Category: ಸಾಮಾಜಿಕ ಚರ್ಚೆ

ಸಾಮಾಜಿಕ ಚರ್ಚೆ

ಗ್ರೇಟರ್ ಬೆಂಗಳೂರಿನಲ್ಲಿ 5 ಮಹಾನಗರ ಪಾಲಿಕೆ?

ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ – ಅಕ್ಟೋಬರ್‌ನಿಂದ ಡಿಸೆಂಬರ್ ಒಳಗೆ ಚುನಾವಣೆ ನಿರೀಕ್ಷೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಸರ್ಜಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಗೆ ತೀರ್ಮಾನ ತೆಗೆದುಕೊಂಡಿರುವ ರಾಜ್ಯ ಸರಕಾರ ಇದೀಗ ಅಂತಿಮವಾಗಿ ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ 5 ಮಹಾನಗರ ಪಾಲಿಕೆಗಳನ್ನು ರಚಿಸಲು ಬಹುತೇಕ ಅಂತಿಮ ತೀರ್ಮಾನ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಸರ್ಕಾರದ ನಗರಾಭಿವೃದ್ಧಿ ಇಲಾಖೆಯು 19.07.2025 ರಂದು ಗೆಜೆಟ್ ಅಧಿಸೂಚನೆ ಹೊರಡಿಸಿ ಸಾರ್ವಜನಿಕರು ಮತ್ತು ಸಂಘಸಂಸ್ಥೆಗಳಿಂದ ಸಲಹೆ, ಸೂಚನೆ ಮತ್ತು […]

ಸಾಮಾಜಿಕ ಚರ್ಚೆ

ಹೆಬ್ಬಾಳ ಜಂಕ್ಷನಲ್ಲಿ ಶೀಘ್ರ ಇನ್ನೊಂದು ಹೊಸ ಪಥ

ನಾಗವಾರ ಕಡೆಯಿಂದ ಹೆಬ್ಬಾಳ ಜಂಕ್ಷನ್ ಫ್ಲೆೈ ಓವರ್ ನಿರ್ಮಾಣ – ಸಂಚಾರ ದಟ್ಟಣೆ ನಿವಾರಣೆಗೆ ಕ್ರಮ ಹೆಬ್ಬಾಳ ಜಂಕ್ಷನ್‌ನಲ್ಲಿ ನಾಗವಾರ ಕಡೆಯಿಂದ ಮತ್ತೊಂದು ಹೊಸ ಮೇಲ್ಸೇತುವೆ (ಹೊಸಪಥ) ನಿರ್ಮಿಸಲು ಬಿಡಿಎ ಮುಂದಾಗಿದ್ದು, ಇದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಕಡೆಗೆ ಸಂಚಾರವನ್ನು ಸುಗಮಗೊಳಿಸುವ ಉದ್ದೇಶವನ್ನು ಹೊಂದಿದೆ. ನಾಗವಾರದ ಮೂಲಕ ವಿಮಾನ ನಿಲ್ದಾಣಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಗೆ ನೇರವಾಗಿ ಸಂಪರ್ಕಿಸುವ ಪ್ರಸ್ತಾವಿತ ಮೇಲ್ಸೇತುವೆಯ ಯೋಜನಾ ವರದಿ (ಡಿಪಿಆರ್) ತಯಾರಿಸಲು ಅನುಮತಿ ಈಗಾಗಲೇ ದೊರೆತಿದ್ದು, ಈ ಪ್ರದೇಶದಲ್ಲಿ ಹೆಚ್ಚುತ್ತಿರುವ […]

ಸಾಮಾಜಿಕ ಚರ್ಚೆ

ಮಾಹಿತಿ ಹಕ್ಕು : ಭ್ರಷ್ಟಾಚಾರ ನಿರ್ಮೂಲನೆ ಅಸ್ತ್ರ

ಭಾರತ ಸರ್ಕಾರವು ಮಾಹಿತಿ ಹಕ್ಕು ಕಾಯ್ದೆಯನ್ನು (ಆರ್‌ಟಿಐ) ಜಾರಿಗೊಳಿಸಿ ೧೨ನೇ ಅಕ್ಟೋಬರ್ 2005ರಿಂದ ಅನುಷ್ಠಾನಕ್ಕೆ ಬಂದಿದೆ. ಸಾರ್ವಜನಿಕ ಜೀವನದಲ್ಲಿ ಹೆಚ್ಚು ಪಾರದರ್ಶಕತೆ ಹಾಗೂ ಭ್ರಷ್ಟಾಚಾರ ನಿರ್ಮೂಲನೆಗಾಗಿ ಈ ಕಾಯ್ದೆಯು ಸರ್ಕಾರದಿಂದ ಬಹುತೇಕ ಯಾವುದೇ ಮಾಹಿತಿ ಪಡೆಯುವ ಹಕ್ಕನ್ನು ನಾಗರಿಕರಿಗೆ ಒದಗಿಸುತ್ತದೆ. ಈ ಕಾಯ್ದೆಯ ಹಿಂದೆ ಎರಡು ಉದ್ದೇಶಗಳಿವೆ : ಎಲ್ಲಾ ಭಾರತೀಯರಿಗೆ ಸೂಕ್ತವಾಗಿ ಸರ್ಕಾರದ ಮಾಹಿತಿ ಸಾಮಾನ್ಯ ಜನರಿಗೆ ಲಭಿಸುವಂತೆ ಮಾಡುವುದು ಹಾಗೂ ಆಡಳಿತದಲ್ಲಿ ಹೆಚ್ಚು ಪಾರದರ್ಶಕತೆ ತರುವುದು ಮತ್ತು ಪ್ರತಿ ಸಾರ್ವಜನಿಕ ಅಧಿಕಾರಿ ಜನರಿಗೆ ಉತ್ತರದಾಯತ್ವ […]

ಸಾಮಾಜಿಕ ಚರ್ಚೆ

ಅಭಿವ್ಯಕ್ತಿ ಸ್ವಾತಂತ್ರ ಮೂಲಭೂತ ಹಕ್ಕು

ಭಾರತದ ಇತಿಹಾಸದ ಪುಟಗಳ ಮಧ್ಯ ಆಧುನಿಕ ಭಾರತದ ಅತ್ಯದ್ಭುತ ಅವಿಷ್ಕಾರವೇ ಭಾರತದ ಸಂವಿಧಾನ ಭಾರತ ಸಂವಿಧಾನವು ನಮ್ಮ ರಾಷ್ಟ್ರದ ಹೆಮ್ಮೆ. ಜನರಿಗೆ ಅವರ ಮೂಲಭೂತ ಹಕ್ಕುಗಳು ಮತ್ತು ದೇಶಕ್ಕೆ ಸಂಬಂಧಿಸಿದ ಕರ್ತವ್ಯಗಳನ್ನು ನೀಡುವ ಪ್ರಮುಖ ಚೌಕಟ್ಟನ್ನು ರೂಪಿಸಿ ಕೊಟ್ಟಿರುತ್ತದೆ. ಸಂವಿಧಾನದ ಮುಖ್ಯ ಉದ್ದೇಶ ಜನರ ಮೂಲಭೂತ ಹಕ್ಕುಗಳನ್ನು ರಕ್ಷಿಸುವುದು. ೨೬ ನವೆಂಬರ್ ೧೯೪೯ ರಂದು, ಭಾರತದ ಸಂವಿಧಾನ ಸಭೆಯು ಸಂವಿಧಾನವನ್ನು ಸರ್ವಾನುಮತದಿಂದ ಅಂಗೀಕರಿಸಿ ದೇಶಕ್ಕೆ ಅರ್ಪಿಸಿತು. ಆದಾಗ್ಯೂ, ಇದು ೨೬ ಜನವರಿ ೧೯೫೦ ರಂದು ಜಾರಿಗೆ ತರಲು […]

Back To Top