ಉದ್ಯಾನನಗರಿ, ಮಾಹಿತಿ ತಂತ್ರಜ್ಞಾನ ನಗರ, ಸಿಲಿಕಾನ್ ಸಿಟಿ ಎಂಬಿತ್ಯಾದಿ ಕೀರ್ತಿಗೆ ಪಾತ್ರವಾಗಿರುವ ನಮ್ಮ ಬೆಂಗಳೂರು ವಿಶ್ವದ ಭೂಪಟದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ನಿರೀಕ್ಷೆಗೂ ಮೀರಿದ ಬೆಳವಣಿಗೆಯಿಂದಾಗಿ ಇಡೀ ಜಗತ್ತು ಬೆಂಗಳೂರನ್ನು ಬೆರಗುಗಣ್ಣುಗಳಿಂದ ನೋಡುವಂತೆ ಮಾಡಿದೆ. ಇಲ್ಲಿ ಮೂಲಸೌಕರ್ಯಗಳು ದೇಶ-ವಿದೇಶಗಳ ಉದ್ಯಮಿಗಳನ್ನು ವಿಶೇಷವಾಗಿ ಆಕರ್ಷಿಸುತ್ತಿವೆ. ವಿಸ್ಮಯನಗರಿ ಬೆಂಗಳೂರಿನ ವೇಗದ ಬೆಳವಣಿಗೆಯು ನಗರದ ಪ್ರಮುಖ ಮೂಲಸೌಕರ್ಯದ ಸಾಮರ್ಥ್ಯವನ್ನು ಮೀರಿ ಬೆಳೆದಿದ್ದು, ರಿಯಲ್ ಎಸ್ಟೇಟ್ ಉದ್ಯಮದ ಅಭಿವೃದ್ಧಿಯು ನಗರದ ಹೊರವಲಯವನ್ನೂ ವಿಸ್ತರಿಸಿ ವ್ಯಾಪಿಸಿದೆ. ಸ್ಯಾಟಲೈಟ್ ಟೌನ್ ರಿಂಗ್‌ರಸ್ತೆ (ಎಸ್‌ಟಿಆರ್‌ಆರ್) ಈಗ ರಿಯಲ್ […]
ವರ್ತುಲ ರೈಲ್ವೆ – ೨೫೦೦ ಎಕರೆ ಭೂಸ್ವಾಧೀನ
ಬೆಂಗಳೂರು ಸುತ್ತಲಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ವರ್ತುಲ ರೈಲ್ವೆ ಯೋಜನೆಗೆ 2500 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಲಾಗಿದೆ. ಕೇಂದ್ರ ರೈಲ್ವೆ ಇಲಾಖೆಯು ಭೂಮಿ ನೀಡಿದವರಿಗೆ ಪರಿಹಾರ ನೀಡಲಿದೆ. ಈ ಯೋಜನೆಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 8 ಪಟ್ಟಣಗಳನ್ನು ರೈಲು ಸಂಪರ್ಕದ ಮೂಲಕ ಬೆಸೆಯಲಿದ್ದು, 287 ಕಿ.ಮೀ. ವಿಸ್ತೀರ್ಣ ಹೊಂದಿರಲಿದೆ. ಮುಂದಿನ 50 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಡಿಪಿಆರ್ ಸಿದ್ಧಪಡಿಸಲಾಗುವುದು ಎಂದು ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.ವರ್ತುಲ ರೈಲ್ವೆ ಯೋಜನೆಗೆ ಬೆಂಗಳೂರು ಸುತ್ತಮುತ್ತಲ ಪ್ರದೇಶಗಳಲ್ಲಿ 2500 ಎಕರೆ ಭೂಸ್ವಾಧೀನ. ಭೂಮಿ […]
ಜುಲೈ ೨೯ ರಂದು ರಾಮಂದಿರದಲ್ಲಿ ಚಿನ್ನದ ಉಯ್ಯಾಲೆ ಸೇವೆ!
ಅಯೋಧ್ಯೆಯಲ್ಲಿ ಶತ ಶತಮಾನಗಳಿಂದ ಜೂಲನೋತ್ಸವ ಸಂಪ್ರದಾಯ ನಡೆದುಕೊಂಡು ಬಂದಿದೆ. ಜೂಲನೋತ್ಸವ ಎಂದರೆ ಉಯ್ಯಾಲೆ ಪಲ್ಲಕ್ಕಿ ಸೇವೆ. ಶ್ರಾವಣ ಮಾಸದ ಪಂಚಮಿಯಿಂದ ಹುಣ್ಣಿಮೆವರೆಗೂ ಅಯೋಧ್ಯೆಯ ದೇವಾಲಯಗಳಲ್ಲಿ ಜೂಲನೋತ್ಸವ ನಡೆಯಲಿದೆ. ಆ ದಿನ ವಾಡಿಕೆಯಂತೆ ಉಯ್ಯಾಲೆ ಪಲ್ಲಕ್ಕಿಯಲ್ಲಿ ಅಯೋಧ್ಯೆಯಲ್ಲಿ ಮೆರವಣಿಗೆಯ ಮೂಲಕ ಶ್ರೀರಾಮನ ಜನ್ಮಸ್ಥಾನ ಪ್ರದೇಶಕ್ಕೆ ಕೊಂಡೊಯ್ಯುವ ಪರಿಪಾಠವಿದ್ದು ಈ ವರ್ಷವೂ ಜೂಲನೋತ್ಸವದಂದು ಚಿನ್ನದ ಉಯ್ಯಾಲೆ ಪಲ್ಲಕ್ಕಿಯಲ್ಲಿ ನಡೆಸಲು ಅಯೋಧ್ಯ ಶ್ರೀರಾಮ ಪ್ರತಿಷ್ಠಾನ ಮತ್ತು ಉತ್ತರ ಪ್ರದೇಶ ಸರ್ಕಾರವು ನಿರ್ಧರಿಸಿದ್ದು ಎರಡು ೨ ಭವ್ಯ ಚಿನ್ನದ ಉಯ್ಯಾಲೆಗಳನ್ನು ತಮಿಳುನಾಡಿನ ಚೆನ್ನೆೈನ […]
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಬಾರ್
ಉತ್ತರ ಪ್ರದೇಶದ ಅಯೋಧ್ಯೆ (Ayodhya)ಯಲ್ಲಿರುವ ರಾಮ ಮಂದಿರದಲ್ಲಿ ಶ್ರೀ ರಾಮನ ಎರಡನೇ ಪ್ರಾಣ ಪ್ರತಿಷ್ಠಾ ಸಮಾರಂಭವು ಮತ್ತು ರಾಮ ದರ್ಬಾರ್ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ತುಂಬಾ ಶ್ರದ್ಧಾಭಕ್ತಿಯಿಂದ ಶಾಸ್ತ್ರೋಕ್ತವಾಗಿ ಜೂನ್ ೩ ರಂದು ನಡೆಯಿತು. ಈ ಪವಿತ್ರ ಸಮಾರಂಭದಲ್ಲಿ ಶ್ರೀರಾಮ ಜನ್ಮಭೂಮಿ ಸಂಕೀರ್ಣದೊಳಗೆ ರಾಜಾ ರಾಮ ಮತ್ತು ಇತರ ದೇವತೆಗಳ ಪ್ರತಿಷ್ಠಾಪನೆ ನಡೆದಿದ್ದು, ಇದೇ ಸಂದರ್ಭದಲ್ಲಿ ರಾಮ ಜನ್ಮಭೂಮಿ ದೇವಸ್ಥಾನದ ಮೊದಲ ಮಹಡಿಯಲ್ಲಿರುವ ರಾಮ ದರ್ಬಾರ್‌ನ ಎಂಟು ದೇವಾಲಯಗಳು, ಪಾರ್ಕೋಟಾ, ಶಿವಲಿಂಗ, ಗಣಪತಿ, ಹನುಮಾನ್, ಸೂರ್ಯ, ಭಗವತಿ […]
ಐಪಿಎಲ್ ಸಂಭ್ರಮ ಮತ್ತು ಸರ್ಕಾರದ ವೈಫಲ್ಯ
ಕನ್ನಡಿಗರ ನಾಡು ಕರ್ನಾಟಕದಲ್ಲಿ ಕ್ರಿಕೆಟ್ ಆಟವನ್ನು ತುಂಬಾ ಪ್ರೀತಿಸುತ್ತಾರೆ ಮತ್ತು ಆದರಿಸುತ್ತಾರೆ. ಅದರಲ್ಲೂ ನಮ್ಮ ಬೆಂಗಳೂರಿನ ಪ್ರತಿಭಾನ್ವಿತ ಕ್ರಿಕೆಟ್ ಕಲಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭೆಯಿಂದ ಭಾರತ ತಂಡವನ್ನು ಪ್ರತಿನಿಧಿಸಿ ಹಲವಾರು ಭಾರತದ ಗೆಲುವಿನ ರುವಾರಿಗಳಾಗಿರುತ್ತಾರೆ. 75 ವರ್ಷಗಳಿಂದಲೂ ವಿಶೇಷವಾಗಿ ಬಿ.ಎಸ್.ಚಂದ್ರಶೇಖರ್, ಬುದ್ಧಿ ಕುಂದರಮ್, ರ‍್ರಪಳ್ಳಿ ಪ್ರಸನ್ನ, ಜಿ.ಆರ್.ವಿಶ್ವನಾಥ್, ಬ್ರಿಜೇಶ್ ಪಟೇಲ್, ರಾಹುಲ್ ದ್ರಾವಿಡ್, ಸುನೀಲ್ ಜೋಶಿ, ಅನಿಲ್ ಕುಂಬ್ಳೆ, ರಾಬಿನ್ ಉತ್ತಪ್ಪ, ಸದಾನಂದ ವಿಶ್ವನಾಥ್, ಸಯ್ಯದ್ ಕರ‍್ಮಾನಿ ಮುಂತಾದ ಕ್ರೀಡಾಪಟುಗಳು ಭಾರತ ತಂಡದಲ್ಲಿ ಪ್ರಜ್ವಲಿಸಿದ್ದು ಇಂದಿಗೂ ಕೆ.ಎಲ್.ರಾಹುಲ್, […]



