ದಕ್ಷಿಣ ಕನ್ನಡದ ಅನಘಾ ಭಟ್ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದಾಗಲೇ ತಮ್ಮ ಪುರೋಹಿತರ (ಹಿಂದೂ ಅರ್ಚಕರು) ಕುಟುಂಬದಲ್ಲಿ ಪೌರೋಹಿತ್ಯ ಕರ್ತವ್ಯಗಳನ್ನು ನಿರ್ವಹಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರದಾರದು ಅವರು ತಮ್ಮ ತಂದೆಯೊಂದಿಗೆ ಮದುವೆಗಳನ್ನು ನೆರವೇರಿಸುವಲ್ಲಿ ಮತ್ತು ಇತರ ಧಾರ್ಮಿಕ ವಿಧಿಗಳನ್ನು ನಿರ್ವಹಿಸುವಲ್ಲಿ ಸಹಾಯ ಮಾಡುತ್ತಾರೆ. ಅನಘಾ ಅವರಿಗೆ ತಮ್ಮ ತಂದೆಯಿಂದ ಸಂಸ್ಕöÈತ ಮತ್ತು ವೇದಗಳನ್ನು ಕಲಿಯಲು ಪ್ರೋತ್ಸಾಹ ದೊರೆತಿದೆ, ಅವರು ಋಗ್ವೇದದ 15 ಸೂಕ್ತಗಳನ್ನು ಮತ್ತು ಯಜುರ್ವೇದದ ರುದ್ರಪಾಟವನ್ನು ಕಲಿತಿದ್ದಾರೆ.
ಮಹಿಳೆಯರು ಪುರುಷರಿಗೆ ಸರಿ ಸಮಾನವಾಗಿ ಎಲ್ಲ ಕ್ಷೇತ್ರಗಳಲ್ಲೂ ಮುಂದಿದ್ದಾರೆ. ಈ ವಿಷಯದಲ್ಲಿ ವನಿತೆಯರ ಸಾಧನೆ ಬಹು ದೊಡ್ಡದು. ಸಾಧನೆಯಲ್ಲಿ ಮಹಿಳೆಯರಿಗೆ ಯಾವ ಕ್ಷೇತ್ರವೂ ಹೊರತಲ್ಲ. ಪುರಾತನ ಕಾಲದಿಂದಲೂ ಪುರುಷರಿಗಷ್ಟೇ ಸೀಮಿತವಾಗಿ ಪೌರಹಿತ್ಯದಲ್ಲೂ ಈಗ ಮಹಿಳೆಯರೂ ಗುರುತಿಸಿಕೊಂಡಿದ್ದಾರೆ. ಮೈಸೂರಿನ ಡಾ. ಪಿ. ಭ್ರಮರಾಂಭ ಮಹೇಶ್ವರಿ ಅವರಿ ದೇಶದ ಪ್ರಥಮ ಮಹಿಳಾ ಪುರೋಹಿತೆಯಾಗಿ ಗಮನಸೆಳೆದಿದ್ದಾರೆ. ಇವರು ೩೦ ವರ್ಷಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಪೌರಹಿತ್ಯಗಳನ್ನು ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಚಿತ್ರಾಂಗದಾ ಸತರೂಪ ಅವರು ಪಶ್ಚಿಮ ಬಂಗಾಳದಲ್ಲಿ ಕನ್ಯಾದಾನವಿಲ್ಲದೆ ಮದುವೆ ಮಾಡಿಸುವ ಮೊದಲ ಮಹಿಳಾ ಪುರೋಹಿತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮನೀಶಾ ಶೆಟ್ ಕೂಡಾ ಪುರೋಹಿತೆಯಾಗಿ ಕೆಲಸ ಮಾಡುತ್ತಿರುವ ಇನ್ನೊರ್ವ ಮಹಿಳೆ. ಪುಣೆ ಮೂಲದ ಮನಿಶಾ ಭಟ್ ಕಳೆದ ೨೦ ವರ್ಷಗಳಿಂದ ಪೌರಹಿತ್ಯ ಮಾಡುತ್ತಾ ಗಮನಸೆಳೆದಿದ್ದಾರೆ. ಈಗ ಈ ಸಾಲಿಗೆ ಮತ್ತೊಂದು ಸೇರ್ಪಡೆ ಕರ್ನಾಟಕದ ಅನಘ ಭಟ್.
ದಕ್ಷಿಣ ಕನ್ನಡ ಜಿಲ್ಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದಾಗಲೇ ಅನಘ ಭಟ್ ಪುರೋಹಿತರ ಕುಟುಂಬದಲ್ಲಿ ಮದುವೆ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಪೌರೋಹಿತ್ಯ ಕರ್ತವ್ಯಗಳನ್ನು ನಿರ್ವಹಿಸಿದ ಮೊದಲ ಮಹಿಳೆಯಾಗಿದ್ದಾರೆ.
ಶಾಸ್ತ್ರಗಳಲ್ಲಿ ಯಾವುದೇ ನಿಷೇಧವಿಲ್ಲದಿದ್ದರೂ, ದೇವಾಲಯಗಳು ಅಥವಾ ಇತರ ಧಾರ್ಮಿಕ ವೇದಿಕೆಗಳಲ್ಲಿ ಮಹಿಳಾ ಪುರೋಹಿತರನ್ನು ನೋಡುವುದು ಅಪರೂಪ. ಆದರೆ, ಬಂಟ್ವಾಳ ತಾಲೂಕಿನ ದಾಸಕೋಡಿ ಗ್ರಾಮದ ಅನಘ ಭಟ್ ಅವರಿಗೆ ೧೭ನೇ ವಯಸ್ಸಿನಲ್ಲೇ ಈ ಮಾರ್ಗವು ಸುಲಭವಾಗಿತ್ತು, ಏಕೆಂದರೆ ಅವರ ತಂದೆ ಮತ್ತು ಪುರೋಹಿತರಾದ ಕಾಶಿಕೋಡಿ ಸೂರ್ಯನಾರಾಯಣಭಟ್ ಅವರು ಸಂಸ್ಕೃತ ಮತ್ತು ವೇದಗಳನ್ನು ಕಲಿಯಲು ಪ್ರೋತ್ಸಾಹಿಸಿದರು ಮತ್ತು ಪುರೋಹಿತರಾಗಲು ಸಹಾಯ ಮಾಡಿದರು.
ವಾಸ್ತವವಾಗಿ, ಅವರ ಅಜ್ಜ ಗುರುವಾಯೂರೇ ಭಟ್ ಅವರು ಚಿಕ್ಕ ವಯಸ್ಸಿನಲ್ಲಿ ಅನಘಾಗೆ ವೇದಗಳನ್ನು ಕಲಿಯಲು ಏಕೆ ಆಸಕ್ತಿ ಇಲ್ಲ ಎಂದು ಪದೇ ಪದೇ ಕೇಳುತ್ತಿದ್ದರು. ವರ್ಷಗಳ ನಂತರ, ಅವರು ತಮ್ಮ ಅಜ್ಜನ ಆಸೆಯನ್ನು ಪೂರೈಸಿದರು ಮತ್ತು ತಮ್ಮ ತಂದೆಯಿಂದ ವೇದಗಳನ್ನು ಕಲಿತರು. ಅವರು ಪಿಯುಸಿ ವಿದ್ಯಾರ್ಥಿನಿಯಾಗಿದ್ದಾಗಲೇ ತಮ್ಮ ತಂದೆಗೆ ಮದುವೆಗಳನ್ನು ನೆರವೇರಿಸುವಲ್ಲಿ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ವಿಧಿಗಳನ್ನು ನಿರ್ವಹಿಸುವಲ್ಲಿ ಸಹಾಯ ಮಾಡುತ್ತಿದ್ದರ. ಜೊತೆಗೆ ತಮ್ಮ ತಂದೆಯ ಮಾರ್ಗದರ್ಶನದಲ್ಲಿ ಸ್ವತಂತ್ರ ಪುರೋಹಿತರಾಗಿ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದಾರೆ.
ನಾನು ವಿದ್ಯಾರ್ಥಿನಿಯಾಗಿದ್ದಾಗಲೇ ಧಾರ್ಮಿಕ ಕಾರ್ಯಕ್ರಮಗಳಲ್ಲಿ ವಿಧಿಗಳನ್ನು ಮುನ್ನಡೆಸಲು ಜನರು ಒತ್ತಾಯಿಸುತ್ತಿದ್ದರು. ನನಗೆ ಅತ್ಯಂತ ಸಂತೋಷವಾಯಿತು” ಎಂದು ಅನಘ ಭಟ್ ಹೇಳಿದರು. “ನಾನು ಪುರೋಹಿತರ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದೇನೆ. ನಮ್ಮ ಕುಟುಂಬದಲ್ಲಿ ಎಲ್ಲರೂ, ಯಾವುದೇ ಅಪವಾದವಿಲ್ಲದೆ, ಸಂಸ್ಕöÈತ, ವೇದಗಳನ್ನು ಕಲಿಯಲು ಮತ್ತು ಪುರೋಹಿತರಾಗಲು ನನಗೆ ಪ್ರೋತ್ಸಾಹಿಸಿದರು. ನಾನು ನನ್ನ ತಂದೆಯಿಂದ ಋಗ್ವೇದದ 15 ಸೂಕ್ತಗಳನ್ನು ಮತ್ತು ಯಜುರ್ವೇದದ ರುದ್ರಪಾಠವನ್ನು ಕಲಿತಿದ್ದೇನೆ” ಎಂದುತಮ್ಮ ಪೌರಹಿತ್ಯದ ಸಾಧನೆಯನ್ನು ವಿವರಿಸಿದ್ದಾರೆ.
ಅವರ ತಂದೆ ಸೂರ್ಯನಾರಾಯಣ ಭಟ್, ಮಹಿಳೆಯರು ವೇದಗಳು ಮತ್ತು ಇತರ ವಿಧಿಗಳನ್ನು ಕಲಿಯಲು ಯಾವುದೇ ನಿರ್ಬಂಧಗಳಿಲ್ಲ ಎಂದು ಹೇಳಿದ್ದಾರೆ.


