ಜಪಾನ್ ದೇಶಕ್ಕೆ ಸೇರಿದ ಮಾನಸಿಕ ವೈದ್ಯ ನಿಪುಣರಾದ “ಡಾ. ಹಿಡೇಕಿ ವಾಡಾ (Hideki Wada, Japanese Psychiatrist)” ಅವರು ಬರೆದ (80 Year Old Wall Keep on walking 80 ವರ್ಷ ನಡೆಯುತ್ತಾ ಇರಿ) ಅನ್ನೋ ಪುಸ್ತಕವು 5 ಲಕ್ಷ ಕಾಪಿಗಳಿಗೂ ಹೆಚ್ಚು ಮಾರಾಟವಾಗಿ, ದೇಶದಲ್ಲೇ ಬೆಸ್ಟ್ ಸೆಲ್ಲರ್ ಆಗಿದೆ.
ಈ ಪುಸ್ತಕದಲ್ಲಿ 60 ರಿಂದ 80 ವರ್ಷ ವಯಸ್ಸಿನಲ್ಲಿ ಇರುವವರಿಗೆ ಆನಂದದಿಂದ ಜೀವಿಸಲಿಕ್ಕಾಗಿ 44 ಉತ್ತಮವಾದ ಸಲಹೆಗಳು ಇವೆ. ಅವೇ ಈ ಕೆಳಗಿನಂತೆ ತಿಳಿಸಲಾಗಿದೆ.
ಪ್ರತಿನಿತ್ಯವೂ ನಡೆಯಿರಿ. ಕೋಪ ಬಂದಾಗ ದೀರ್ಘವಾದ ಉಸಿರನ್ನು ತೆಗೆದುಕೊಳ್ಳಿ. ಶರೀರವು ದಣಿಯುವವರೆಗೂ ವ್ಯಾಯಾಮವನ್ನು ಮಾಡಿ. ಎ.ಸಿ. ಬಳಸುತ್ತಿದ್ದಲ್ಲಿ ಹೆಚ್ಚಾಗಿ ನೀರನ್ನು ಕುಡಿಯಿರಿ. ಡೈಪರುಗಳನ್ನು ಬಳಸುವುದರಿಂದ ಚಲನವಲನ ಸುಲಭವಾಗುತ್ತದೆ. ತಪ್ಪದೇ ನಡೆಯುವುದರಿಂದ ಮೆದುಳು, ಶರೀರ ಚುರುಕಾಗಿ ಇರುತ್ತವೆ. ಗುರುತಿಸಲಾಗದೇ ಹೋಗುವುದು ವಯಸ್ಸಿನಿಂದಾಗಿ ಅಲ್ಲ, ಮೆದುಳನ್ನು ಬಳಸದೇ ಇರುವುದರಿಂದ. ಅತ್ಯಧಿಕ ಔಷಧಿಗಳನ್ನು ತೆಗೆದುಕೊಳ್ಳುವ ಅವಸರವಿಲ್ಲ. ಬಿ.ಪಿ., ಶುಗರ್ ಕೃತ್ರಿಮವಾಗಿ ತಗ್ಗಿಸಿಕೊಳ್ಳುವ ಅವಸರವಿಲ್ಲ. ಒಂಟಿಯಾಗಿ ಇರುವುದು ಒಂಟಿತನವೇನಲ್ಲ, ಅದು ಸಂತೋಷಕರ ಸಮಯ. ಆಲಸ್ಯವು ಆರೋಗ್ಯಕ್ಕೆ ಹಾನಿಕಾರಕವಲ್ಲವೆಂದು ತಿಳಿದುಕೊಳ್ಳಿ. ವೃದ್ಧರಿಗೆ ಡ್ರೈವಿಂಗ್ ಪ್ರಮಾದಕರವಾಗಬಹುದು. ಲೈಸೆನ್ಸ್ ತೆಗೆದುಕೊಳ್ಳುವ ಕುರಿತಾಗಿ ಪುನಃಪರಿಶೀಲನೆ ಮಾಡಿರಿ. ನಿಮಗೆ ಇಷ್ಟವಾದದ್ದನ್ನೇ ಮಾಡಿರಿ, ಇಷ್ಟವಿಲ್ಲದ್ದನ್ನು ಮಾಡಬೇಡಿ. ಪ್ರಕೃತಿ ಸಿದ್ಧವಾದ ಕೋರಿಕೆಗಳು ವಯಸ್ಸಿನೊಂದಿಗೆ ಹೋಗುವುದಿಲ್ಲ. ಮನೆಯಲ್ಲೇ ಇರಬೇಡಿ, ಹೊರಗಡೆ ಹೋಗಿರಿ. ಇಷ್ಟ ಬಂದ ಹಾಗೆ ತಿನ್ನಿರಿ. ಸ್ವಲ್ಪ ದಪ್ಪವಾದರೂ ಪರವಾಗಿಲ್ಲ. ಯಾವುದೇ ಕೆಲಸವಾದರೂ ಜಾಗ್ರತೆಯಿಂದ ಮಾಡಿರಿ. ಇಷ್ಟವಿಲ್ಲದ ವ್ಯಕ್ತಿಗಳನ್ನು ದೂರವಿಡಿ. ದಿನವೆಲ್ಲಾ ಟಿ.ವಿ. ನೋಡಬೇಡಿ. ರೋಗಗಳೊಂದಿಗೆ ಹೋರಾಡಬೇಡಿ, ಅವುಗಳೊಂದಿಗೆ ಕಲೆತು ಜೀವಿಸಿರಿ.
ಒಂದು ದೊಡ್ಡ “ಮಂತ್ರವನ್ನು ನೆನಪಿಟ್ಟುಕೊಳ್ಳಿ: ದುರ್ಗಮವಾದ ರಸ್ತೆಯಲ್ಲೂ ಸಹ ಮಾರ್ಗವು ಕಾಣಿಸುತ್ತದೆ.” ತಾಜಾ ಹಣ್ಣು, ಸಲಾಡುಗಳನ್ನು ತಿನ್ನಿರಿ. ಸ್ನಾನವನ್ನು 10 ನಿಮಿಷಗಳಲ್ಲೇ ಪೂರ್ತಿ ಮಾಡಿರಿ. ನಿದ್ರೆ ಬಾರದೇ ಹೋದಲ್ಲಿ, ಬಲವಂತವಾಗಿ ನಿದ್ರೆ ಮಾಡಬೇಡಿ. ಸಂತೋಷಕರವಾದ ಕೆಲಸಗಳನ್ನು ಮಾಡುವುದು, ಮೆದುಳನ್ನು ಚುರುಕಾಗಿ ಇರಿಸುತ್ತದೆ. ನಿಮ್ಮ ಮನಸ್ಸಿನ ಮಾತುಗಳನ್ನು ಮಾತನಾಡಿ. “ಹೇಗೆ ಮಾತನಾಡಬೇಕು?” ಅನ್ನೋ ಯೋಚನೆ ಮಾಡಬೇಡಿ. ಓರ್ವ ಫ್ಯಾಮಿಲಿ ಡಾಕ್ಟರ್ ಒಬ್ಬರನ್ನು ತ್ವರಿತವಾಗಿ ನಿರ್ಧರಿಸಿಕೊಳ್ಳಿ, ಭೇಟಿಯಾದಾಗಲೆಲ್ಲಾ ಅವರಿಗೆ ನಿಮ್ಮ ಎಲ್ಲಾ ದುಗುಡ, ದುಮ್ಮಾನ, ವೇದನೆ, ನೋವು ಎಲ್ಲಾ ವಿವರಿಸಿ ಪರಿಹಾರ ಪಡೆಯಿರಿ. ಅತ್ಯಂತ ಸಹನೆಯಿಂದಿರಿ. ಸ್ವಲ್ಪ ತುಂಟತನ ಹಾಗೂ ಸಿಡುಕು ಸ್ವಭಾವದ ವೃದ್ಧರಂತಿರುವುದು ಚೆನ್ನಾಗಿಯೇ ಇರುತ್ತದೆ. ಆಗೀಗೊಮ್ಮೆ ಮರೆಯುವದು, ಹಠದ ಸ್ವಭಾವವನ್ನು ಬಿಡುವುದು ಒಳ್ಳೆಯದೇ. ಕಡೆಯ ಅವಧಿಯಲ್ಲಿ ಬರುವ ಡಿಮೆನ್ಷಿಯಾ (ಮರೆವು) ದೇವರು ಕೊಟ್ಟ ವರವೆಂದು ಭಾವಿಸಿರಿ. ಕಲಿಯುವುದನ್ನು ನಿಲ್ಲಿಸಿದಾಗ ನಿಜವಾಗಿಯೂ ವೃದ್ಧರಾಗುತ್ತಾರೆ. ದೊಡ್ಡ ಹೆಸರು ಮಾಡುವ ಕೋರಿಕೆ ಇಟ್ಟು ಕೊಳ್ಳಬೇಡಿ. ಇರುವುದನ್ನಷ್ಟೇ ಸಾಕೆಂದುಕೊಳ್ಳಿ. ನಿರ್ದೋಷಿತನ ವೃದ್ಧರ ಪ್ರತ್ಯೇಕತೆ. ಸಮಸ್ಯೆಗಳೇ ಹೆಚ್ಚಾದಂತೆ ಜೀವನವೇ ಆಸಕ್ತಿಕರ. ಸೂರ್ಯರಶ್ಮಿಯಲ್ಲಿ ಕುಳಿತುಕೊಳ್ಳುವುದು ಆನಂದವನ್ನು ನೀಡುತ್ತದೆ. ಇತರರಿಗಾಗಿ ಒಳ್ಳೆಯ ಕೆಲಸಗಳನ್ನು ಮಾಡಿರಿ. ಈ ದಿನವನ್ನು ಪ್ರಶಾಂತವಾಗಿ ಜೀವಿಸಿರಿ. ಆಸಕ್ತಿ/ಕೋರಿಕೆ ಜೀವಿತಾವಧಿಯನ್ನು ಹೆಚ್ಚಿಸುತ್ತದೆ. ಯಾವಾಗಲೂ ಪಾಸಿಟಿವ್ ಆಗಿರಿ. ಸ್ವೇಚ್ಛೆಯಾಗಿ ಉಸಿರನ್ನು ತೆಗೆದುಕೊಳ್ಳಿ. ಜೀವನದ ನಿಯಮಗಳು ನಿಮ್ಮ ಕೈಯಲ್ಲೇ ಇರುತ್ತವೆ. ಪ್ರತಿ ವಿಷಯವನ್ನೂ ಶಾಂತತೆಯಿಂದ ಅಂಗೀಕರಿಸಿರಿ. ಸಂತೋಷವಾಗಿ ಇರುವವರು ಯಾವಾಗಲೂ ಎಲ್ಲರಿಂದಲೂ ಪ್ರೀತಿಸಲ್ಪಡುತ್ತಾರೆ. ಸದಾ ಸಂತೋಷದಿಂದ ನಗುವವರಿಗೇ ಅದೃಷ್ಟ ಒಲಿಯುತ್ತದೆ.
೬೦ ಕ್ಕಿಂತ ಕಡಿಮೆ ವಯಸ್ಸಿನ ನನ್ನ ಬಂಧುಗಳೇ…. ದಯವಿಟ್ಟು ತಮಗೆ ತಿಳಿದ ನಿಮ್ಮ ಹಿರಿಯರೊಂದಿಗೆ ಈ ವಿಷಯಗಳನ್ನು ಹಂಚಿಕೊಳ್ಳಿ. ಜೀವನವನ್ನು ಸಂತೋಷದಿಂದ ಕಳೆಯಲು ಇವು ಅತ್ಯಂತ ಉಪಯುಕ್ತವಾದ ಸೂಚನೆಗಳು ಎಂದು ಮನದಟ್ಟು ಮಾಡಿಕೊಳ್ಳಿ.



