ಭಾರತದ ಮೊದಲ ಸಂಪೂರ್ಣ ಯುಪಿಐ ಆಧಾರಿತ ಬ್ಯಾಂಕ್ ಬೆಂಗಳೂರಿನಲ್ಲಿ ಆರಂಭ
ಭಾರತದ ಮೊದಲ ಸಂಪೂರ್ಣ ಯುಪಿಐ (ಯುನಿಫೈಡ್ ಪೇಮೆಂಟ್ ಇಂಟರ್‌ಪೇಸ್ ಅಥವಾ ಏಕೀಕೃತ ಪಾವತಿ ಸಂಪರ್ಕ ವ್ಯವಸ್ಥೆ) ಆಧಾರಿತ ಬ್ಯಾಂಕ್ ಶಾಖೆಯನ್ನು ಬೆಂಗಳೂರಿನ ಕೋರಮಂಗಲದಲಿ ಫಿನ್‌ಟೆಕ್ ಸಂಸ್ಥೆ ಸ್ಲೆೈಸ್ ಆರಂಭಿಸಿದೆ. ಯುಪಿಐ ಇಂಟಿಗ್ರೇಟೆಡ್ ಎಟಿಎಂ, ಇನ್‌ಸ್ಟಾಂಟ್ ಅಕೌಂಟ್ ಓಪನಿಂಗ್, ನಗದು ವಹಿವಾಟು ಸೇರಿದಂತೆ ಸಂಪೂರ್ಣ ಡಿಜಿಟಲ್ ಬ್ಯಾಂಕಿಂಗ್ ಅನುಭವ ಇಲ್ಲಿ ಸಿಗಲಿದೆ. ಅಂದ ಹಾಗೆ, ಈ ಬ್ರಾಂಚ್ ನಲ್ಲಿ ವಹಿವಾಟು ನಡೆಸಲು ಡೆಬಿಟ್ ಕಾರ್ಡ್ ಸಹ ಬೇಕಾಗಿಲ್ಲ. ಯುಪಿಐ ಕ್ಯೂಆರ್ ಕೋಡ್ ಇದ್ದರೆ ಸಾಕು!
ಬೆಂಗಳೂರಿನ ಬ್ಯಾಂಕಿಂಗ್ ಕ್ಷೇತ್ರದ ಅತ್ಯಾಧುನಿಕ ತಂತ್ರಜ್ಞಾನಕ್ಕೆ ಇದೀಗ ಮತ್ತೊಂದು ಹೊಸ ಸೇರ್ಪಡೆಯಾಗಿದೆ. ಕೋರಮಂಗಲದಲ್ಲಿ ಸ್ಲೆೈಸ್ ಫಿನ್‌ಟೆಕ್ ಸಂಸ್ಥೆ ಭಾರತದ ಮೊದಲ ಸಂಪೂರ್ಣ ಯುಪಿಐ (ಯುನಿಫೈಡ್ ಪೇಮೆಂಟ್ ಇಂಟರ್‌ಪೇಸ್ ಅಥವಾ ಏಕೀಕೃತ ಪಾವತಿ ಸಂಪರ್ಕ ವ್ಯವಸ್ಥೆ)ಆಧಾರಿತ ಬ್ಯಾಂಕ್ ಶಾಖೆಯನ್ನು ತೆರೆದಿದೆ. ಯುಪಿಐ ಮೂಲಕ ತ್ವರಿತ ಖಾತೆ ತೆರೆಯುವಿಕೆ, ನಗದು ವಹಿವಾಟು ಮತ್ತು ರೋಬೋಟ್ ಸಹಾಯಕ ಸೇವೆಗಳು ಶಾಖೆಯಲ್ಲಿ ಲಭ್ಯವಿದೆ. ಡೆಬಿಟ್ ಕಾರ್ಡ್ ಇಲ್ಲದೆಯೇ ಯುಪಿಐ ಆ್ಯಪ್ ಸಹಾಯದಿಂದಲೇ ಬ್ಯಾಂಕಿಂಗ್ ವಹಿವಾಟು ನಡೆಸಬಹುದಾಗಿದೆ.
ಕೋರಮಂಗಲದ 80 ಅಡಿ ರಸ್ತೆಯಲ್ಲಿರುವ ಈ ಶಾಖೆಯು ಕಾರ್ಡ್ಗಳ ಬದಲಿಗೆ ಯುಪಿಐ ಆ್ಯಪ್ ಬಳಸಿ ಹಣವನ್ನು ಠೇವಣಿ ಇಡಲು ಮತ್ತು ಹಿಂಪಡೆಯಲು ಅನುವು ಮಾಡಿಕೊಡುತ್ತದೆ. ಈ ವ್ಯವಸ್ಥೆಯು ಡಿಜಿಟಲ್ ಕಿಯೋಸ್ಕ್ಗಳನ್ನು ಒಳಗೊಂಡಿದೆ. ಗ್ರಾಹಕರು ಟ್ಯಾಬ್ಲೆಟ್‌ಗಳನ್ನು ಬಳಸಿಕೊಂಡು ಉಳಿತಾಯ ಖಾತೆಗಳನ್ನು ತೆರೆಯಬಹುದಾಗಿದೆ. ಶಾಖೆಯ ಆವರಣದೊಳಗೆ ಗ್ರಾಹಕರಿಗೆ ಮಾರ್ಗದರ್ಶನ ನೀಡಲು ಸಹಾಯ ಮಾಡುವ ರೋಬೋಟ್ ಸಹ ಒದಗಿಸಲಾಗಿದೆ. ಹೊಸ ಮಾದರಿಯ ಬ್ಯಾಂಕ್ ಶಾಖೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಹಲವಾರು ಬಳಕೆದಾರರು ಯುಪಿಐ ಆಧಾರಿತ ಸೆಟಪ್‌ನ ಅನುಕೂಲತೆ ಮತ್ತು ವೇಗದ ಬ್ಯಾಂಕಿಂಗ್ ಸೇವೆಯನ್ನು ಶ್ಲಾಘಿಸಿದ್ದಾರೆ.
ಪ್ರಾಯೋಗಿಕವಾಗಿ ಈ ಯುಪಿಐ ಆಧಾರಿತ ಹೊಸ ಶಾಖೆಯನ್ನು ಆರಂಭಿಸಲಾಗಿದೆ. ಶಾಖೆಗೆ ಭೇಟಿ ನೀಡುವ ಗ್ರಾಹಕರು ಕನಿಷ್ಠ ಮಾನವ ಸಂವಹನ ಮತ್ತು ಪೂರ್ಣ ಪ್ರಮಾಣದಲ್ಲಿ ಯುಪಿಐ ನೆರವಿನೊಂದಿಗೆ ನಗದು ಠೇವಣಿ ಇರಿಸುವಿಕೆ, ಹಿಂಪಡೆಯುವಿಕೆ ಮತ್ತು ಖಾತೆ ಸೆಟಪ್‌ನಂತಹ ಮೂಲಭೂತ ಬ್ಯಾಂಕಿಂಗ್ ಸೌಕರ್ಯಗಳನ್ನು ಪಡೆಯಬಹುದಾಗಿದೆ ಎಂದು ಸ್ಲೆೈಸ್ ತಿಳಿಸಿದೆ.
ಯುಪಿಐ-ಲಿಂಕ್ಡ್ ಕ್ರೆಡಿಟ್ ಕಾರ್ಡ್ ಅನ್ನು ಸಹ ಬಿಡುಗಡೆ ಮಾಡಿರುವುದಾಗಿ ಸ್ಲೆೈಸ್ ತಿಳಿಸಿದ್ದು, ಇದು ಯಾವುದೇ ವಾರ್ಷಿಕ ಅಥವಾ ಸೇರ್ಪಡೆ ಶುಲ್ಕವಿಲ್ಲದೆ ಗ್ರಾಹಕರಿಗೆ ದೊರೆಯಲಿದೆ ಎಂದಿದೆ. ಕಾರ್ಡ್ ಖರೀದಿ ಮೇಲೆ ಶೇಕಡ 3ವರೆಗೆ ಕ್ಯಾಶ್‌ಬ್ಯಾಕ್ ಮತ್ತು ಪಾವತಿಗಳನ್ನು 3 ಬಡ್ಡಿ-ಮುಕ್ತ ಇಎಂಐಗಳಾಗಿ ಮಾಡಿಕೊಡುವ `ಸ್ಲೆೈಸ್ ಇನ್ 3′ ಸೌಲಭ್ಯ ಕೂಡ ನೀಡಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.
ನಮ್ಮ ಬೆಂಗಳೂರಿನ ಕೋರಮಂಗಲದಲ್ಲಿ ಪ್ರಾರಂಭಿಸಿದೆ. ಫಿನ್‌ಟೆಕ್ ಕಂಪನಿ ಸ್ಲೆೈಸ್ ತನ್ನ ಸ್ಲೆೈಸ್ ಯುಪಿಐ ಕ್ರೆಡಿಟ್ ಕಾರ್ಡ್ ಮತ್ತು ಯುಪಿಐ-ಚಾಲಿತ ಭೌತಿಕ ಬ್ಯಾಂಕ್ ಶಾಖೆಯಲ್ಲಿ ಎಟಿಎಂ ಕೂಡ ಅಳವಡಿಸಲಾಗಿದೆ. ಈ ಎಟಿಎಂ ನಗದು ಸ್ವೀಕರಿಸುತ್ತದೆ. ಇದು ಯಾವುದೇ ಯುಪಿಐ ವಹಿವಾಟಿನಷ್ಟೇ ಸಹಜವಾದ, ಬಳಕೆದಾರರು ಸರಳವಾಗಿ ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡಬಹುದು ಅಥವಾ ಯುಪಿಐ ಪಾವತಿಗಳನ್ನು ಮಾಡಬಹುದು, ತಮ್ಮ ಕ್ರೆಡಿಟ್ ಲೈನ್‌ನಿಂದ ಸುಲಭವಾಗಿ ಹಣವನ್ನು ಬಳಸಬಹುದು. ಸ್ಲೆೈಸ್ ಯುಪಿಐ ಕ್ರೆಡಿಟ್ ಕಾರ್ಡ್ ಎಲ್ಲಾ ಖರ್ಚುಗಳ ಮೇಲೆ ಗ್ರಾಹಕರಿಗೆ ಶೇಕಡ 3ವರೆಗೆ ಕ್ಯಾಶ್‌ಬ್ಯಾಕ್ ನೀಡುತ್ತದೆ, ಆದರೆ ನವೀನ ‘ಸ್ಲೆೈಸ್ ಇನ್ 3’ ವೈಶಿಷ್ಟ÷್ಯವು ಖರ್ಚುಗಳನ್ನು ಮೂರು ಬಡ್ಡಿ-ರಹಿತ ಕಂತುಗಳಾಗಿ ಪರಿವರ್ತಿಸುವ ತಕ್ಷಣದ ಸಾಮರ್ಥ್ಯವನ್ನು ನೀಡುತ್ತದೆ ಎಂಬುದು ಮತ್ತೊಂದು ವಿಶೇಷ.
ಸ್ಲೆೈಸ್ ಸೂಪರ್ ಕಾರ್ಡ್ ಭಾರತದಾದ್ಯಂತ ಔಪಚಾರಿಕ ಕ್ರೆಡಿಟ್ ಪ್ರವೇಶವನ್ನು ವ್ಯಾಪಕವಾಗಿ ವಿಸ್ತರಿಸುವ ಸ್ಲೆೈಸ್‌ನ ಮಹತ್ವಾಕಾಂಕ್ಷೆಯ ಯೋಜನೆಯು ಯುಪಿಐ ಆಧಾರಿತವಾಗಿದೆ. ಯುಪಿಐ 400 ದಶಲಕ್ಷಕ್ಕೂ ಹೆಚ್ಚು ಭಾರತೀಯರಿಗೆ ಡಿಜಿಟಲ್ ಪಾವತಿಗಳಲ್ಲಿ ಕ್ರಾಂತಿಯನ್ನು ಉಂಟು ಮಾಡಿದೆ, ಈ ಪ್ರಕ್ರಿಯೆಯಲ್ಲಿ ಅವರಲ್ಲಿ ಹೆಚ್ಚಿನವರನ್ನು ಕ್ರೆಡಿಟ್ ಅರ್ಹರನ್ನಾಗಿ ಮಾಡಿದೆ.
“ನನ್ನ 40 ವರ್ಷಗಳ ಬ್ಯಾಂಕಿಂಗ್ ಸೇವೆಯಲ್ಲಿ, ನಾನು ಹಲವಾರು ಮೈಲಿಗಲ್ಲುಗಳನ್ನು ಕಂಡಿದ್ದೇನೆ, ಆದರೆ ಭಾರತವು ಬ್ಯಾಂಕಿಂಗ್ ಮತ್ತು ಹಣಕಾಸು ಸೇವಾ ಸೌಲಭ್ಯಗಳನ್ನು ಹೇಗೆ ಗ್ರಹಿಸುತ್ತದೆ ಎಂಬುದರಲ್ಲಿ ಒಂದು ಕ್ರಾಂತಿ ಎಂದು ನಾನು ಭಾವಿಸುವ ಭಾಗವಾಗಿರುವುದಕ್ಕೆ ನಿಜವಾಗಿಯೂ ಹೆಮ್ಮೆಪಡುತ್ತೇನೆ” ಎಂದು ಸ್ಲೆೈಸ್‌ನ ವ್ಯವಸ್ಥಾಪಕ ನಿರ್ದೇಶಕ (ಎಚಿಡಿ) ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಸತೀಶ್ ಕುಮಾರ್ ಕಲ್ರಾ ಹೇಳಿದರು.
ಬೆಂಗಳೂರಿನಲ್ಲಿ ಈ ಹೊಸ ತಂತ್ರಜ್ಞಾನದ ಸದೃಢ ಹೆಜ್ಜೆಯು ಭಾರತದಾದ್ಯಂತ ಬ್ಯಾಂಕಿನ ಭೌತಿಕ ವಿಸ್ತರಣೆಯ ಪ್ರಯಾಣದಲ್ಲಿ ಮತ್ತು ಅದರ ವ್ಯಾಪಕ ಬೆಳವಣಿಗೆಯ ನಿಟ್ಟಿನಲ್ಲಿ ಒಂದು ನಿರ್ಣಾಯಕ ಆರಂಭವನ್ನು ಗುರುತಿಸುವಲ್ಲಿ ಮೊದಲ ಹೆಜ್ಜೆಯಾಗಿದ್ದು ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗಿ ಗ್ರಾಹಕರ ಮನಸೆಳೆದು ಅನುಕೂಲವಾಗುತ್ತದೆಯೇ ಎನ್ನುವುದು ಕಾದು ನೋಡಬೇಕಿದೆ.



