ಜಯನಗರಕ್ಕೆ 75ನೇ ಹುಟ್ಟುಹಬ್ಬದ ಶುಭಾಶಯಗಳು!

ಜಯನಗರಕ್ಕೆ 75ನೇ ಹುಟ್ಟುಹಬ್ಬದ ಶುಭಾಶಯಗಳು!

ಜಯನಗರವೆಂಬ ಅದ್ಭುತವಾದ ಲೋಕವು ಆಗಸ್ಟ್ 20, 1948ರಂದು ಪ್ರಾರಂಭವಾಗಿ ಕಳೆದ 75ವರ್ಷಗಳಿಂದ ಬೆಂಗಳೂರಿನ ಅದರಲ್ಲೂ ದಕ್ಷಿಣ ಭಾಗದ ಅತ್ಯಂತ ಸುಂದರ ಸುಪ್ರಸಿದ್ಧ ಮತ್ತು ವಿಶಾಲವಾದ ಬಡಾವಣೆಯಾಗಿ ಈ ಪ್ರದೇಶ ಪರಿವರ್ತನೆಯಾಗಿದ್ದು ಹೇಗೆ?
ಸ್ವಾತಂತ್ರö್ಯ ಬಂದ ಒಂದು ವರ್ಷದ ನಂತರ, ಜಯನಗರವು ಆಗಸ್ಟ್ 20, 1948ರಂದು ಜನಿಸಿತು. ಅಂದಿನ ಬೆಂಗಳೂರು ನಗರದ ಹೊಸ ವಿಸ್ತರಣೆಯ ಸಮಾರಂಭದ ಅಧ್ಯಕ್ಷತೆಯನ್ನು ಸಿ. ರಾಜಗೋಪಾಲಾಚಾರಿ ವಹಿಸಿದ್ದರು, ಅವರು ಆಗತಾನೆ ಜೂನ್ 20ರಂದು ಭಾರತದ ಮೊದಲ ಗವರ್ನರ್ ಜನರಲ್ ಆಗಿ ಅಧಿಕಾರ ಸ್ವೀಕರಿಸಿದ್ದರು. ಮೂಲತಃ ಕನಕನಪಾಳ್ಯ ಹಳ್ಳಿಯ ವಿಸ್ತರಣೆ ಎಂದು ಕರೆಯಲ್ಪಡುತ್ತಿದ್ದ ಇದನ್ನು ಜಯಚಾಮರಾಜೇಂದ್ರ ಒಡೆಯರ್ ಅವರ ನಂತರ ಜ್ಞಾಪಕಾರ್ತವಾಗಿ ಮರುನಾಮಕರಣ ಮಾಡಲಾಯಿತು.
ನಗರಕ್ಕೆ ಹೊಸ ವಿಸ್ತರಣೆ ಏಕೆ ಬೇಕಿತ್ತು? ಎಂಬ ಪ್ರಶ್ನೆಗೆ ಆಗಾಗಲೇ ಮಲ್ಲೇಶ್ವರಂ ಮತ್ತು ಬಸವನಗುಡಿ ನಿರ್ಮಾಣವಾಗಿ 50ವರ್ಷಗಳಿಗೂ ಹೆಚ್ಚು ಕಾಲ ಕಳೆದಿದ್ದು ಜನಸಾಂದ್ರತೆಯಿಂದ ವಸತಿ ಕೊರತೆ ಉಂಟಾಗಿತ್ತು. ಮತ್ತು ನಗರ ಸುಧಾರಣಾ ಟ್ರಸ್ಟ್ ಬೋರ್ಡ್ (ಅIಖಿಃ) ಸಿದ್ದಾಪುರ, ಬೈರಸಂದ್ರ, ಮಾರೇನಹಳ್ಳಿ, ತಾಯಪ್ಪನಹಳ್ಳಿ ಮತ್ತು ಯಡಿಯೂರು ಮುಂತಾದ ಗ್ರಾಮಗಳ ಸುತ್ತಮುತ್ತಲಿನ 1600ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ನಗರದ ದಕ್ಷಿಣ ಗಡಿಯನ್ನು ವಿಸ್ತರಿಸಲು ಅಂದಿನ ಸರ್ಕಾರವು ನಿರ್ಧರಿಸಿತು. ಹಳೆಯ ವಿಲ್ಸನ್‌ಗಾರ್ಡನ್ (ಶಾಂತಿನಗರ)ದಲ್ಲಿ ವಾಸಿಸುತ್ತಿದ್ದ ವಾಸ್ತುಶಿಲ್ಪಿ ಪಿ.ಎಸ್. ರಂಗನಾಥಾಚಾರ್‌ರವರು ಉದ್ಘಾಟನೆಗಾಗಿ ಅಶೋಕ ಸ್ತಂಭವನ್ನು ವಿನ್ಯಾಸಮಾಡಿ ನಿರ್ಮಿಸಿದರು. ಮತ್ತು ಅಂದಿನ ಅIಖಿಃ ಯ ಎಂಜಿನಿಯರ್ ಅಧಿಕಾರಿ ಆರ್. ಮಾಧವನ್‌ರವರು ಜಯನಗರ ಬಡಾವಣೆಯ ವಿಸ್ತರಣೆಯ ವಿನ್ಯಾಸದ ಉಸ್ತುವಾರಿ ವಹಿಸಿದ್ದರು. (ನಂತರ ಮಾಧವನ್ ಪಾರ್ಕ್ ಅನ್ನು ಅವರ ಹೆಸರಿಡಲಾಗಿದೆ)
ಈ ವಿಸ್ತರಣೆಯ ರಸ್ತೆ ಅಭಿವೃದ್ಧಿ ಮತ್ತು ಭೂಸ್ವಾಧೀನಕ್ಕೆ ರೂ.1.25ಕೋಟಿ ಅಂದಾಜು ವೆಚ್ಚದಲ್ಲಿ 6000ನಿವೇಶನಗಳನ್ನು ಹೊಂದಲು ಯೋಜಿಸಲಾಗಿತ್ತು. ಜಯನಗರದಲ್ಲಿ ಸರಾಸರಿ ನಿವೇಶನದ ಗಾತ್ರ 30x 40ಗಳಷ್ಟಿತ್ತು. ಉದ್ಘಾಟನೆಯ ಸಮಯದಲ್ಲಿ ಭೂಸ್ವಾಧೀನಪಡಿಸಿಕೊಂಡಿದ್ದ ಎಕರೆಗಳ ಜಮೀನನ್ನು ನಿವೇಶನಗಳು ಮತ್ತು ಉದ್ಯಾನವನಗಳಿಗಾಗಿ ಮತ್ತು ಉಳಿದ ಭೂಮಿಯನ್ನು ನಾಗರಿಕ ಸೌಲಭ್ಯಗಳಿಗಾಗಿ ಬಳಸಲು ಉದ್ದೇಶಿಸಲಾಗಿತ್ತು. ಬಡಾವಣೆಯ ರಚನೆಗಾಗಿ, ಒಣ ಕೃಷಿ ಭೂಮಿಯನ್ನು ಎಕರೆಗೆ ರೂ.2000ಕ್ಕೆ ಮತ್ತು ಕೃಷಿಯೋಗ್ಯ ಭೂಮಿಯನ್ನು ಎಕರೆಗೆ ರೂ.4000ಕ್ಕೆ ಸ್ವಾಧೀನಪಡಿಸಿಕೊಳ್ಳಲಾಯಿತು. 1950ರಲ್ಲಿ, ಭೂಮಿಯ ಮೌಲ್ಯವು 1ರಿಂದ 3ನೇ ಬ್ಲಾಕ್‌ಗಳಲ್ಲಿ ಪ್ರತಿ ಚದರ ಗಜಕ್ಕೆ ರೂ.3ರಿಂದ ರೂ.6 ಮತ್ತು 4ನೇ ಬ್ಲಾಕ್‌ನಲ್ಲಿ ಪ್ರತಿ ಚದರ ಗಜಕ್ಕೆ ರೂ.7.50ರ ನಡುವೆ ಇತ್ತು. ಮೂಲೆ ನಿವೇಶನಗಳನ್ನು ಪ್ರತಿ ಚದರ ಗಜಕ್ಕೆ ರೂ.15ರಿಂದ ರೂ.25ರ ನಡುವೆ ಮಾರಾಟ ಮಾಡಲಾಯಿತು. ಆ ದರಗಳಲ್ಲಿ 40×60 ಚದರ ಅಡಿ ನಿವೇಶನ (266ಚದರ ಗಜಗಳು) ಬೆಲೆಯು ರೂ.800ರಿಂದ ರೂ.2000ರ ನಡುವೆ ಲಭ್ಯವಿತ್ತು. ಕೃಷಿ ಬಳಕೆಗೆ ಹೊರತುಪಡಿಸಿ, ಆ ಸಮಯದಲ್ಲಿ ಇನ್ನಿತರ ಯಾವುದೇ ಭೂಮಿ ಕೈಗಾರಿಕೆ ಮತ್ತು ಇತರ ಅಭಿವೃದ್ಧಿಗೆ ಬೇಡಿಕೆ ಇರಲಿಲ್ಲ.
ಜಯನಗರಕ್ಕೆ ಆಯ್ಕೆ ಮಾಡಲಾದ ಭೂಮಿ ಸುತ್ತಮುತ್ತಲಿನ ಪ್ರದೇಶಗಳಿಗೆ ಹೋಲಿಸಿದರೆ ಸರಾಸರಿ 50 ರಿಂದ 100ಅಡಿ ಎತ್ತರವಿರುವುದರಿಂದ ಸ್ಥಳಾಕೃತಿಯ ಅನುಕೂಲವನ್ನು ಹೊಂದಿತ್ತು. ನಗರದ ಅನೇಕ ಉನ್ನತ ಪ್ರದೇಶಗಳಂತೆ, ಉದ್ದೇಶಪೂರ್ವಕವಾಗಿ ಅಥವಾ ಬೇರೆ ರೀತಿಯಲ್ಲಿ, ಹೆಚ್ಚಿನ ಎತ್ತರವು ಒಳಚರಂಡಿ, ಗಾಳಿಯ ಹರಿವು ಮತ್ತು ಇತರ ನೈಸರ್ಗಿಕ ಪ್ರಯೋಜನಗಳಿಗೆ ಸಹಾಯ ಮಾಡಿತು.
ಅಶೋಕ ಸ್ತಂಭದ ಬಳಿ ಒಂದು ದೊಡ್ಡ ಪ್ರದೇಶವನ್ನು ನಾಗರಿಕ ಉದ್ಯಾನವನವಾಗಿ ಬಿಡಲಾಯಿತು, ಇದು ಜಯನಗರದ ಆರಂಭವನ್ನು ಗುರುತಿಸಿತು. ಆದಾಗ್ಯೂ, ಅಧಿಕಾರಿಗಳು ಇವುಗಳನ್ನು ದೊಡ್ಡ ಬಂಗಲೆ ನಿವೇಶನಗಳಾಗಿ ಪರಿವರ್ತಿಸಿ ಉನ್ನತ ಅಧಿಕಾರಿಗಳಿಗೆ ಹಂಚಿಕೆ ಮಾಡಿದರು, ಪಕ್ಕದ ಸಿದ್ದಾಪುರವನ್ನು ಕೊಳೆಗೇರಿ ಎಂದು ಪರಿಗಣಿಸಲಾಗಿದ್ದರೂ ಸಹ, 1950ರ ದಶಕದ ಆರಂಭದಲ್ಲಿ, ಮೈಸೂರು ಸರ್ಕಾರವು ವಿಭಜನೆಯಿಂದ ಸ್ಥಳಾಂತರಗೊಂಡ ಜನರಿಗೆ ಸಹಾಯ ಮಾಡಲು ನಿರಾಶ್ರಿತರ ವಸತಿ ಯೋಜನೆಗಾಗಿ ಜಯನಗರದಲ್ಲಿ ೨೦೦ ನಿವೇಶನಗಳನ್ನು ಕಾಯ್ದಿರಿಸಿತು. ಭಾರತ ಸರ್ಕಾರವು ಈ ಉದ್ದೇಶಕ್ಕಾಗಿ ರೂ.4.8 ಲಕ್ಷಗಳನ್ನು ಕೊಡುಗೆ ನೀಡಿತು ಆದರೆ ಕೊನೆಯಲ್ಲಿ ಅಂತಹ 53 ಮನೆಗಳನ್ನು ಮಾತ್ರ ನಿರ್ಮಿಸಲಾಯಿತು ಮತ್ತು ಉಳಿದವುಗಳನ್ನು ಸ್ಥಗಿತಗೊಳಿಸಲಾಯಿತು. ಆದಾಗ್ಯೂ, ಹೊಸ ವಿಸ್ತರಣೆಯ ಕೆಲವು ಭಾಗಗಳಲ್ಲಿ ಪ್ರಗತಿ ನಿಧಾನವಾಗಿತ್ತು ಮತ್ತು ನೀರಿನ ಸಂಪರ್ಕ ಮತ್ತು ಇತರ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾಮಗಾರಿ 1954 ರವರೆಗೂ ನಡೆಯುತ್ತಲೇ ಇತ್ತು.
1956 ರಲ್ಲಿ, ಜಯನಗರವನ್ನು ಸಿಟಿ ಮಾರ್ಕೆಟ್, ರೈಲ್ವೆ ನಿಲ್ದಾಣ, ರಸೆಲ್ ಮಾರ್ಕೆಟ್ ಮತ್ತು ಗೋಪಾಲಪುರ (ಮಿನರ್ವಾ ಮಿಲ್ಸ್ ಇದ್ದ ಮಾಗಡಿ ರಸ್ತೆಯ ಬಳಿ) ಗೆ ಸಂಪರ್ಕಿಸುವ ಕೇವಲ ನಾಲ್ಕು ಬಸ್ ಮಾರ್ಗಗಳು ಇದ್ದವು. 1963 ರ ಹೊತ್ತಿಗೆ, ಮಲ್ಲೇಶ್ವರಂ ಮತ್ತು ಯಶವಂತಪುರದವರೆಗೆ ಸುಮಾರು ಹತ್ತು ಬಸ್ ಮಾರ್ಗಗಳು ಇದ್ದವು. 1966 ರಲ್ಲಿ ಜಯನಗರ 4 ನೇ ಟಿ ಬ್ಲಾಕ್‌ನಲ್ಲಿ ಬಸ್ ಡಿಪೋ ತೆರೆಯುವುದರೊಂದಿಗೆ ಸಾರ್ವಜನಿಕ ಸಾರಿಗೆಯ ಈ ವಿಸ್ತರಣೆಗೆ ಉತ್ತೇಜನ ದೊರೆಯಿತು.
ಹೊಸದಾಗಿ ಅಭಿವೃದ್ಧಿಪಡಿಸಲಾದ ಜಯನಗರ ಬ್ಲಾಕ್‌ಗಳು ಉತ್ತಮವಾಗಿ ವಿನ್ಯಾಸಗೊಳಿಸಲಾದ ಮುಖ್ಯ ರಸ್ತೆಗಳು ಮತ್ತು ಅಡ್ಡ ರಸ್ತೆಗಳ ಜಾಲವನ್ನು ಹೊಂದಿದ್ದವು, ಹಳೆಯ ಹಳ್ಳಿಗಳು ಅವುಗಳ ಕಿರಿದಾದ ಬೀದಿಗಳು ಮತ್ತು ಗುಡಿಸಲುಗಳೊಂದಿಗೆ ಛೇದಿಸುವ ಸ್ಥಳಗಳನ್ನು ಹೊರತುಪಡಿಸಿ ಇನ್ನಿತರ ರಸ್ತೆಗಳು ಯೋಜನಾಬದ್ಧವಾಗಿದ್ದವು. 1960ರ ದಶಕದ ವೇಳೆಗೆ, ಮೊದಲ ನಾಲ್ಕು ಬ್ಲಾಕ್‌ಗಳಲ್ಲಿ ಹೆಚ್ಚಿನ ಮನೆಗಳನ್ನು ನಿರ್ಮಿಸಲಾಯಿತು ಮತ್ತು ಉಳಿದ ಭಾಗದಲ್ಲಿ ಇನ್ನೂ ಅಷ್ಟಾಗಿ ಅಭಿವೃದ್ಧಿಯಾಗದೆ ವಿರಳವಾಗಿ ಜನಸಂಖ್ಯೆಯನ್ನು ಹೊಂದಿದ್ದವು. 1961ರಲ್ಲಿ, ಮೊದಲ ಮತ್ತು ಎರಡನೇ ಬ್ಲಾಕ್‌ಗಳನ್ನು ಕಾರ್ಪೊರೇಷನ್‌ಗೆ ಸೇರಿಸಿದಾಗ, ಜಯನಗರ 8ನೇ ಬ್ಲಾಕ್ ನಿವಾಸಿಗಳ ಸಂಘವು ಉತ್ತಮ ಆಡಳಿತ ಮತ್ತು ಸೌಲಭ್ಯಗಳನ್ನು ಹೊಂದಬಹುದೆನ್ನುವ ಖಚಿತತೆಗಾಗಿ ಸಿಐಟಿಬಿಯು ತಮ್ಮ ಭಾಗವನ್ನು ಸಹ ಅದೇ ರೀತಿ ನಗರ ಕಾರ್ಪೊರೇಷನ್‌ಗೆ ಸೇರಿಸಬೇಕೆಂದು ಒತ್ತಾಯಿಸಿತು. ಆದರೆ 1967ರ ತಡವಾಗಿಯೂ ಸಹ, ಕೊಳೆಗೇರಿ ನಿರ್ಮೂಲನೆಯ ಭಾಗವಾಗಿ ಜಯನಗರದಲ್ಲಿ ನಿರ್ಮಿಸಲಾದ ಸರ್ಕಾರದ ಫ್ಲಾಟ್‌ಗಳು ಖಾಲಿಯಾಗಿದ್ದವು ಏಕೆಂದರೆ ಅಲ್ಲಿ ನಿವಾಸ ಹಂಚಿಕೆಯಾಗದೆ ಯಾರೂ ಇರಲಿಲ್ಲ!
ಜಯನಗರದಲ್ಲಿ ವಾಸಿಸುತ್ತಿದ್ದ ಜನರು ಮನರಂಜನೆ, ಶಾಪಿಂಗ್ ಮತ್ತು ಶಿಕ್ಷಣಕ್ಕಾಗಿ ಬಸವನಗುಡಿಯಂತಹ ನೆರೆಯ ಪ್ರದೇಶಗಳನ್ನು ಅವಲಂಬಿಸಿದ್ದರು. 1965ರಲ್ಲಿ, ನ್ಯಾಷನಲ್ ಕಾಲೇಜು ತಮ್ಮ ಜಯನಗರ ಶಾಖೆಯನ್ನು ತೆರೆಯಿತು, ಆದರೂ ಅದು ಬಸವನಗುಡಿಯಲ್ಲಿರುವ ಮುಖ್ಯ ಕಾಲೇಜಿಗೆ ಎರಡನೇ ಆಯ್ಕೆ ಎಂದು ಪರಿಗಣಿಸಲಾಗಿತ್ತು. 1969ರ ಸುಮಾರಿಗೆ ಪ್ರಾರಂಭವಾದ ವಿಸ್ತರಣೆಯ ಮೊದಲ ಚಲನಚಿತ್ರ ಮಂದಿರ “ನಂದ” ದೊಂದಿಗೆ ಸ್ಥಳೀಯ ಮನರಂಜನೆಗೆ ಉತ್ತೇಜನ ದೊರೆಯಿತು. ಸಿಟಿ ಸೆಂಟ್ರಲ್ ಲೈಬ್ರರಿ 1968ರಲ್ಲಿ ಸೌತ್ ಎಂಡ್ ವೃತ್ತದ ಬಳಿ ತನ್ನ ಜಯನಗರ ಶಾಖೆಯನ್ನು ತೆರೆಯಿತು. ಆ ಸಮಯದಲ್ಲಿ ದೇಶದಲ್ಲಿ ಖಾಸಗಿಯಾಗಿ ನಡೆಸಲ್ಪಡುತ್ತಿದ್ದ ಕೆಲವೇ ಕೈಗಾರಿಕಾ ಪ್ರದೇಶಗಳಲ್ಲಿ ಒಂದಾದ ಎಂಎಂ ಇಂಡಸ್ಟ್ರಿಯಲ್ ಎಸ್ಟೇಟ್ 1970ರ ಸುಮಾರಿಗೆ ಯಡಿಯೂರು ಪ್ರದೇಶದಲ್ಲಿ ತೆರೆದಾಗ ಅಲ್ಲಿ ಉದ್ಯಮದ ಸ್ಪರ್ಶವೂ ಪ್ರಾರಂಭವಾಯಿತು.
1970ರಲ್ಲಿ, ಜಯನಗರವು ಇನ್ನೂ ಜನಸಾಮಾನ್ಯರಿಗೆ ಕೈಗೆಟುಕುವಂತಹ ಬೆಲೆಗಳಲ್ಲಿ ದೊರಕುತ್ತಿತ್ತು. ಏಕೆಂದರೆ ೪೦x೫೦ ಅಡಿ ಜಾಗವನ್ನು ಕೇವಲ ರೂ.4900ಗೆ ಖರೀದಿಸಬಹುದಾಗಿತ್ತು. ಮತ್ತು 20ಚದರ ಅಡಿ ಮನೆಯನ್ನು ಒಂದು ಲಕ್ಷ ರೂಪಾಯಿಗಿಂತ ಕಡಿಮೆ ಬೆಲೆಗೆ ನಿರ್ಮಿಸಬಹುದಾಗಿತ್ತು.
ಆಧುನಿಕ ವಿನ್ಯಾಸದ ಪ್ರಕಾರ, ಜಯನಗರವನ್ನು ಮಿನಿಕಾಡು ಮತ್ತು ಉದ್ಯಾನವನಗಳಿಗಾಗಿ ಸಾಕಷ್ಟು ಜಾಗವನ್ನು ಕಾಯ್ದಿರಿಸಲಾಗಿದ್ದು, ಸೌತ್ ಎಂಡ್ ರಸ್ತೆಯಿಂದ (ಅಥವಾ ಆಗ ಯೆಡಿಯೂರ್ ಟರ್ಮಿನಸ್ ಎಂದು ಕರೆಯಲಾಗುತ್ತಿತ್ತು) ಹೋಗುವ ರಸ್ತೆಯನ್ನು ಎರಡೂ ಬದಿಗಳಲ್ಲಿ ಮರಗಳಿಂದ ಕೂಡಿದ ಬೌಲೆವಾರ್ಡ್ ಉದ್ಯಾನವನದೊಂದಿಗೆ ಅಭಿವೃದ್ಧಿಪಡಿಸಲಾಯಿತು. ಅಂದಿನ ಸಿಟಿ ಕಾರ್ಪೊರೇಷನ್ ನೇತೃತ್ವ ವಹಿಸಿದ್ದ ಐಎಎಸ್ ಆಡಳಿತಾಧಿಕಾರಿ ಎನ್. ಲಕ್ಷ್ಮಣ್ ರಾವ್‌ರವರ ದೂರದೃಷ್ಟಿ ಮತ್ತು ಯೋಜನಾಬದ್ಧ ಮಾದರಿಯಲ್ಲಿ ಜಯನಗರವನ್ನು ಅಭಿವೃದ್ಧಿಪಡಿಸಲು ಒತ್ತುಮಾಡಲಾಗಿತ್ತು.
ಕಳೆದ 50 ವರ್ಷಗಳಲ್ಲಿ, ಉದ್ಯಾನವನಗಳು ಕೇವಲ ತೆರೆದ ಸ್ಥಳದಿಂದ ಯೋಜಿತ, ನಿರ್ಬಂಧಿತ ಮತ್ತು ಬೇಲಿಯಿಂದ ಸುತ್ತುವರಿದ ಉದ್ಯಾನವನವಾಗಿ ಸಾಕಷ್ಟು ರೂಪಾಂತರಗೊಂಡಿದೆ. ಸಹಜವಾಗಿ, ಬೆಂಗಳೂರಿನಂತಹ ಬೆಳೆಯುತ್ತಿರುವ ನಗರದಲ್ಲಿ ಯಾವುದೇ ತೆರೆದ ಸ್ಥಳವು ‘ಅಭಿವೃದ್ಧಿ’ಯಿಂದ ಸುರಕ್ಷಿತವಾಗಿರಲಿಲ್ಲ. ನಗರಕ್ಕೆ ಕಾವೇರಿ ನೀರನ್ನು ತರುವ ಬೃಹತ್ ನೀರಿನ ಪೈಪ್‌ಗಳನ್ನು 1973 ರಲ್ಲಿ ಉದ್ಯಾನವನದ ನೆಲ ಬಗೆದು ಕೆಳಗೆ ಹಾಕಲಾಯಿತು. ವಾಕಿಂಗ್ ಟ್ರಾö್ಯಕ್‌ಗಳು, ಆಟದ ಉಪಕರಣಗಳು, ಬ್ಯಾಂಡ್‌ಸ್ಟಾö್ಯಂಡ್‌ಗಳು, ತರಕಾರಿ ಮತ್ತು ಹಾಲಿನ ಮಳಿಗೆಗಳಿಗೆ ವಿಸ್ತರಿಸಲು ಉದ್ಯಾನವನದ ಹೆಚ್ಚಿನ ಜಾಗವನ್ನು ಆಕ್ರಮಿಸಿಕೊಂಡು ಹಸಿರು ಭಾಗವನ್ನು ಕಡಿಮೆ ಮಾಡಲಾಯಿತು. ಕಾಲಕ್ರಮೇಣ ಮೆಟ್ರೋ ರೈಲು ವ್ಯವಸ್ಥೆಯು ನಿಲ್ದಾಣಗಳು, ಕಾಂಕ್ರೀಟ್ ಕಂಬಗಳು ಮತ್ತು ವಯಾಡಕ್ಟ್ಗಾಗಿ ಉದ್ಯಾನವನದ ದೊಡ್ಡ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡು ಅಭಿವೃದ್ಧಿಪಡಿಸಲಾಯಿತು. 2009 (ಮೆಟ್ರೋದ ಹಂತ 1) ಮತ್ತು 2016 (ಮೆಟ್ರೋದ ಹಂತ 2) ಎರಡರಲ್ಲೂ, ಹಸಿರು ನಾಶದ ಬಗ್ಗೆ ಧ್ವನಿ ಎತ್ತಿದ್ದ ಸ್ಥಳೀಯ ನಿವಾಸಿಗಳು ಮತ್ತು ಸಂರಕ್ಷಣಾಕಾರರು ಸ್ವಲ್ಪ ಮಟ್ಟಿಗೆ ಹಸಿರು ಉದ್ಯಾನವನದ ನಷ್ಟವನ್ನು ಕಡಿಮೆ ಮಾಡಿದರು ಎಂಬುದು ಒಂದೇ ಒಂದು ಸಮಾಧಾನವಾಯಿತು.
1980ರ ದಶಕದವರೆಗೆ ಹಲವು ವರ್ಷಗಳ ಕಾಲ, ಜಯನಗರವು ಜನದಟ್ಟಣೆಯ ನಗರ ಪ್ರದೇಶಗಳಲ್ಲಿ 300ಕ್ಕೂ ಹೆಚ್ಚು ಜನರಿದ್ದ ಸ್ಥಳಗಳಿಗೆ ಹೋಲಿಸಿದರೆ ಎಕರೆಗೆ 22ಜನರೊಂದಿಗೆ ಅತ್ಯಂತ ಕಡಿಮೆ ಜನಸಂಖ್ಯಾ ಸಾಂದ್ರತೆಯನ್ನು ಜಯನಗರವು ಹೊಂದಿತ್ತು. ಬೆಂಗಳೂರಿನ ಕೇಂದ್ರ ಭಾಗವಾಗಿರುವ 36ಪ್ರದೇಶಗಳಲ್ಲಿ, ಜಯನಗರವನ್ನು (ಜಯನಗರ, ಶಾಕಾಂಬರಿನಗರ, ಪಟ್ಟಾಭಿರಾಮನಗರ) ರೂಪಿಸುವ ಮೂರು ವಾರ್ಡ್ಗಳು ಸಸ್ಯವರ್ಗದ ಪ್ರದೇಶ, ಹಸಿರು ಉದ್ಯಾನವನಗಳ ಸಾಂದ್ರತೆ ಮತ್ತು ಪ್ರತಿ ವ್ಯಕ್ತಿಗೆ ಮರಗಳ ಸಂಖ್ಯೆಯಲ್ಲಿ ಟಾಪ್ ೧೦ರಲ್ಲಿವೆ. ಇವುಗಳಲ್ಲಿ, ವಸಂತ ನಗರ ಮತ್ತು ಕೋರಮಂಗಲದ ನಂತರ ಜಯನಗರ ವಾರ್ಡ್ ಮೂರನೇ ಸ್ಥಾನದಲ್ಲಿತ್ತು.
ಸದಾ ಶಾಂತವಾದ ಬಡಾವಣೆ ಎಂಬ ಕೀರ್ತಿ ಹೊಂದಿದ ಜಯನಗರವು ೮೦ರ ದಶಕದಲ್ಲಿ ನಿವೃತ್ತರ ಪಾಲಿನ ಸ್ವರ್ಗದಂತಿತ್ತು (Peಟಿsioಟಿ oಜಿ Pಚಿಡಿಚಿಜise). ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ನ್ನು 1974ರಲ್ಲಿ ನಿರ್ಮಿಸಲಾಗಿದ್ದರೂ 1985ರ ನಂತರ ಜಯನಗರವು ಒಂದು ಸದ್ದುಗದ್ದಲದ ಸ್ಥಳವಾಯಿತು. ಮೆಜೆಸ್ಟಿಕ್, ಎಂ.ಜಿ.ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಿಗೆ ಪರ್ಯಾ ಶಾಪಿಂಗ್ ತಾಣವಾಗಿ, ಮಾರ್ಪಾಡಾಗಿ ಸಂಜೆ ರಜಾ ದಿನಗಳಲ್ಲಿ ಜನನಿಬಿಡಿತ ಪ್ರದೇಶವಾಗಿ ಮಾರ್ಪಡಿತು.
1990 ರ ದಶಕದ ಹೊತ್ತಿಗೆ, ವಿಸ್ತರಣೆಯಾದ್ಯಂತ ವಾಣಿಜ್ಯ ವ್ಯವಹಾರದ ಅಂಗಡಿಗಳು ಮೊಳಕೆಯೊಡೆದವು. 40 ವರ್ಷಗಳಲ್ಲಿ ಬೆಳವಣಿಗೆ ಕಂಡ ಜಯನಗರದ ಬಡಾವಣೆಯ ವಸತಿ ಆಸ್ತಿ ಬೆಲೆ ಏರಿದಂತೆ ಮುಂದಿನ ಮೊದಲ ಪೀಳಿಗೆ ಉತ್ತರಾಧಿಕಾರಿಗಳು ಆಸ್ತಿ ಹಂಚಿಕೊಂಡ ಕಾರಣ ದೊಡ್ಡ ವಿನ್ಯಾಸದ ನಿವೇಶನಗಳ ಆಸ್ತಿಗಳನ್ನು ಮಾರಾಟ ಮಾಡಲಾಯಿತು. ಅದೇ ಇಂದಿನ ಜಯನಗರ ಕಾಂಪ್ಲೆಕ್ಸ್ 4ನೇ ಬ್ಲಾಕಿನಲ್ಲಿ ಗೀತಾ ಕಾಲೋನಿ ಎಂಬ ವಸತಿ ಪ್ರದೇಶ ಮಾಯವಾಯಿತು. ಎಲ್ಲೆಡೆ ವಸತಿ ಆಸ್ತಿಗಳನ್ನು ವಾಣಿಜ್ಯೀಕರಣಕ್ಕೆ ಪರಿವರ್ತಿಸಲು ಕಾರಣವಾಯಿತು. ಜಯನಗರ 4ನೇ ಬ್ಲಾಕ್‌ನಿಂದ ಪ್ರಾರಂಭಿಸಿ ದೊಡ್ಡ ಮುಖ್ಯ ರಸ್ತೆಗಳು ಮೊದಲು ವಾಣಿಜ್ಯ ವಹಿವಾಟಿನ ತಾಣವಾಗಿ ರೂಪಾಂತರಗೊಂಡವು.
ನಿರಂತರ ಮತ್ತು ಅತಿರೇಕದ ವಾಣಿಜ್ಯೀಕರಣವು ಇಡೀ ಜಯನಗರದ ಭೂದೃಶ್ಯವನ್ನು ಬದಲಾಯಿಸಿ ಕೆಲವೇ ಕೆಲವು ಸ್ಥಳಗಳನ್ನು ಮುಟ್ಟದೆ ಬಿಟ್ಟಿದೆ. ಹಲವಾರು ವಾಣಿಜ್ಯ ಅಂಗಡಿಗಳನ್ನು ಹೊರತುಪಡಿಸಿ, ಬೀದಿ ವ್ಯಾಪಾರಿಗಳು ಪ್ರತಿಯೊಂದು ಬೀದಿಯನ್ನು ಅತಿಕ್ರಮಿಸಿದ್ದಾರೆ. ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ನ ಸುತ್ತಲೂ ಮತ್ತು ಒಳಗೆ ಮಾರಾಟಗಾರರ ಆರ್ಭಟಕ್ಕೆ ಜನರು ಅದರ ಬಳಿಗೆ ಹೋಗುವುದಾದರೂ ಎಷ್ಟು ಕಷ್ಟವೋ ಅಷ್ಟೇ ಅದೃಷ್ಟ. ಅಂದು, ಜಯನಗರವನ್ನು ಅನುಷ್ಟಾನ ಮಾಡಲು ಖರ್ಚು ಮಾಡಿದ ಸಂಪೂರ್ಣ ಮೊತ್ತಕ್ಕೆ ಇಂದು ಯಾವುದೇ ಆಯಾಮದ ಒಂದೇ ಒಂದು ಸೈಟ್ ಅನ್ನು ಖರೀದಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಉಂಟಾಗಿದೆ.
ಎಲ್ಲಾ ಬದಲಾವಣೆಗಳ ಹೊರತಾಗಿಯೂ, ಜಯನಗರ ಇಂದಿಗೂ ಆಕರ್ಷಕವಾಗಿ ಉಳಿದಿದ್ದರೆ, ಅದರ ಶ್ರೇಯಸ್ಸು ಅದನ್ನು ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಿದ ರೀತಿಗೆ ಸಲ್ಲುತ್ತದೆ. ಮಳೆಯ ಸಮಯದಲ್ಲಿ ನಗರದ ಅನೇಕ ಪ್ರದೇಶಗಳು ಮುಳುಗಿದಾಗ, ಮಳೆ ನೀರು ನಿಲ್ಲುವಂತಹ ಯಾವುದೇ ತೊಂದರೆಗಳು ಇಲ್ಲಿ ಉಂಟಾಗುವುದಿಲ್ಲ. ಅತೀ ಹೆಚ್ಚು ಮಳೆ ಬಂದಾಗಿಯೂ ಕೂಡ ಯಾವುದೇ ತೊಂದರೆ ಉಂಟಾಗದೆ ಕಡಿಮೆ ಪರಿಣಾಮ ಬೀರುವ ಪ್ರದೇಶಗಳಲ್ಲಿ ಇಡೀ ಬೆಂಗಳೂರಿಗೆ ಜಯನಗರವು ಒಂದೇ ಒಂದು ಪ್ರದೇಶವಾಗಿದೆ. ಇದು ಪ್ರಾರಂಭದಲ್ಲಿ ಲಕ್ಷ್ಮಣ್‌ರಾವ್‌ರವರ ದೂರದೃಷ್ಟಿಯಿಂದ ಗ್ರಿಡ್ ಸ್ಟ್ರೀಟ್ ಯೋಜನೆ ಅನುಷ್ಠಾನಗೊಳಿಸಿದ್ದೇ ಕಾರಣವಾಗಿದ್ದು ಅದಕ್ಕೆ ನಾಗರೀಕರೆಲ್ಲರೂ ಧನ್ಯವಾದಗಳು, ಸಂಚಾರ ಸಮಸ್ಯೆಗಳು ಸಹನೀಯವಾಗಿದ್ದರೂ ಇದು ಇನ್ನೂ ಅವ್ಯವಸ್ಥೆಯ ನಡುವೆ ಸಂಘಟಿತವಾಗಿ ಕಾಣುತ್ತದೆ. ಆದರೆ, ಮಿಲಿಯನ್ ಡಾಲರ್/ರೂಪಾಯಿ ಪ್ರಶ್ನೆ ಏನೆಂದರೆ ಅದು ಎಷ್ಟು ಕಾಲ ಈ ವ್ಯವಸ್ಥೆ ಉಳಿಯುತ್ತದೆ ಎಂಬುದು.

Leave a Reply

Your email address will not be published. Required fields are marked *

Back To Top