ನಿನ್ನೆ ನೀನು ನನ್ನ ಕನಸು
ಇಂದು ನೀನು ಧರಗಿಳಿದ ನನಸು
ನೀನಿತ್ತ ಆ ಮುಗುಳ್ ನಗೆಯ ಸೊಗಸು
ಸೋನೆ ಮಳೆಯ ಸದ್ದಿನಂತೆ ಮಿಡಿಯುತಿದೆ ನನ್ನೀ ಮನಸ್ಸು
ಕಾಡಲಿದೆ ನಿನ್ನಂದದ ಕಣ್ಣಂಚಿನ ಮಿಂಚು
ನನ್ನೆದೆಗೆ ನಾಟುವ ಮದನ ಬಾಣದ ಅಂಚು…
ನೀ ದೂರ ಹೋಗದಿರೆ ನನ್ನೀ ಜೀವದ ಕನಸು
ನೀ ಬರುವೆಯೇ ನನ್ನೀ ಬದುಕಿಗೆ ಚಿತ್ತಾರವ ಬಿಡಿಸಿ
ಕನಸಿನ ಕಸಿವಿಸಿ ಪರದೆಯ ಸರಸಿ
ನೀ ಬಂದೇ ಬಿಡುವೆ ವಯ್ಯಾರದ ಮಂದ ಗಾಳಿಯ ಹಾಗೇ
ಹುಣ್ಣಿಮೆ ಸಂಭ್ರಮಕೆ ಸಾಗರ ಅಲೆಗಳ ಹೊಯ್ದಾಟದಂತೆ
ಅಲ್ಲೋ ಇಲ್ಲೋ ಎಲ್ಲೋ ನಿನ್ನೀ ಒಡನಾಟದ ಕಾಲ್ಗೆಜ್ಜೆಯ ಸರಿದಾಡಿದ ಸದ್ದಿನಂತೆ
ನೀ ಬರುವೆ ಮುಂಗಾರ ಮಳೆ ಮೋಡ ಬಿರಿವ ಗಗನದ ಮಿಂಚಿನಂತೆ
-ವಿಜಯ್ ಬೆಂಗಾವಲಿ


