ಬೆಂಗಳೂರಿನ ಮಳೆ ಒಂಥರಾ ರಮ್ ಇದ್ದ ಹಾಗೆ. ಎಷ್ಟು ಕುಡಿದರೂ ನಶೆ ಏರುವುದೇ ಇಲ್ಲಾ, ಹಾಗೆ ಬೆಂಗಳೂರಿನಲ್ಲಿ ಎಷ್ಟು ಮಳೆ ಬಿದ್ದರೂ ಗೊತ್ತಾಗೋದೇ ಇಲ್ಲಾ
ಇನ್ನು ಬೆಳಗಾವಿಯ ಮಳೆ ಮನೆ ಅಳಿಯ ಇದ್ದ ಹಾಗೆ ಒಮ್ಮೆ ಮನೆ ಹೊಕ್ಕರೆ ಮುಗಿತು, ನಮ್ಮ ಮನೆಯಲ್ಲೇ ಇರಪ್ಪ ಅಂದ್ರೂ ಫಜಿತಿ ಮತ್ತೆ ಬೇರೆ ಮನೆಗೆ ಹೋಗಪ್ಪಾ ಅನ್ನೋದು ಫಜೀತಿ.
ಇನ್ನು ಮೈಸೂರಿನ ಮಳೆ ಪ್ರೇಯಸಿಯ ಪ್ರೇಮ ನಿವೇದನೆ ಇದ್ದ ಹಾಗೆ ಯಾವಾಗ ಬಂದು ಧೋ ಧೋ ಎಂದು ಸುರಿಯುವುದೋ, ಯಾವಾಗ ಇದ್ದಕ್ಕಿದ್ದಂತೆ ಮಾಯವಾಗುದೋ ಗೊತ್ತಾಗುವುದೇ ಇಲ್ಲಾ.
ಮಡಿಕೇರಿಯ ಮಳೆ ಹೆಂಡತಿ ಇದ್ದ ಹಾಗೆ, ಸಿಟ್ಟಿಗೆದ್ದಾಗ ಯಾವುದೂ ಸ್ಪಷ್ಟ ವಾಗಿ ಕೇಳಿಸದಂತೆ, ಇಡಿ ದಿನ ಗೊಣ ಗೊಣ, ಶುರು ಮಳೆ ಒಂದು ಸಲ ಧಢ ಧಢ ಬೀಳುವದಿಲ್ಲ ಇಡಿ ದಿನ ರಿಪಿ ರಿಪಿ ಬೀಳ್ತಾನೆ ಇರ್ತದೆ
ಇನ್ನು ಶಿರ್ಸಿ ಕಡೆಯ ಮಳೆ ಲಗ್ನವಾದ ನಂತರ ಸಂಸಾರ ನಡೆಸಿದಂತೆ ಒಮ್ಮೆ ಶುರು ಆದರೆ ಮುಗಿತು ಕೊನೇ ತನಕ ಏಕ ಪ್ರಕಾರವಾಗಿ ಧೋ ಧೋ ಅಂತ ಸುರಿತಾನೇ ಇರ್ತದೆ.
ಇನ್ನ ಬಿಜಾಪುರ ಮಳಿ ಅಂದ್ರ ಅಷ್ಟಕ್ಕ ಅಷ್ಟ ಬಂದ್ರ ಬಂತು ಇಲ್ಲದಿದ್ರ ಇಲ್ಲಾ ಮತ್ತ್ ಧಾರವಾಡ ಮಳೆ ಒಂಥರಾ ಏಳೇಳು ಜನ್ಮಕ್ಕೆ ಸಿಗುವ ಚೆಂದ ಹೆಂಡ್ತಿ ಇದ್ದ ಹಾಂಗ ಪ್ರೀತಿ ಪ್ರೇಮ ದಿನಾ ನಿಲ್ಲದ ಸುರ್ದ ಸುರಿತಿರತದ ಇನ್ನು ಕಲಬುರಗಿಯ ಮಳೆ ಮುನಿಸಿಕೊಂಡು ತವರಿಗೆ ಹೋದ ಹೆಂಡತಿಯಂತೆ ಯಾವಾಗ ಬರತ್ತಾದೋ ಗೊತ್ತಿಲ್ಲ.
ಎಲ್ಲರಿಗೂ ಮಳೆಗಾಲ ಸಂತೋಷ ಕೊಡಲಿ.


