ಅಯೋಧ್ಯೆಯಲ್ಲಿ ಶತ ಶತಮಾನಗಳಿಂದ ಜೂಲನೋತ್ಸವ ಸಂಪ್ರದಾಯ ನಡೆದುಕೊಂಡು ಬಂದಿದೆ. ಜೂಲನೋತ್ಸವ ಎಂದರೆ ಉಯ್ಯಾಲೆ ಪಲ್ಲಕ್ಕಿ ಸೇವೆ. ಶ್ರಾವಣ ಮಾಸದ ಪಂಚಮಿಯಿಂದ ಹುಣ್ಣಿಮೆವರೆಗೂ ಅಯೋಧ್ಯೆಯ ದೇವಾಲಯಗಳಲ್ಲಿ ಜೂಲನೋತ್ಸವ ನಡೆಯಲಿದೆ. ಆ ದಿನ ವಾಡಿಕೆಯಂತೆ ಉಯ್ಯಾಲೆ ಪಲ್ಲಕ್ಕಿಯಲ್ಲಿ ಅಯೋಧ್ಯೆಯಲ್ಲಿ ಮೆರವಣಿಗೆಯ ಮೂಲಕ ಶ್ರೀರಾಮನ ಜನ್ಮಸ್ಥಾನ ಪ್ರದೇಶಕ್ಕೆ ಕೊಂಡೊಯ್ಯುವ ಪರಿಪಾಠವಿದ್ದು ಈ ವರ್ಷವೂ ಜೂಲನೋತ್ಸವದಂದು ಚಿನ್ನದ ಉಯ್ಯಾಲೆ ಪಲ್ಲಕ್ಕಿಯಲ್ಲಿ ನಡೆಸಲು ಅಯೋಧ್ಯ ಶ್ರೀರಾಮ ಪ್ರತಿಷ್ಠಾನ ಮತ್ತು ಉತ್ತರ ಪ್ರದೇಶ ಸರ್ಕಾರವು ನಿರ್ಧರಿಸಿದ್ದು ಎರಡು ೨ ಭವ್ಯ ಚಿನ್ನದ ಉಯ್ಯಾಲೆಗಳನ್ನು ತಮಿಳುನಾಡಿನ ಚೆನ್ನೆೈನ ಕುಶಲಕರ್ಮಿಗಳು ಬಹಳ ಸೂಕ್ಷ್ಮ ಮತ್ತು ಮುತುವರ್ಜಿಯಿಂದ ತಯಾರಿಸುತ್ತಿದ್ದಾರೆ. ಇದರಲ್ಲಿ ಅಡಕಗೊಳಿಸುವ ವಿವಿಧ ವಜ್ರಗಳು, ಮಾಣಿಕ್ಯಗಳು ಮತ್ತು ಪಚ್ಚೆಗಳನ್ನು ಉಯ್ಯಾಲೆಗಳ ಮೇಲೆ ಜೋಡಿಸಲಾಗುತ್ತಿದೆ.
ಈ ಹಿಂದೆ 2021ರಲ್ಲಿ ಜೂಲನೋತ್ಸವ ಸಮಯದಲ್ಲಿ 21 ಕೆ.ಜಿ. ತೂಕದ ಬೆಳ್ಳಿ ಉಯ್ಯಾಲೆಯನ್ನು ಪಲ್ಲಕ್ಕಿ ಸೇವೆ ಮೇಲೆ ಶ್ರೀರಾಮಲಲ್ಲಾ ವಿಗ್ರಹವನ್ನು ಮೆರವಣಿಗೆಯಲ್ಲಿ ತಂದು ಪೂಜಿಸಲಾಗುತ್ತಿದ್ದು ಈ ವರ್ಷದಿಂದ ಸ್ವರ್ಣಜೂಲ (ಉಯ್ಯಾಲೆ)ಯಲ್ಲಿ ಕುಳ್ಳರಿಸಲಾಗಿ ಮೆರವಣಿಗೆಯ ಮೂಲಕ ತಂದು ಸ್ವರ್ಣ ಉಯ್ಯಾಲೆಯ ಶ್ರೀರಾಮನನ್ನು ಶ್ರಾವಣ ಮಾಸದ ಪಂಚಮಿಯಿಂದ ಹುಣ್ಣಿಮೆಯವರೆಗೂ ಅದ್ಧೂರಿ ಮತ್ತು ವಿಜೃಂಭಣೆಯಿಂದ ಶ್ರೀರಾಮ ಶ್ರಾವಣ ಮಾಸದ ಉತ್ಸವಗಳನ್ನು ಆಚರಿಸಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ರಾಮಲಲ್ಲಾ ಮತ್ತು ಮೊದಲ ಮಹಡಿಯಲ್ಲಿ ಚಿನ್ನದ ಉಯ್ಯಾಲೆಯಲ್ಲಿ ಕುಳಿತಿರುವ ಸೀತಾರಾಮರ ದರ್ಶನ ಪಡೆಯಲು ಭಕ್ತರಿಗೆ ಅವಕಾಶವಾಗಲಿದೆ.


