ವಿವಿಧ ಕಾರ್ಮಿಕ ಸಂಘಟನೆಗಳ ಜೊತೆ ಗುರುತಿಸಿಕೊಂಡಿರುವ 25 ಕೋಟಿಗೂ ಹೆಚ್ಚು ಕಾರ್ಮಿಕರು ಭಾರತ್ ಬಂದ್‌ಗೆ ಕರೆ ನೀಡಿರುವ ಪರಿಣಾಮವಾಗಿ ಬ್ಯಾಂಕಿಂಗ್, ಅಂಚೆ ಹಾಗೂ ಇತರ ಕೆಲವು ಸೇವೆಗಳಿಗೆ ಬುಧವಾವ ಅಡಚಣೆ ಉಂಟಾಗುವ ಸಾಧ್ಯತೆ ಇದೆ.ಕೇಂದ್ರ ಸರ್ಕಾರವು ಹಲವು ನೀತಿಗಳನ್ನು ವಿರೋಧಿಸಿ ಬಂದ್‌ಗೆ ಕರೆ ನೀಡಲಾಗಿದೆ.ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಕೈಬಿಡಬೇಕು, ಗುತ್ತಿಗೆ ಪದ್ಧತಿ ಕೊನೆಗೊಳಿಸಬೇಕು, ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವುದನ್ನು ನಿಲ್ಲಿಸಬೇಕು ಹಾಗೂ ಕನಿಷ್ಠ ವೇತನವನ್ನು ರೂ.೨೬ ಸಾವಿರಕ್ಕೆ ಹೆಚ್ಚಿಸಬೇಕು ಎಂಬ ಬೇಡಿಕೆಯನ್ನು ಸಿಇಟಿಯು, ಐಎನ್‌ಟಿಯುಸಿ […]
ಭೂಸ್ವಾಧೀನ ರದ್ದು ದೇವನಹಳ್ಳಿ ರೈತರ ಪ್ರತಿಭಟನೆಗೆ ಜಯ
ನೇಗಿಲ ಯೋಗಿಗಳ ಹೋರಾಟಕ್ಕೆ ಮಣಿದ ಸರ್ಕಾರ : ಭೂಸ್ವಾಧೀನ ಕೈ ಬಿಟ್ಟ ರಾಜ್ಯ ಸರ್ಕಾರ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಸ್ಥಾಪಿಸಲು ಉದ್ದೇಶಿರುವ ಹೈಟೆಕ್ ರಕ್ಷಣಾ ಮತ್ತು ವೈಮಾಂತರಿಕ್ಷ ಪಾರ್ಕ್ಗಾಗಿ ಜಮೀನು ನೀಡಲು ರೈತರು ಭಾರೀ ಪ್ರತಿಭಟನೆ ನಡೆಸಿ ಅಮರಣಾಂತ ಉಪವಾಸದೊಂದಿಗೆ ವಿರೋಧಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಭೂಸ್ವಾಧೀನ ಕೈ ಬಿಡಲು ನಿರ್ಧರಿಸಿದೆ. ಈ ಮೂಲಕ ಕಳೆದ ಮೂರುವರೆ ವರ್ಷಗಳಿಂದ ನಡೆದಿರುವ ರೈತರ ಹೋರಾಟ ತಾರ್ಕಿಕ ಅಂತ್ಯಕಂಡಿದ್ದು, ಅನ್ನದಾತರ ಆಂದೋಲನಕ್ಕೆ ದೊಡ್ಡ ಗೆಲುವು ಲಭಿಸಿದೆ. ಈ ಹಿನ್ನೆಲೆಯಲ್ಲಿ […]
ಬೆಂಗಳೂರು ಸುರಂಗ ಮಾರ್ಗ – ಟ್ರಾಫಿಕ್ ಜಾಮ್‌ಗೆ ಮುಕ್ತಿಯೆಂದು?
1991 ರಿಂದ ಬೆಂಗಳೂರು ಮಹಾನಗರವು 330 ಕಿ.ಮೀ. ವಿಸ್ತೃತ ರಸ್ತೆ ಜಾಲವು ವಿಸ್ತೀರ್ಣವಾಗುತ್ತ ಅತಿ ಹೆಚ್ಚು ವಾಹನಗಳು ಮತ್ತು ಕೈಗಾರಿಕೆಗಳು ಅಭಿವೃದ್ಧಿ ಹೊಂದುವ ಸಮಯದಿಂದ 2006-07ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾದ ತಕ್ಷಣದಿಂದಲೆ 625 ಚ.ಕಿ.ಮೀ. ವ್ಯಾಪ್ತಿಯ 11,000 ಕಿ.ಮೀ. ರಸ್ತೆಗಳನ್ನು ಹೊಂದಿ 4 ಒಳಭಾಗದ ವರ್ತುಲ ರಸ್ತೆಗಳು ಮತ್ತು 2 ಹೊರಭಾಗದ ಉದ್ದದ ವರ್ತುಲ ರಸ್ತೆಗಳು ಈ 30 ವರ್ಷಗಳಲ್ಲಿ ನಿರ್ಮಾಣವಾಗಿ ಅದಕ್ಕೆ ಹೊಂದಿಕೊಂಡಂತೆ 35 ಕಿ.ಮೀ. ಉದ್ದ ನೈಸ್ ರಸ್ತೆಯಲ್ಲೂ ಪ್ರತಿ ದಿನಕ್ಕೆ 6.5 […]
ಕೆಆರ್‌ಎಸ್‌ನಲ್ಲಿ ಕಾವೇರಿಗೆ ಬಾಗಿನ
ಈ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸುರಿದ ಅಕಾಲಿಕ ಮಳೆ ಮತ್ತು ಕಾವೇರಿ ಉಗಮಸ್ಥಾನ ಕೊಡಗಿನ ಪ್ರದೇಶದಲ್ಲಿ ಜೂನ್ ತಿಂಗಳಲ್ಲಿ ಸುರಿದ ಧಾರಾಕಾರ ಮುಂಗಾರು ಮಳೆಯಿಂದಾಗಿ ಜೂನ್ 30 ಕ್ಕೆ ಮುಂಚೆಯೇ ಕನ್ನಂಬಾಡಿಯ ಕಾವೇರಿ ಕಟ್ಟೆ ಕೃಷ್ಣರಾಜ ಜಲಸಾಗರವು ತುಂಬಿ ತುಳುಕಿ ಉಕ್ಕಿ ಹರಿದು ತಮಿಳುನಾಡಿನ ಮೆಟ್ಟೂರು ಅಣೆಕಟ್ಟಿನಂತ ಮೈದುಂಬಿ ಪ್ರವಹಿಸುತ್ತಿದೆ. ವರ್ಷದ ಮಳೆ ರೈತರ ಮೊಗದಲ್ಲಿ ಹರ್ಷ ತಂದಿದೆ. ಮುಂಗಾರು ಮಳೆಗೆ ಕರ್ನಾಟಕದ ಜೀವನದಿ ಕಾವೇರಿ ತುಂಬಿ ಹರಿಯುತ್ತಿದೆ. ಭರ್ಜರಿ ಮಳೆಗೆ ಅವಧಿಗೂ ಮುನ್ನವೇ […]
ಭೂಸ್ವಾಧೀನ ರದ್ದು ದೇವನಹಳ್ಳಿ ರೈತರ ಪ್ರತಿಭಟನೆಗೆ ಜಯ
ನೇಗಿಲ ಯೋಗಿಗಳ ಹೋರಾಟಕ್ಕೆ ಮಣಿದ ಸರ್ಕಾರ : ಭೂಸ್ವಾಧೀನ ಕೈ ಬಿಟ್ಟ ರಾಜ್ಯ ಸರ್ಕಾರ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಸ್ಥಾಪಿಸಲು ಉದ್ದೇಶಿರುವ ಹೈಟೆಕ್ ರಕ್ಷಣಾ ಮತ್ತು ವೈಮಾಂತರಿಕ್ಷ ಪಾರ್ಕ್ಗಾಗಿ ಜಮೀನು ನೀಡಲು ರೈತರು ಭಾರೀ ಪ್ರತಿಭಟನೆ ನಡೆಸಿ ಅಮರಣಾಂತ ಉಪವಾಸದೊಂದಿಗೆ ವಿರೋಧಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಭೂಸ್ವಾಧೀನ ಕೈ ಬಿಡಲು ನಿರ್ಧರಿಸಿದೆ. ಈ ಮೂಲಕ ಕಳೆದ ಮೂರುವರೆ ವರ್ಷಗಳಿಂದ ನಡೆದಿರುವ ರೈತರ ಹೋರಾಟ ತಾರ್ಕಿಕ ಅಂತ್ಯಕಂಡಿದ್ದು, ಅನ್ನದಾತರ ಆಂದೋಲನಕ್ಕೆ ದೊಡ್ಡ ಗೆಲುವು ಲಭಿಸಿದೆ. ಈ ಹಿನ್ನೆಲೆಯಲ್ಲಿ […]
ಪಶ್ಚಿಮ ಘಟ್ಟಗಳ ಸಂರಕ್ಷಣೆ: ಪ್ರಗತಿ ಮುಖ್ಯವೋ ಪ್ರಕೃತಿ ಮುಖ್ಯವೋ..?
ಯುನೆಸ್ಕೋದ ವಿಶ್ವ ಪಾರಂಪಾರಿಕ ತಾಣಗಳ ಪಟ್ಟಿಯಲ್ಲಿ ಮಹತ್ವದ ಸ್ಥಾನ ಪಡೆದಿರುವ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅಭಿವೃದ್ಧಿ ಮುಖ್ಯವೋ ಅಥವಾ ಪರಿಸರ ಸಂರಕ್ಷಣೆಗೆ ಮುಖ್ಯವೋ ಎಂಬ ಸಂದಿಗ್ಧ ಪ್ರಶ್ನೆ ಉದ್ಭವಿಸಿದೆ. ನಾಗಾಲೋಟದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಅಭಿವೃದ್ಧಿ ಅಗತ್ಯಗಳಿಗೆ ಅನುಗುಣವಾಗಿ ಪರಿಸರ ಸಂರಕ್ಷಣೆ ಮತ್ತು ವಾಣಿಜ್ಯ ಅವಕಾಶಗಳ ಆರ್ಥಿಕ ಅಭಿವೃದ್ಧಿಯ ನಡುವಿನ ಸೂಕ್ಷ÷್ಮ ಸಮತೋಲನವನ್ನು ಕಾಪಾಡಿಕೊಳ್ಳಬೇಕಿದೆ. ಸುಸ್ಥಿರ ಅಭಿವೃದ್ಧಿಯ ಗುರಿಗಳೊಂದಿಗೆ ಪಶ್ಚಿಮ ಘಟ್ಟಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಬೇಕಿದೆ. ಇದು ಸರ್ಕಾರ, ಜನಪ್ರತಿನಿಧಿಗಳು, ಪರಿಸರವಾದಿಗಳು, ಪರಿಸರ ಸಂರಕ್ಷಣಾ ಸಂಸ್ಥೆಗಳು, ಜೀವ […]
ನಿಮ್ಮ ದಿನಬಳಕೆಯ ಸಾಧನಗಳಲ್ಲೇ ಇದೇ ಬೇಹುಗಾರನ ಕಳ್ಳಗಿಂಡಿ …ಹುಷಾರ್ !
ಸ್ಮಾರ್ಟ್ಫೋನ್‌ಗಳಲ್ಲಿ ಕಳ್ಳಗಣ್ಣು-ಕಳ್ಳಗಿವಿಸೈಬರ್ ಕ್ರೆೈಮ್-ಹೈಟೆಕ್ ಯುಗ ಮತ್ತು ಆತ್ಯಾಧುನಿಕ ಮಾನವನಿಗೆ ಸಂಚಕಾರವಾಗಿ ಪರಿಗಣಿಸಿದೆ. ಮಾಧ್ಯಮಗಳಲ್ಲಿ ಇದು ದಿನಿನಿತ್ಯದ ಸುದ್ದಿಗಳಾಗಿ ಕಣ್ಣಿಗೆ ರಾಚುತ್ತವೆ. ಒಂದೆಡೆ ಕಂಪ್ಯೂಟರ್ ಮತ್ತು ಕಂಪ್ಯೂಟರ್ ನೆಟ್‌ವರ್ಕ್ನಲ್ಲಿ ಹ್ಯಾಕರ್‌ಗಳ ಹಾವಳಿ ಹೆಚ್ಚಾಗಿದ್ದರೆ, ಮತ್ತೊಂದೆಡೆ ಮೊಬೈಲ್ ಫೋನ್‌ಗಳಲ್ಲಿ ಹೂಕರ್‌ಗಳ ಕಾಟವೂ ಅವ್ಯಾಹತವಾಗಿ ಕಾಡುತ್ತಿದೆ. ಇಸ್ರೇಲ್ ಮೂಲದ ಪೆಗಾಸಸ್ ಸಾಫ್ಟ್ವೇರ್ ಬಳಸಿ ದೇಶದ ೩೦೦ಕ್ಕೂ ಹೆಚ್ಚು ಗಣ್ಯರು ಮತ್ತು ಪ್ರಭಾವಿಗಳ ಮಾಹಿತಿ ಸಂಗ್ರಹಿಸಿದ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಚರ್ಚೆ, ವಿವಾದ ಮತ್ತು ಪ್ರತಿಭಟನೆಗಳಿಗೂ ಕಾರಣವಾಗಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಸ್ಟಾಕರ್‌ವೇರ್ […]






