬ್ಬ ಮಗಳು. 33 ವರ್ಷ ವಯಸ್ಸಿನ ತಾಯಮ್ಮ, ತನ್ನ ಮಕ್ಕಳು ತನ್ನ ರೀತಿ ಕಷ್ಟಪಡದೆ ಚೆನ್ನಾಗಿ ಬೆಳೆಯಬೇಕೆಂದು ನಿರ್ಧರಿಸಿ ಸ್ವಂತ ಮನೆ ಕಟ್ಟಿಸಿಕೊಳ್ಳಲು 60 ಸಾವಿರ ರೂಪಾಯಿ ಅಡ್ವಾನ್ಸ್ ಪಡೆದರು. ಅದು ಅವರ ಜೀವನವನ್ನೇ ತಲೆಕೆಳಗಾಗಿಸಿತು. ಅವರ ಪತಿ ಮೂರ್ತಿ ಒಂದು ಸಣ್ಣ ಕನಸು ಕಂಡಿದ್ದರು. ಬಾಲ್ಯದಿಂದಲೂ, ಅವರು ಸ್ವಂತ ಮನೆ ಕಟ್ಟಲು ಬಯಸಿದ್ದರು. ತಾವು ವಾಸಿಸುತ್ತಿದ್ದ ಪ್ರದೇಶವು ಮೂಲಭೂತ ನೈರ್ಮಲ್ಯವನ್ನು ಹೊಂದಿಲ್ಲ. ಮಕ್ಕಳಿಗೆ ಉತ್ತಮ ಭವಿಷ್ಯ ಕಲ್ಪಿಸುವ ಭರವಸೆಯಲ್ಲಿ ತೆಗೆದುಕೊಂಡ ಅಡ್ವಾನ್ಸ್ ಹಣವನ್ನು ವಾಪಸ್ ನೀಡಲಾಗದೆ ಸಾಲವನ್ನು ಮರುಪಾವತಿಸಲು ಸಾಧ್ಯವಾಗದೆ ದಂಪತಿ ಜೀತ ಕಾರ್ಮಿಕರಾಗಿ ಜಮೀನುದಾರರ ಹತ್ತಿರ ಸಿಲುಕಿದರು. ತಾಯ್ಮಮ್ಮ ತಮ್ಮ ಪತಿ ಮೂರ್ತಿ ಜೊತೆ 2015-17ರಲ್ಲಿನ ತಮ್ಮ ಸಂಕಷ್ಟವನ್ನು ನೆನಪಿಸಿಕೊಳ್ಳುವ ತಾಯಮ್ಮ ಹಿಂದೆ ಪತಿ ಕೆಲಸಕ್ಕೆ ಹೋದಾಗ ಮಧ್ಯಾಹ್ನ ನಂತರ ಮಕ್ಕಳನ್ನು ಕಬ್ಬಿನ ಗದ್ದೆಗೆ ಒಯ್ದು ತಾನು ಕೆಲ ಮಾಡಿ ಸಂಸಾರದ ನೇಗಿಲನ್ನು ಹೊತ್ತು ಜೀವನ ಮುಂದುವರಿಸಿದರು.
ತಮ್ಮ ಸಮಸಾರವು ಜೀತದಾಳುಗಳಾಗಿ ದುಡಿಯುವಾಗ ಮಕ್ಕಳು ಅನಾರೋಗ್ಯಕ್ಕೆ ಒಳಗಾದಾಗ, ಪೋಷಕರಲ್ಲಿ ಒಬ್ಬರು ಅವರನ್ನು ಕ್ಲಿನಿಕ್‌ಗೆ ಕರೆದೊಯ್ಯಬಹುದು, ಇನ್ನೊಬ್ಬರು ಕೆಲಸ ಮಾಡುವುದನ್ನು ಮುಂದುವರಿಸಬೇಕು, ಹಲವು ಸಂದರ್ಭಗಳಲ್ಲಿ ಪುರುಷರು ಮಾಡುವಂತೆ ಮಹಿಳೆಯರು ಕೆಲಸ ಮಾಡಬೇಕಾಗುತ್ತದೆ ಎಂದು ಅಂದಿನ ಕಷ್ಟದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.
ತಾಯಿಯಾಗಿ ನನ್ನ ಮಕ್ಕಳಿಗೆ ಆರೋಗ್ಯಕರ ಆಹಾರ ಮತ್ತು ಬಟ್ಟೆಗಳನ್ನು ಒದಗಿಸುವ ಮೂಲಭೂತ ಕರ್ತವ್ಯಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ. ಹಾಗೂ ತುಂಬಾ ತೊಂದರೆಯಾಗಿ ನೋವು ಅನುಭವಿಸಿದರು. ಸಾಮಾಜಿಕ ವಲಯಗಳಲ್ಲಿ ತಮ್ಮ ಸಂಸಾರದ ಚಲನವಲನವನ್ನು ಸಹ ನಿರ್ಬಂಧಿಸಲಾಗಿತ್ತು. ಕುಟುಂಬ ಕಾರ್ಯಕ್ರಮಗಳಿಗೆ ಭೇಟಿ ನೀಡಲು ಸಹ ಸಾಧ್ಯವಾಗಲಿಲ್ಲ ಎನ್ನುತ್ತಾರೆ. 2017ರಲ್ಲಿ ತಾಯಮ್ಮ ಮತ್ತು ಮೂರ್ತಿ ಅವರ ಐದು ಸದಸ್ಯರ ಕುಟುಂಬವನ್ನು ನಿರ್ದಯಿ ಮಾಲೀಕರ ಹಿಡಿತದಿಂದ ಮುಕ್ತಗೊಳಿಸಲಾಯಿತು. ಈಗ, ಅವರು ತಮ್ಮ ಸ್ವಂತ ಮನೆಯನ್ನು ಹೊಂದಿದ್ದಾರೆ, ಎಳನೀರು ವ್ಯಾಪಾರ ಮಾಡುತ್ತಿದ್ದಾರೆ.
ತಾಯಮ್ಮ ಉದಯೋನ್ಮುಖ ಟ್ರಸ್ಟ್ ಮೂಲಕ ಇತರರೊಂದಿಗೆ ಜೀತದಾಳುದಿಂದ ಬಿಡುಗಡೆ ಮಾಡಲು ಆ ದಿನಗಳು ನೆನಪಾಗಿರುತ್ತದೆ. ಇಂದು ತಮ್ಮ ಮಕ್ಕಳು ಅವರ ಅಧ್ಯಯನದತ್ತ ಗಮನ ಹರಿಸಿ ಉತ್ತಮ ಪ್ರಜೆಗಳಾಗಬೇಕೆಂದು ನಾನು ಬಯಸುತ್ತೇನೆ. ಅವರು ಏನನ್ನು ಸಾಧಿಸಲು ಬಯಸುತ್ತಾರೆ. ಅಥವಾ ಇನ್ನೊಂದು ರೀತಿಯಲ್ಲಿ ಅವರು ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂಬುದು ತಮ್ಮ ಆಸೆ ಎನ್ನುತ್ತಾರೆ. ಇಂದು, ತಾಯಮ್ಮ ಅವರು ಸ್ವತಂತ್ರ ಮತ್ತು ಸ್ವಾವಲಂಬನೆ ಉದ್ಯಮಿಯಾಗಿದ್ದು, ಇತರ ಬಿಡುಗಡೆಯಾಧ ಜೀತ ಕಾರ್ಮಿಕರ ಜೊತೆಗೆ ಉದಯೋನ್ಮುಖ ಟ್ರಸ್ಟ್ನ ಮೂಲಕ ಸಹಾಯ ಮಾಡುತ್ತಾರೆ. ಕರಕುಶಲ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಇನ್ನೊಬ್ಬ ಜೀತದಾಳು ಮುಕ್ತ ಕಾರ್ಮಿಕರ ಜೀವನಕ್ಕೆ ಧ್ವನಿಯಾಗಿದ್ದಾರೆ. ಹೊಲಿಗೆ ಕೆಲಸ ಮಾಡುತ್ತಾರೆ. ಮತ್ತು ಹೊಲಿಗೆಗೆ ಒಲವು ಹೊಂದಿರುವ ಧೈರ್ಯಶಾಲಿ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ. ಇಂದು ತಾಯಂದಿರ ದಿನದ ಸಂದರ್ಭದಲ್ಲಿ ತಾಯಮ್ಮ ಪ್ರತಿ ಮಗುವೂ ತನ್ನ ತಾಯಿಯನ್ನು ಗೌರವಿಸಬೇಕು. ತಾಯಿಯ ಪ್ರೀತಿ ಮತ್ತು ವಾತ್ಸಲ್ಯವು ಪ್ರಪಂಚದಲ್ಲಿ ಅತ್ಯಂತ ಪರಿಶುದ್ಧ ಮತ್ತು ಆಳವಾದದ್ದು, ಅವಳು ದಣಿವರಿಯಿಲ್ಲದೆ ತ್ಯಾಗ ಮಾಡುತ್ತಾಳೆ ಮತ್ತು ಅವಳ ಮಕ್ಕಳಿಗೆ ಆಧಾರವಾಗುತ್ತಾಳೆ ಎಂದು ಅಭಿಪ್ರಾಯಪಡುತ್ತಾರೆ.
* * *


