Category: ಸಂಗೀತ ಸಮಾರಂಭ

ಸಂಗೀತ ಸಮಾರಂಭ

ಮಳೆಗಾಲದ ಮುದ ನೀಡುವ ರಾಗಗಳು

ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ, ರಾಗ ಅಹಿರ್ ಭೈರವ್ ಹಿಂದೂಸ್ತಾನಿ ಶಾಸ್ತ್ರೀಯ ರಾಗವಾಗಿದ್ದು, ಇದು ಮನಸ್ಸನ್ನು ಶಾಂತಗೊಳಿಸುವ ಮತ್ತು ಧ್ಯಾನಶೀಲ ಗುಣಗಳಿಗೆ ಹೆಸರುವಾಸಿಯಾಗಿದೆ, ಇದು ಹೆಚ್ಚಾಗಿ ಬೆಳಗಿನ ಸಮಯದೊಂದಿಗೆ ಸಂಬಂಧಿಸಿದ್ದು ಇದನ್ನು ಭೈರವ್ ಮತ್ತು ಅಹಿರಿ (ಅಥವಾ ಅಭಿರಿ) ರಾಗಗಳ ಸಂಯೋಜನೆ ಎಂದು ಪರಿಗಣಿಸಲಾಗುತ್ತದೆ, ಪುರಾಣದಲ್ಲಿ ಉಲ್ಲೇಖಿಸಿದಂತೆ ಶ್ರೀ ಕೃಷ್ಣಪರಮಾತ್ಮನೂ ಸ್ವತಃ ಆಲಾಪಿಸಿದ ಪ್ರಮುಖ ರಾಗವೆ ಅಹಿರ್ ಭೈರವ ರಾಗ.

ಸಂಗೀತ ಸಮಾರಂಭ

ಪಿಯು ವಿದ್ಯಾರ್ಥಿನಿ ಅರ್ಚಕರ ಕುಟುಂಬದ ಮೊದಲ ಮಹಿಳಾ ಪುರೋಹಿತೆ ಅನಘ

ದಕ್ಷಿಣ ಕನ್ನಡದ ಅನಘಾ ಭಟ್ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದಾಗಲೇ ತಮ್ಮ ಪುರೋಹಿತರ (ಹಿಂದೂ ಅರ್ಚಕರು) ಕುಟುಂಬದಲ್ಲಿ ಪೌರೋಹಿತ್ಯ ಕರ್ತವ್ಯಗಳನ್ನು ನಿರ್ವಹಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರದಾರದು ಅವರು ತಮ್ಮ ತಂದೆಯೊಂದಿಗೆ ಮದುವೆಗಳನ್ನು ನೆರವೇರಿಸುವಲ್ಲಿ ಮತ್ತು ಇತರ ಧಾರ್ಮಿಕ ವಿಧಿಗಳನ್ನು ನಿರ್ವಹಿಸುವಲ್ಲಿ ಸಹಾಯ ಮಾಡುತ್ತಾರೆ. ಅನಘಾ ಅವರಿಗೆ ತಮ್ಮ ತಂದೆಯಿಂದ ಸಂಸ್ಕöÈತ ಮತ್ತು ವೇದಗಳನ್ನು ಕಲಿಯಲು ಪ್ರೋತ್ಸಾಹ ದೊರೆತಿದೆ, ಅವರು ಋಗ್ವೇದದ 15 ಸೂಕ್ತಗಳನ್ನು ಮತ್ತು ಯಜುರ್ವೇದದ ರುದ್ರಪಾಟವನ್ನು ಕಲಿತಿದ್ದಾರೆ. ಮಹಿಳೆಯರು ಪುರುಷರಿಗೆ ಸರಿ ಸಮಾನವಾಗಿ ಎಲ್ಲ […]

ಸಂಗೀತ ಸಮಾರಂಭ

ಕವನ

ಮೊದಲ ಮಳೆಯ ಸಿಂಚನಕೆ ಅರಳಿ ನಿಂತಿದೆ ಭೂ ವನ ಮೊದಲ ಪ್ರೀತಿ ಸಂಭ್ರಮಕೆ ತೋಯ್ದು ಹೋಯ್ತು ಈ ಮನ ಮಳೆಯು ಗೀಚಿದೆ ಹಸಿರೆಲೆಗಳ ಮೇಲೆ ಹನಿಗವನಗಳ ಸಾಲು, ಈ ಮನದ ತುಂಬೆಲ್ಲಾ ಕನಸುಗಳ ಚಿಗುರು, ಸೋನೆ ಮಳೆಯು ಹನಿಗಳಷ್ಟೇಯಾದರೂ, ಕಾದು ನಿಂತ ಬರಡು ನೆಲಕೆ ಎಂದೂ ಬತ್ತದ ಪ್ರೀತಿಯೊರತೆಯು. ಹನಿಗಳು ಅಷ್ಟೇ ಜೋರು ಮಳೆಯಲ್ಲ ಆದರೂ ಸಾಕು ಜೀವನ ಸವೆಸಲು ನೆನಪುಗಳೇ ಮಧುರ.

ಸಂಗೀತ ಸಮಾರಂಭ

ನಮ್ಮ ಸಂಸ್ಕೃತಿ, ಪರಂಪರೆಯ ಹೆಮ್ಮೆ ಕರ್ನಾಟಕ ಶಾಸ್ತ್ರೀಯ ಸಂಗೀತ

ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಪ್ರಚಲಿತದಲ್ಲಿದ್ದ ಸಂಗೀತ ವ್ಯವಸ್ಥೆಯ ಇತಿಹಾಸವು ವೇದಗಳವರೆಗೆ ತಲುಪುತ್ತದೆ. ಹೊಸ ರೀತಿಯ ಸಂಗೀತ ಅಭಿವ್ಯಕ್ತಿಯ ಅನ್ವೇಷಣೆಯಲ್ಲಿ ಮನುಷ್ಯನ ಪ್ರತಿಭೆ ಎಷ್ಟೊಂದು ಎತ್ತರಕ್ಕೆ ಏರಬಹುದು ಎಂಬುದನ್ನು ಭಾರತೀಯ ಸಂಗೀತ ವ್ಯವಸ್ಥೆಯು ತೋರಿಸುತ್ತದೆ. ಅದರ ಮನರಂಜನಾ ಮೌಲ್ಯದ ಹೊರತಾಗಿ, ಮಾನವಕುಲವನ್ನು ಉದಾತ್ತ ಮಟ್ಟಕ್ಕೆ ಏರಿಸುವ ಗುಣಮಟ್ಟಕ್ಕಾಗಿ ಸಂಗೀತವನ್ನು ಪಾಲಿಸಲಾಯಿತು ಮತ್ತು ಅಭ್ಯಾಸ ಮಾಡಲಾಯಿತು, ಇದು ಆತ್ಮವು ಶಾಶ್ವತ ಆನಂದವನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಪರಿಪೂರ್ಣ ಸ್ವರ ವ್ಯವಸ್ಥೆ ಮತ್ತು ಭಾರತೀಯ ಸಂಗೀತದ ವ್ಯಾಪಕವಾದ ರಾಗ ಮತ್ತು ತಾಳ […]

Back To Top