ಫುಡ್ ಹ್ಯಾಬಿಟ್ಸ್

ಫುಡ್ ಹ್ಯಾಬಿಟ್ಸ್

ಪರಸ್ಪರ ನಿಶಿದ್ಧ ಆಹಾರ ಎಂದರೇನು ಯಾವ ಆಹಾರಗಳು ಪರಸ್ಪರ ನಿಶಿದ್ಧ, ಯಾವ ಆಹಾರವನ್ನು ಸೇವನೆ ಮಾಡಬಾರದು ಎಂದು ತಿಳಿಯೋಣ. ಆರೋಗ್ಯ ಪದ್ಧತಿಯಲ್ಲಿ ಪುರಾತನ ಕಾಲದಿಂದಲೂ ಇಂದಿಗೂ ನಡೆದುಕೊಂಡು ಬಂದಿರುವ ಪದ್ಧತಿ ಎಂದರೆ ಅದು ಆಯುರ್ವೇದ. ಆಯುರ್ವೇದದ ಪ್ರಕಾರ ವಿರುದ್ಧ ಸ್ವಭಾವವಿರುವ ಆಹಾರ ಪದಾರ್ಥಗಳನ್ನು, ಪರಸ್ಪರ ನಿಶಿದ್ಧ, ಅಂದರೆ ವಿರುದ್ಧ ಆಹಾರ ಎಂದು ಕರೆಯುತ್ತಾರೆ, ಈ ಆಹಾರಗಳನ್ನು ಸೇವಿಸಬೇಕಿದ್ದರೆ, ರುಚಿಯಾಗಿದ್ದರೂ, ದೇಹಕ್ಕೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಜೀರ್ಣಶಕ್ತಿ ಕಡಿಮೆಯಾಗಿ. ಜಠರದ ಸಮಸ್ಯೆಗೂ ಕಾರಣ ಆಗುತ್ತವೆ. ಹೊರಗಿನ ವಾತಾವರಣದಲ್ಲಿ ಬೆಂಕಿ ಹೊತ್ತಿಕೊಂಡಾಗ ಬೆಂಕಿಯನ್ನು ಆರಿಸಲು ಹೇಗೆ ನೀರನ್ನು ಬಳಸುತ್ತೇವೋ, ನಮ್ಮ ದೇಹದಲ್ಲಿ ಜೀರ್ಣಕ್ರಿಯೆಯೂ ಇದೇ ರೀತಿ ಕೆಲಸ ಮಾಡುತ್ತದೆ. ಅಂದರೆ, ಹೊರಗಿನ ಬೆಂಕಿಗೆ ನಾವು ಎಣ್ಣೆ ಅಥವಾ ತುಪ್ಪ ಸುರಿದರೆ, ಅದು ಹೇಗೆ ಮತ್ತಷ್ಟು ಹೊತ್ತಿ ಉರಿಯುವುದೋ ಅದೇ ರೀತಿ ನಮ್ಮ ದೇಹದಲ್ಲಿ ಜೀರ್ಣಕ್ರಿಯೆ ಚುರುಕಾಗಿ ನಡೆಯಬೇಕೆಂದು, ಸಮರ್ಪಕವಾದ ಆಹಾರಗಳನ್ನು ಸೇವಿಸಬೇಕು. ಇಲ್ಲದಿದ್ದರೆ ಜೀರ್ಣಕ್ರಿಯೆಯು ನಿಧಾನವಾಗಿ, ದೇಹದಲ್ಲಿ ವಿಷಕಾರಿ ಅಂಶಗಳು ಉತ್ಪತ್ತಿಗೊಂಡು, ಆರೋಗ್ಯ ಹದಗೆಡುತ್ತದ ಹಾಗಾಗಿ ವಿರುದ್ಧ ರೀತಿಯ ಆಹಾರ ಪದಾರ್ಥಗಳನ್ನು ಯಾವತ್ತೂ ಒಮ್ಮೆಲೇ ಸೇವಿಸಬಾರದು.
ಪರಸ್ಪರ/ವಿರುದ್ಧ ನಿಶಿದ್ಧ ಆಹಾರಗಳು

  • ತುಳಸಿಯೊಂದಿಗೆ ಹಾಲು ಸೇವಿಸಬಾರದು.
  • ಸಿಹಿ ಆಹಾರದೊಂದಿಗೆ ಮೂಲಂಗಿ ಮೆಂತೆ ಸೊಪ್ಪು ಸೇವಿಸಬಾರದು.
  • ಹಸಿ ತರಕಾರಿಯೊಂದಿಗೆ ಸಿಹಿ ಪದಾರ್ಥ ಸೇವಿಸಬಾರದು.
  • ನೇರಳೆ ಹಣ್ಣು ತಿಂದಾಗ ಮೊಸರು ಮಜ್ಜಿಗೆ ಸೇವಿಸಬಾರದು.
  • ಹಾಲಿನ ಜೊತೆ ಉಪ್ಪನ್ನು ಸೇವಿಸಬಾರದು.
  • ಬಿಸಿ ಅಡುಗೆ ಹಾಗೂ ತಂಗಳು ಅಡಿಗೆ ಒಟ್ಟಿಗೆ ಸೇವಿಸಬಾರದು.
  • ಮೊಸರು ಮಜ್ಜಿಗೆ ಬೆಣ್ಣೆ ಪಂಚಲೋಹದ ಪಾತ್ರೆಯಲ್ಲಿಟ್ಟು ಸೇವಿಸಬಾರದು.
  • ಜೇನುತುಪ್ಪ ಹಾಗೂ ಹಸಿ ತರಕಾರಿ ಒಮ್ಮೆಲೇ ಯಾವುದೇ ಕಾರಣಕ್ಕೂ ಸೇವಿಸಬಾರದು.
  • ಸಿಹಿ ಆಹಾರದೊಂದಿಗೆ ಈರುಳ್ಳಿ ಸೇವಿಸಬಾರದು.
  • ಮೊಸರು ಮಜ್ಜಿಗೆ ಜೊತೆ ಬಾಳೆಹಣ್ಣು ಎಂದಿಗೂ ಸೇವಿಸಬಾರದು.
  • ಹಸಿ ತರಕಾರಿಯೊಂದಿಗೆ ಬೆಣ್ಣೆ ಸೇವಿಸಬಾರದು.
  • ಅನ್ನದ ಜೊತೆಗೆ ಹಣ್ಣು ತಿನ್ನಬಾರದು.
  • ಮೂಲಂಗಿ ನುಗ್ಗೆಕಾಯಿಯೊಂದಿಗೆ ಹಾಲು ಸೇವಿಸಬಾರದು.
  • ಯಾವುದೇ ಹುಳಿ ಸೇವಿಸಿದ ನಂತರ ಹಾಲನ್ನು ಕುಡಿಯಬಾರದು.
  • ಮಜ್ಜಿಗೆ ಹಾಗೂ ಮೊಸರಿನ ಜೊತೆ ತುಪ್ಪು ಸೇವಿಸಬಾರದು.
  • ಮೂಲಂಗಿ ಮತ್ತು ಉದ್ದಿನ ಬೇಳೆಯನ್ನು ಒಟ್ಟಿಗೆ ಸೇವಿಸಬಾರದು.
  • ಬಾಳೆಹಣ್ಣನ್ನು ಎಂದಿಗೂ ಹಾಲಿನ ಜೊತೆ ಸೇವಿಸುವುದು ಒಳಿತಲ್ಲ.
  • ಮೊಸರು ಮತ್ತು ಚೀಸ್ ಅನ್ನು ಒಟ್ಟಿಗೆ ಸೇವಿಸಬಾರದು ಮಲಬದ್ಧತೆ ಉಂಟಾಗುತ್ತದೆ.
  • ಸಮಪ್ರಮಾಣದಲ್ಲಿ ಜೇನುತುಪ್ಪ ಹಾಗೂ ತುಪ್ಪವನ್ನು ಒಟ್ಟಿಗೆ ಸೇವನೆ ಮಾಡುವುದು ಒಳ್ಳೆಯದಲ್ಲ.
  • ಜೇನುತುಪ್ಪವನ್ನು ಬಿಸಿ ಮಾಡಿ ಸೇವಿಸಬಾರದು.
  • ಚಹಾ ಕುಡಿದ ತಕ್ಷಣ ಮೊಸರನ್ನು ಸೇವಿಸಬಾರದು.
  • ಹುಳಿ ಮತ್ತು ಸಿಹಿ ಹಣ್ಣುಗಳನ್ನು ಒಟ್ಟಿಗೆ ತಿನ್ನಬಾರದು.
  • ಉದ್ದಿನಬೇಳೆ ಮತ್ತು ಮೊಸರನ್ನು ಸೇವಿಸಬಾರದು.
  • ಪೈನಾಪಲ್ ಜೊತೆ ಹಾಲನ್ನು ಸೇವಿಸಬಾರದು.
  • ಚಹಾ ಅಥವಾ ಕಾಫಿಯ ನಂತರ ತಕ್ಷಣ ತಣ್ಣೀರನ್ನು ಸೇವಿಸಬಾರದು.
  • ಜೇನುತುಪ್ಪದ ಜೊತೆ ಮೂಲಂಗಿ ದ್ರಾಕ್ಷಿ ಒಟ್ಟಿಗೆ ತಿನ್ನಬಾರದು
  • ಊಟ ಆದ ತಕ್ಷಣ ಕಾಫಿ ಟೀ ಅಥವಾ ಜ್ಯೂಸನ್ನು ಕುಡಿಯಬಾರದು.
  • ಮಜ್ಜಿಗೆಯ ಜೊತೆ ತುಪ್ಪವನ್ನು ಸೇವಿಸಬಾರದು.
  • ಯಾವುದೇ ಬಿಸಿ ಇರುವ ಆಹಾರವನ್ನು ಜೇನುತುಪ್ಪದ ಜೊತೆ ಸೇವಿಸಬಾರದು.
  • ಖಾರ ಪದಾರ್ಥಗಳನ್ನು ಹಾಲಿನೊಂದಿಗೆ ಸೇವಿಸಬಾರದು.
  • ಕುದಿಯುವ ನೀರಿಗೆ ಜೇನುತುಪ್ಪ ಸೇವಿಸಬಾರದು.
  • ಪಾಯಸದ ಜೊತೆ ಹುಳಿ ಪದಾರ್ಥವನ್ನು ಸೇವಿಸಬೇಡಿ.
  • ಕಡಲೆಕಾಯಿ ತಿಂದ ನಂತರ ನೀರು ಕುಡಿಯಬಾರದು.
  • ಈ ಆಹಾರ ಪದಾರ್ಥಗಳನ್ನು ರುಚಿಗೋಸ್ಕರ ಸೇವಿಸುವುದಾದರೆ, ಅಂದರೆ, ಮೊಸರು ಮತ್ತು ಜೇನುತುಪ್ಪ ಸೇವನೆ ಮಾಡಬಾರದು.
  • ಆದರೆ ಪಂಚಾಮೃತವನ್ನು ಮೊಸರು ಮತ್ತು ಜೇನುತುಪ್ಪವನ್ನು ಸೇರಿಸಿ ತಯಾರಿಸಲಾಗುತ್ತದೆ.
  • ಪಂಚಾಮೃತವನ್ನು ಪ್ರಸಾದದ ರೂಪದಲ್ಲಿ ಹೇಗೆ ಸೇವಿಸುತ್ತೇವೋ ಅದೇ ರೀತಿ ಯಾವಾಗಾದರೂ ಒಮ್ಮೆ ರುಚಿಗೋಸ್ಕರ ಕಡಿಮೆ ಪ್ರಮಾಣದಲ್ಲಿ ಸೇವಿಸಬಹುದು, ಅತಿಯಾದ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ.
  • ಇವೆಲ್ಲವೂ ಪರಸ್ಪರ ನಿಶಿದ್ದ ಆಹಾರಗಳು ಇವುಗಳನ್ನು ಸೇವನೆ ಮಾಡುವುದರಿಂದ ಜೀರ್ಣಶಕ್ತಿ ಹಾಳಾಗಿ, ಜೀರ್ಣಕ್ರಿಯೆ ನಿಧಾನವಾಗುತ್ತದೆ ಇದರಿಂದ ಅಜೀರ್ಣ ಸಮಸ್ಯೆ, ಮಲಬದ್ಧತೆ, ಹೊಟ್ಟೆ ನೋವು ಇನ್ನು ಮುಂತಾದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
  • ಮೇಲೆ ಹೇಳಿದ ಪರಸ್ಪರ ನಿಷಿದ್ಧ ಆಹಾರ ಪದಾರ್ಥಗಳನ್ನು ಗಮನಿಸಿ ದಿನನಿತ್ಯ ಆಹಾರ ಸೇವನೆ ಮಾಡಿದರೆ ನಮ್ಮ ಆರೋಗ್ಯ ಅರ್ಧದಷ್ಟು ಸುಧಾರಿಸುವುದು.

Leave a Reply

Your email address will not be published. Required fields are marked *

Back To Top