ಅಕ್ಟೋಬರ್ 2 ಗಾಂಧಿ ಜಯಂತಿಯಂದು ಬಿಡುಗಡೆಗೆ ಸಿದ್ಧವಾಗುತ್ತಿರುವ ಹೊಂಬಾಳೆ ಫಿಲ್ಮ್ ಪ್ರೊಡಕ್ಷನ್ರವರ ರಿಷಬ್ ಶೆಟ್ಟಿ ನಟಿಸಿರುವ ಬಹುನಿರೀಕ್ಷಿತ ಕುತೂಹಲಭರಿತ ಚಿತ್ರ ಕಾಂತಾರ-೨ ಅನ್ನು ಅಶೇಷ ಚಿತ್ರ ಪ್ರೇಮಿಗಳು, ವಿಶಾಲ ಕರ್ನಾಟಕ ಅಭಿಮಾನಿಗಳು ವಿಶೇಷವಾಗಿ ಭಾರತ ಚಿತ್ರರಂಗವು ಎದುರು ನೋಡುತ್ತಿದೆ. ಅವರ ಮುಖ್ಯ ಭೂಮಿಕೆಯಲ್ಲಿ ನಟಿಸಿ ನಿರ್ದೇಶಿಸುತ್ತಿರುವ ಚಿತ್ರ ಕಾಂತಾರಾ-೨ ಸಿನಿಮಾದ ಪ್ರೀಕ್ವಿಲ್ ರಿಷಬ್ ಜನ್ಮದಿನದಂದು (ಜುಲೈ 7) ಈ ಹೊಚ್ಚ ಹೊಸ ಸಿನಿಮಾದ ಪೋಸ್ಟರ್ ಬಿಡುಗೆಯಾಗಿರುತ್ತದೆ. ನಿಗೂಢ ಕತೆಯುಳ್ಳ ವಿಚಿತ್ರ ಘಟನೆಗಳ ಅನೇಕ ತಿರುವುಗಳ ಚಿತ್ರ ಕಥೆಯ ಸನ್ನಿವೇಶಗಳು ಚಿತ್ರೀಕರಣವು ಮುಗಿದು ಬಿಡುಗಡೆಗೆ ತಯಾರಿ ಆರಂಭಿಸಿದೆ.
ಇದೊಂದು ಅಧ್ಯಾತ್ಮ ಮತ್ತು ಸಾಹಸಗಾಥೆಯ ಸಮಿಶ್ರಣ ಎಂದು ಮತ್ತು ‘ದಂತಕಥೆಯ ಮುನ್ನುಡಿ ಆ ನುಡಿಗೊಂದು ಪರಿಚಯ… ಮನದಾಳದ ಕಥೆಗೆ ಮತ್ತೊಮ್ಮೆ ಸ್ವಾಗತ’ ಎಂಬ ಅಡಿಬರಹ ನೀಡಿ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ರಿಷಬ್ ಶೆಟ್ಟಿ ಹಿಂದೆಂದೂ ಕಾಣದ ಲುಕ್ಕಿನಲ್ಲಿ ಕೇರಳದ ಕಲಾರಿಪಟ್ಟು ತರಬೇತಿ ಪಡೆದು ಸಾಹಸ ದೃಶ್ಯಗಳಲ್ಲಿ ನಟಿಸಿ ವಿಜೃಂಭಿಸಲಿದ್ದಾರೆ.
ಈ ಚಿತ್ರಕ್ಕಾಗಿ ಕುಂದಾಪುರ ಬಳಿ 25 ಎಕರೆ ಪ್ರದೇಶದಲ್ಲಿ ಬೃಹತ್ ಸೆಟ್ ಹಾಕಿ ಈ ಸಿನಿಮಾದ ಕಾಲ್ಪನಿಕ ಊರನ್ನು ಸೃಷ್ಟಿಸಿ ಚಿತ್ರೀಕರಣ ನಡೆಸಲಾಗಿದೆ. ಭಾರತೀಯ ಹಾಗೂ ಅಂತರಾಷ್ಟ್ರೀಯ ತಂತ್ರಜ್ಞರೂ ಈ ಸಿನಿಮಾಗೆ ಕೈ ಜೋಡಿಸಿದ್ದು, 45 ರಿಂದ 50 ದಿನಗಳ ಕಾಲ ಸುಮಾರು 500 ತರಬೇತಿದಾರರು, 3000ಕ್ಕೂ ಹೆಚ್ಚು ಜೂನಿಯರ್ ಕಲಾವಿದರು ಪೂರ್ಣ ಶ್ರಮವಹಿಸಿ ಅದ್ಧೂರಿಯಾಗಿ ಚಿತ್ರ ಮೂಡಿಬರಲು ತೊಡಗಿಸಿಕೊಂಡಿದ್ದಾರೆಂದು ಹೊಂಬಾಳೆ ಚಿತ್ರ ತಯಾರಕರು ಮಾಧ್ಯಮಕ್ಕೆ ತಿಳಿಸಿದ್ದಾರೆ.

