ಭಾರತ ಇಂಗ್ಲೆಡ್ ಸರಣಿ – ರೋಚಕ ಅಂತ್ಯ

ಭಾರತ ಇಂಗ್ಲೆಡ್ ಸರಣಿ – ರೋಚಕ ಅಂತ್ಯ

ಜುಲೈ 10 ರಿಂದ 14 ರವರೆಗೆ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ 3 ನೇ ಟೆಸ್ಟ್ನಲ್ಲಿ ಭಾರತ ಸೋಲು ಅನುಭವಿಸುವ ಮೂಲಕ ನಿರಾಸೆ ಮೂಡಿಸಿದೆ. ತೀವ್ರ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದ್ದ ಈ ಪಂದ್ಯವನ್ನು ಗೆಲ್ಲಲು ಭಾರತಕ್ಕೆ ಇಂಗ್ಲೆಂಡ್ 192 ರನ್‌ಗಳ ಗುರಿಯನ್ನು ನೀಡಿತ್ತು. ಆದರೆ, ಪಂದ್ಯವನ್ನು ಕೈವಶ ಮಾಡಿಕೊಳ್ಳುವಲ್ಲಿ ಭಾರತ ವಿಫಲವಾಯಿತು. ನಾಲ್ಕನೇ ದಿನದ ಅಂತ್ಯಕ್ಕೆ 54 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಭಾರತ, 170 ರನ್‌ಗಳಿಗೆ ಆಲ್‌ಔಟ್ ಆಗುವ ಮೂಲಕ ಇಂಗ್ಲೆಂಡ್ ವಿರುದ್ಧ ಸೋಲು ಅನುಭವಿಸಿತು.
ಈ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು ಭಾರತವನ್ನು 22 ರನ್‌ಗಳಿಂದ ಸೋಲಿಸಿದೆ. ಸೋಮವಾರ ನಡೆದ ಲಾರ್ಡ್ಸ್ ಟೆಸ್ಟ್ನ ಕೊನೆಯ ದಿನದ ಕೊನೆಯ ಸೆಷನ್‌ನಲ್ಲಿ ಭಾರತ ತಂಡವನ್ನು 170 ರನ್‌ಗಳಿಗೆ ಆಲೌಟ್ ಮಾಡಿದ ಇಂಗ್ಲೆಂಡ್ ಈ ರೋಚಕ ಪಂದ್ಯವನ್ನು ಗೆದ್ದುಕೊಂಡಿತು. ಈ ಗೆಲುವಿನೊಂದಿಗೆ, ಇಂಗ್ಲೆಂಡ್ ಭಾರತ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಇದಕ್ಕೂ ಮೊದಲು, ಬೆನ್ ಸ್ಟೋಕ್ಸ್ ತಂಡವು ಲೀಡ್ ಟೆಸ್ಟ್ನಲ್ಲಿ ಭಾರತವನ್ನು ಐದು ವಿಕೆಟ್‌ಗಳಿಂದ ಸೋಲಿಸಿದರೆ, ಭಾರತ ತಂಡವು ಎರಡನೇ ಟೆಸ್ಟ್ ಪಂದ್ಯವನ್ನು 336 ರನ್‌ಗಳಿಂದ ಗೆದ್ದುಕೊಂಡಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಸೋತರೂ, ತಂಡದ ಗೆಲುವಿಗಾಗಿ ಏಕಾಂಗಿ ಹೋರಾಟ ನಡೆಸಿದ ರವೀಂದ್ರ ಜಡೇಜಾರ ಆಟಕ್ಕೆ ಇಡೀ ವಿಶ್ವ ಕ್ರಿಕೆಟ್ ಸಲಾಂ ಹೊಡೆದಿದೆ.

ಪಂದ್ಯದ ಸ್ಕೋರ್ ವಿವರಗಳು

ಇಂಗ್ಲೆಂಡ್ – 387 & 192
ಭಾರತ – 387 & 170

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ 5ನೇ ಟೆಸ್ಟ್ ಪಂದ್ಯವು ಲಂಡನ್ ನಗರದ ಓವಲ್‌ನಲ್ಲಿ ಆಗಸ್ಟ್ 3 ರಂದು ರೋಚಕ ತಿರುವುಗಳೊಂದಿಗೆ ಭಾರತ ಗೆಲುವಿನ ಹಂತ ತಲುಪಿ ಆನಂದೋತ್ಸವದಲ್ಲಿ ಮುಳುಗಿತು. ಭಾರತ ಮತ್ತು ಇಂಗ್ಲೆಂಡ್ ನಡುವಿನ ಈ ಸರಣಿಯಲ್ಲಿ ೧೮ ಶತಕದ ಜೊತೆಯಾಟಗಳು ದಾಖಲಾಗಿದ್ದು ಇದು 21ನೇ ಶತಮಾನದಲ್ಲಿ ಒಂದೇ ಟೆಸ್ಟ್ ಸರಣಿಯಲ್ಲಿ ದಾಖಲಾದ ಅತಿ ಹೆಚ್ಚು ಶತಕದ ಜೊತೆಯಾಟಗಳ ದಾಖಲೆಯಾಗಿದೆ. ಈ ಮೊದಲು 2003-04 ರಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 17 ಶತಕದ ಜೊತೆಯಾಟಗಳು ನಡೆದಿದ್ದವು. ಈ ಹೊಸ ದಾಖಲೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಸೃಷ್ಟಿಯಾಗಿದೆ. 

ಪಂದ್ಯದ ಸ್ಕೋರ್ ವಿವರಗಳು

ಇಂಗ್ಲೆಂಡ್ – 247 & 367
ಭಾರತ – 224 & 396

    ಓಲ್ಡ್ ಟ್ರಾಂಫೋರ್ಡ್ನಲ್ಲಿ ನಡೆದ ನಾಲ್ಕನೆ ಟೆಸ್ಟ್ ಪಂದ್ಯವು ಮಳೆ ಕಾರಣದಿಂದಾಗಿ ಡ್ರಾದೊಂದಿಗೆ ಮುಕ್ತಾಯವಾಗಿ ಸರಣಿಯ ರೋಚಕತೆಗೆ ಓವಲ್ ಕ್ರೀಡಾಂಗಣಕ್ಕೆ ಅಂತಿಮ ಟೆಸ್ಟ್ಗೆ ಕೊಂಡೊಯ್ಯಿತು. ಆದರೆ ಅನೇಕ ಅನಿರೀಕ್ಷಿತ ಆಟದ ತಿರುವುಗಳ ಪಡೆದ ಅಂತಿಮ ಪಂದ್ಯವು ಭಾರತ ಬೋಲರ್‌ಗಳ ಅತ್ಯದ್ಭುತ ಫಿಂಗ್ ಬೋಲಿಂಗ್‌ನಿಂದಾಗಿ ಇಂಗ್ಲೆಂಡ್ ತಂಡವು 367 ಕ್ಕೆ ಆಲ್‌ಔಟ್ ಆಗುವ ಮೂಲಕ 6 ರನ್‌ಗಳ ಅಂತರದಿಂದ ಸೋಲುಂಡು ವಿಜಯವು ಭಾರತದ ಪರವಾಗಿ ಒಲಿಯಿತು. ಇದರಿಂದ ತೆಂಡೂಲ್ಕರ್ ಅಂಡರ್‌ಸನ್ ಹೆಸರಿನ ಸರಣಿ ಕಪ್ 2-2 ಸಮ ವಿಜಯದೊಂದಿಗೆ ಮುಕ್ತಾಯಗೊಂಡಿತು. ಎರಡೂ ತಂಡಗಳ ಬ್ಯಾಡ್ಸ್ಮನ್ ಮತ್ತು ಬೋಲರ್‌ಗಳು ಅತ್ಯದ್ಭುತವಾಗಿ ಆಟವಾಡಿ ವೀಕ್ಷಕರ ಮತ್ತು ಪ್ರೇಕ್ಷಕರ ಕುತೂಹಲಭರಿತವಾಗಿ ಆಡಿ ಮತ್ತು ಮನಮುಟ್ಟುವಂತೆ ಕ್ರಿಕೆಟ್ ರಸದೌತಣವನ್ನು ಉಣಿಸಿದರು. 

Leave a Reply

Your email address will not be published. Required fields are marked *

Back To Top