ಭಾರತದ ಕ್ಷಿಪಣಿ ಜ್ಞಾನ ಸಂಪತ್ತು ಮತ್ತು ಸಾಧನೆ

ಭಾರತದ ಕ್ಷಿಪಣಿ ಜ್ಞಾನ ಸಂಪತ್ತು ಮತ್ತು ಸಾಧನೆ

ಬ್ರಿಟಿಷ್ ಆಳ್ವಿಕೆಯ ಭಾರತದ ವಿಭಜನೆಯ ನಂತರ, ಎರಡು ಪ್ರತ್ಯೇಕ ರಾಷ್ಟ್ರಗಳು ರೂಪುಗೊಂಡವು, ಭಾರತ (ಹಿಂದೂಗಳ ಪ್ರಾಬಲ್ಯ) ಮತ್ತು ಪಾಕಿಸ್ತಾನ (ಮುಸ್ಲಿಮರ ಪ್ರಾಬಲ್ಯ). ಸ್ವಾತಂತ್ರ್ಯದ ನಂತರ ರಾಜತಾಂತ್ರಿಕ ಸಂಬಂಧಗಳು ಸ್ಥಾಪನೆಯಾದರೂ, ವಿಭಜನೆ ನಂತರ ತಕ್ಷಣದ ಹಿಂಸಾತ್ಮಕ ಘಟನೆಗಳು, ಯುದ್ಧಗಳು, ಭಯೋತ್ಪಾದಕ ದಾಳಿಗಳು ಮತ್ತು ಹಲವಾರು ಪ್ರಾದೇಶಿಕ ವಿವಾದಗಳು ಇನ್ನಷ್ಟು ಜಟಿಲಗೊಳಿಸಿ ಸಂಬಂಧವನ್ನು ಹದಗೆಡಿಸಿದೆ.

1947ರಲ್ಲಿ ಸ್ವಾತಂತ್ರ ಪಡೆದಾಗಿನಿಂದ, ಎರಡೂ ದೇಶಗಳು ಮೂರು ಪ್ರಮುಖ ಯುದ್ಧಗಳನ್ನು, ಒಂದು ಅಘೋಷಿತ ಯುದ್ಧವನ್ನು ಮಾಡಿವೆ ಮತ್ತು ಸಶಸ್ತ್ರ ಕದನಗಳು ಮತ್ತು ಗಡಿಗಳಲ್ಲಿ ಮಿಲಿಟರಿ ನಿಲುಗಡೆಗಳಲ್ಲಿ ಭಾಗಿಯಾಗಿವೆ.1971 ರ ಭಾರತ-ಪಾಕಿಸ್ತಾನ ಯುದ್ಧವನ್ನು ಹೊರತುಪಡಿಸಿ, ಕಾಶ್ಮೀರದ ವಿವಾದವು ಈ ಎಲ್ಲಾ ಸಂಘರ್ಷಗಳ ಪ್ರಮುಖ ಕೇಂದ್ರಬಿಂದುವಾಗಿದೆ, ಇದರ ಪರಿಣಾಮವಾಗಿ ಪೂರ್ವ ಪಾಕಿಸ್ತಾನ (ಈಗ ಬಾಂಗ್ಲಾದೇಶ) ಪ್ರತ್ಯೇಕವಾಯಿತು. 1971ರ ಯುದ್ದದಲ್ಲಿ ಪೂರ್ವ-ಪಶ್ಚಿಮ ಎರಡೂ ಗಡಿಯೊಳಗೆ ಭಾರತದ ಸೈನ್ಯವು ಸಂಪೂರ್ಣವಾಗಿ ಮುನ್ನುಗ್ಗಿ ಡಾಕ, ಕರಾಚಿ ಮತ್ತು ಲಾಹೋರ್ ನಗರಗಳವರೆಗೆ ಕಾದಾಟವಾಗಿ ವಶಪಡಿಸಿಕೊಳ್ಳುವ ಹಂತಕ್ಕೆ ಬಂದು 93 ಸಾವಿರ ಪಾಕಿಸ್ತಾನಿ ಸೈನಿಕರು ಶರಣಾಗತಿ ಕೋರಿ ಭಾರತದ ಮುಂದೆ ಮಂಡಿಯೂರಿದ್ದರು. ಆದರೆ 1971ರ ನಂತರ ದ್ವಿಪಕ್ಷೀಯ ಸಂಬಂಧಗಳನ್ನು ಸುಧಾರಿಸಲು ಹಲವಾರು ಪ್ರಯತ್ನಗಳನ್ನು ಮಾಡಲಾಯಿತು, ಇದು ಸ್ವಲ್ಪ ಮಟ್ಟಿಗೆ ಉದ್ವಿಗ್ನತೆಯನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಯಿತು. ಆದಾಗ್ಯೂ, ಆಗಾಗ್ಗೆ ಭಯೋತ್ಪಾದಕ ದಾಳಿಗಳು ಮತ್ತು ಕದನ ವಿರಾಮ ಉಲ್ಲಂಘನೆಗಳಿಂದಾಗಿ ಈ ಪ್ರಯತ್ನಗಳಿಗೆ ಅಡ್ಡಿಯಾಯಿತು. ನ್ಯಾಯಯುತವಾಗಿ ಭಾರತಕ್ಕೆ ಸೇರಬೇಕಾದ ಕಾಶ್ಮೀರವನ್ನು ತನ್ನದಾಗಿಸಿಕೊಳ್ಳಲು ದೇಶಕ್ಕೆ ಸ್ವಾತಂತ್ರö್ಯ ಬಂದಾಗಿನಿಂದಲೂ ಪಾಕಿಸ್ತಾನ ಅನೇಕ ತಂತ್ರ-ಕುತಂತ್ರಗಳನ್ನು ನಡೆಸುತ್ತಾ ಅಡ್ಡ ಹಾಕುತ್ತಾ ಭಯೋತ್ಪಾದನೆ ಮೂಲಕ ಕಾಶ್ಮೀರ ಮತ್ತು ಭಾರತದ ಆಂತರಿಕ ಭದ್ರತೆಯನ್ನು ಅಭದ್ರಗೊಳಿಸುತ್ತಾ ಬಂದಿದೆಯಾದರೂ ಅದಕ್ಕೆ ದಿಟ್ಟ ಪ್ರತ್ಯುತ್ತರಗಳ ಮೂಲಕ ಭಾರತ ಕಾಲಕಾಲಕ್ಕೆ ಉತ್ತರ ನೀಡುತ್ತಲೇ ಬಂದಿದೆ.

ಶ್ರೀ ನರೇಂದ್ರ ಮೋದಿಯವರು 2014ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೇ ದೇಶ ರಕ್ಷಣೆಗೆ ಹಿಂದೆಂದಿಗಿಂತ ಗರಿಷ್ಠ ಅದ್ಯತೆ ನೀಡಿ ಹಲವಾರು ರಕ್ಷಣಾ ಕ್ರಮಗಳನ್ನು ಕೈಗೊಂಡರು. ಸೇನಾಪಡೆಗಳ (ಭೂಸೇನೆ, ವಾಯುಪಡೆ ಮತ್ತು ನೌಕಾದಳ) ಬಲವರ್ಧನೆ ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಗೆ ಪ್ರತಿ ಬಜೆಟ್‌ನಲ್ಲೂ ಕೋಟಿಗಟ್ಟಲೇ ವಿಶೇಷ ಅನುದಾನ ನೀಡುತ್ತಲೇ ಬಂದಿದ್ದಾರೆ. 35,000 ಕೋಟಿ ರೂ.ಗಳ ವೆಚ್ಚದಲ್ಲಿ ಎಸ್400 ಟ್ರುಯ್ಯಂಪ್ ಸ್ಕ್ವಾರ್ಡೆನ್ಗಳು ಸೇರಿದಂತೆ ಅತ್ಯಂತ ಬಲಿಷ್ಟ ಶಸ್ತ್ರಾಸ್ತ್ರ ಮತ್ತು ರಕ್ಷಣಾ ಸಾಧನಗಳು ಭಾರತೀಯ ಸೇನಾಪಡೆಗಳ ಬತ್ತಳಿಕೆಗೆ ಸೇರಿವೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ), ಸಂಶೋಧನೆ ಮತ್ತು ವಿಶ್ಲೇಷಣೆ ಘಟಕ (ರಾ), ಎಚ್‌ಎಎಲ್ ಸೇರಿದಂತೆ ರಕ್ಷಣಾ ಉಪಕರಣಗಳು ಮತ್ತು ಅತ್ಯಾಧುನಿಕ ಯುದ್ಧ ವಿಮಾನಗಳ ನಿರ್ಮಾಣಕ್ಕೆ ಹೆಚ್ಚಿನ ಅದ್ಯತೆ ನೀಡಿದ್ದಾರೆ. ಕಳೆದ 11 ವರ್ಷಗಳಲ್ಲಿ ಭಾರತೀಯ ಸೇನೆ ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಪಡೆಗಳಲ್ಲೊಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಭಾರತದ ವಿರುದ್ಧ ಸದಾ ಹಗೆತನ ಸಾಧಿಸುತ್ತಿರುವ ಶಕುನಿ ಪಾಕಿಸ್ತಾನದ ನೂರಾರು ಡ್ರೋಣ್ ಮತ್ತು ಕ್ಷಿಪಣಿಗಳಿಂದ ಭಾರತದ 15ಕ್ಕೂ ಹೆಚ್ಚು ನಗರಗಳು ಮತ್ತು ಲಕ್ಷಾಂತರ ಭಾರತೀಯರನ್ನು ರಕ್ಷಿಸುವಲ್ಲಿ ಆಕಾಶ್ ಕ್ಷಿಪಣಿಯ ಸೃಷ್ಟಿಕರ್ತ ಡಾ. ಪ್ರಹ್ಲಾದ್ ರಾಮರಾವ್ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ)ಯ ಮಾಜಿ ವಿಜ್ಞಾನಿ ಮತ್ತು ಹೆಮ್ಮೆಯ ಕನ್ನಡಿಗ.
ಪಾಕಿಸ್ತಾನದಿಂದ ತೂರಿಬಂದ ಅಪಾಯಕಾರಿ ಡ್ರೋಣ್‌ಗಳು ಮತ್ತು ಕ್ಷಿಪಣಿಗಳನ್ನು ನಿಗ್ರಹಿಸಿದ ಆಕಾಶ್ ಕ್ಷಿಪಣಿ ೆ್ಥ ಮತ್ತು ಎಸ್*400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ವಹಿಸಿದ ಪಾತ್ರವನ್ನು ಭಾರತೀಯರು ಮರೆಯುವುದಿಲ್ಲ. ವೈರಿಗಳ ದುರಾಕ್ರಮಣದಿಂದ ಭಾರತವನ್ನು ಮತ್ತು ಪ್ರಜೆಗಳನ್ನು ರಕ್ಷಿಸುವಲ್ಲಿ ಆಕಾಶ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯು ಅತ್ಯಂತ ಸಮರ್ಥ ರೀತಿಯಲ್ಲಿ ಕಾರ್ಯನಿರ್ವಹಿಸಿದೆ. ಇದರ ರೂವಾರಿ ಭಾರತದ ‘ಕ್ಷಿಪಣಿ ಮಾನವ’ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಪ್ರಹ್ಲಾದ್ ರಾಮರಾವ್.

ಮೇ 8 ಮತ್ತು 9 ರಂದು ಭಾರತೀಯ ನಗರಗಳಿಗೆ ಪಾಕಿಸ್ತಾನಿ ಡ್ರೋನ್‌ಗಳು ಮತ್ತು ಕ್ಷಿಪಣಿಗಳು ಭಾರೀ ಗಂಡಾಂತರವನ್ನು ತಂದೊಡ್ಡಿದ್ದವು. ಆದರೆ 15 ವರ್ಷಗಳ ಹಿಂದೆ ಅಭಿವೃದ್ಧಿಪಡಿಸಲಾದ ಅತ್ಯಂತ ಸಮರ್ಥ ಕ್ಷಿಪಣಿ ವ್ಯವಸ್ಥೆಯು ಅಪಾಯವನ್ನು ನಿಗ್ರಹಿಸಿದಲ್ಲದೇ ಭವ್ಯ ರಕ್ಷಣಾ ಗೋಡೆಯಾಗಿ ದೇಶ ರಕ್ಷಣೆಗೆ ನಿಂತಿತು. ವೈಮಾನಿಕ ದಾಳಿಯ ವಿರುದ್ಧ ಭಾರತದ ಗುರಾಣಿಯಾದ ‘ಆಕಾಶ್’ ಭೂಮಿಯಿಂದ ಆಗಸಕ್ಕೆ ಚಿಮ್ಮಿ ಶತ್ರುಗಳ ಆಕ್ರಮಣವನ್ನು ಭೇದಿಸುವ ಕ್ಷಿಪಣಿ ವ್ಯವಸ್ಥೆಯಾಗಿ ಮುಂಚೂಣಿಯಲ್ಲಿತ್ತು, ಶತ್ರುಗಳ ಬೆದರಿಕೆಗಳನ್ನು ನಿಖರವಾಗಿ ಪ್ರತಿಬಂಧಿಸಿ ಗಂಡಾಂತರವನ್ನು ತಟಸ್ಥಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಈ ಕ್ಷಿಪಣಿ ವ್ಯವಸ್ಥೆಯ ಅಭಿವೃದ್ಧಿಯನ್ನು ಯಶಸ್ವಿಯಗಿ ಮುನ್ನಡೆಸಿದ ಕೀರ್ತಿ ವಿಜ್ಞಾನಿ ಡಾ. ಪ್ರಹ್ಲಾದ ರಾಮರಾವ್ ಅವರಿಗೆ ಸಲ್ಲುತ್ತದೆ.

“ಇದು ನನ್ನ ಜೀವನದ ಅತ್ಯಂತ ಸಂತೋಷದ ದಿನ… ಶತ್ರುಗಳ ವೈಮಾನಿಕ ಗುರಿಗಳನ್ನು ಇಷ್ಟೊಂದು ನಿಖರತೆ ಮತ್ತು ಸೊಬಗಿನಿಂದ ಹೊಡೆಯುವಲ್ಲಿ ನಾನು ಸಹಾಯ ಮಾಡಿದ ಕ್ಷಿಪಣಿ ನೆರವಾಗಿದೆ. ಆಕಾಶ್ ಬಹು ಗುರಿಗಳನ್ನು ಯಶಸ್ವಿಯಾಗಿ ಎದುರಿಸಿದೆ. ಇದು ನಿರೀಕ್ಷೆಗಳನ್ನು ಮೀರಿ ಕಾರ್ಯನಿರ್ವಹಿಸಿದೆ. ಭಾರತದೊಳಗೆ ಬರುವ ವೈರಿಗಳ ಬೆದರಿಕೆಗಳನ್ನು (ಡ್ರೋಣ್ ಮತ್ತು ಕ್ಷಿಪಣಿ ದಾಳಿಗಳನ್ನು) ಪರಿಣಾಮಕಾರಿಯಾಗಿ ಮತ್ತು ನಿಖರವಾಗಿ ಭೇದಿಸಿದೆ” ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ಡಾ. ರಾವ್.

ಆಕಾಶ್ ಎಂಬ ಬ್ರಹ್ಮಾಸ್ತ್ರ

ಆಕಾಶ್ ಕ್ಷಿಪಣಿ ವ್ಯವಸ್ಥೆಯು ನೆಲದಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ ವ್ಯವಸ್ಥೆಯಾಗಿದೆ. ಇದರ ಆಂತರ್ನಿರ್ಮಿತ ಎಲೆಕ್ಟ್ರಾನಿಕ್ ನಿರ್ದೇಶಿತ ಮಾರ್ಗಗಳೊಂದಿಗೆ, 20 ಕಿ.ಮೀ ಎತ್ತರದ ಗುರಿಗಳನ್ನು ನಿಖರವಾಗಿ ಭೇದಿಸುವ ಅಗಾಧ ಸಾಮರ್ಥ್ಯ ಹೊಂದಿದೆ.

ಪಾಕ್ ದಾಳಿ ಪ್ರಯತ್ನಗಳನ್ನು ವಿಫಲಗೊಳಿಸಲು ಭಾರತ ಆಕಾಶ್ ಕ್ಷಿಪಣಿ ಮತ್ತು ವಾಯು ರಕ್ಷಣಾ ವ್ಯವಸ್ಥೆಯನ್ನು ನಿಯೋಜಿಸಲಾಗಿತ್ತು. ಅವು ಅತ್ಯಂತ ಸಮರ್ಥವಾಗಿ ಕಾರ್ಯನಿರ್ವಹಿಸಿವೆ. ಭಾರತದ 15 ನಗರಗಳ ಮೇಲೆ ದಾಳಿ ಮಾಡುವ ಪಾಕಿಸ್ತಾನದ ಪ್ರಯತ್ನಗಳನ್ನು ವಿಫಲಗೊಳಿಸುವಲ್ಲಿ ಭಾರತವು ಬರಾಕ್- 8 ಕ್ಷಿಪಣಿಗಳು, ಎಸ್-400 ಟ್ರಯಂಫ್ ವಾಯು ರಕ್ಷಣಾ ವ್ಯವಸ್ಥೆಗಳು, ಆಕಾಶ್ ಕ್ಷಿಪಣಿಗಳು ಮತ್ತು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಡ್ರೋನ್ ವಿರೋಧಿ ಉಪಕರಣಗಳನ್ನು ನಿಯೋಜಿಸಲಾಗಿತ್ತು. ಇವು ಪಾಕಿಸ್ತಾನದ ನೂರಾರು ಡ್ರೋಣ್‌ಗಳು ಮತ್ತು ಕ್ಷಿಪಣಿಯನ್ನು ಹೊಡೆದುರುಳಿಸಿವೆ.

ಆವಂತಿಪುರ, ಶ್ರೀನಗರ, ಜಮ್ಮು, ಪಠಾಣ್‌ಕೋಟ್, ಅಮೃತಸರ, ಕಪುರ್ತಲಾ, ಜಲಂಧರ್, ಲೂಧಿಯಾನ, ಆದಂಪುರ, ಭಟಿಂಡಾ, ಚಂಡೀಗಢ, ನಾಲ್, ಫಲೋಡಿ, ಉತ್ತರಲೈ ಮತ್ತು ಭುಜ್‌ಗಳನ್ನು ಗುರಿಯಾಗಿಸಲು ಪಾಕಿಸ್ತಾನಿ ಸೇನೆಯು ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಬಳಸಿ ಪ್ರಯತ್ನಿಸಿತು. ವೈರಿ ದೇಶದ ದುರಾಕ್ರಮವನ್ನು ಯಶಸ್ವಿಯಾಗಿ ಭಾರತ ಹಿಮ್ಮೆಟ್ಟಿಸಿದೆ.

ಪಾಕಿಸ್ತಾನದ ಪ್ರತಿಯೊಂದು ಡ್ರೋಣ್ ಮತ್ತು ಕ್ಷಿಪಣಿಯನ್ನು ತಡೆಹಿಡಿಯಲಾಯಿತು ಅಥವಾ ತಟಸ್ಥಗೊಳಿಸಲಾಯಿತು. ವೈರಿ ದೇಶದ ಉದ್ದೇಶಿತ ಗುರಿಯನ್ನು ತಲುಪಲು ನಮ್ಮ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳು ಬಿಡಲಿಲ್ಲ. ಇಂಥ ನಿಖರ ರಕ್ಷಣಾ ವ್ಯವಸ್ಥೆ ಬಗ್ಗೆ ಅಮೆರಿಕ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳು ಬೆಚ್ಚಿ ಬೆರಗಾಗಿವೆ.

‘ಮಿಸ್ಮೆೈಲ್ ಮ್ಯಾನ್’ ಡಾ. ಪ್ರಹ್ಮಾದ್ ರಾಮರಾವ್

ಇವರು ಭಾರತದ “ಕ್ಷಿಪಣಿ ಮನುಷ್ಯ” ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರಿಂದ ಆಯ್ಕೆಯಾದ ರಾಮರಾವ್, ಆಕಾಶ್ ಕಾರ್ಯಕ್ರಮ ಪ್ರಾರಂಭವಾದಾಗ ಅದಕ್ಕೆ ಅತ್ಯಂತ ಕಿರಿಯ ಯೋಜನಾ ನಿರ್ದೇಶಕರಾಗಿದ್ದರು.

ವೈರಿಗಳ ಡ್ರೋನ್‌ಗಳು, ಕ್ಷಿಪಣಿಗಳು, ಹೆಲಿಕಾಪ್ಟರ್‌ಗಳು ಮತ್ತು ಪಾಕಿಸ್ತಾನಿ ಪೈಲಟ್‌ಗಳು ಹಾರಿಸುವ ಸೂಪರ್‌ಸಾನಿಕ್ ಎಫ್-16 ಫೈಟರ್ ಜೆಟ್‌ಗಳಂತಹ ಅತಿ ವೇಗದ ಬೆದರಿಕೆಗಳನ್ನು ಪ್ರತಿಬಂಧಿಸಲು ನಾವು ಆಕಾಶ್‌ನಂತಹ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿದ್ದೇವೆ ಎಂದು ಹೇಳುತ್ತಾರೆ ಡಾ.ರಾವ್.

ಡಿಆರ್‌ಡಿಓ ಅಭಿವೃದ್ಧಿಪಡಿಸಿದ ಮತ್ತು ಭಾರತ್ ಡೈನಾಮಿಕ್ಸ್ ಲಿಮಿಟೆಡ್ ನಿರ್ಮಿಸಿದ ಆಕಾಶ್ ವ್ಯವಸ್ಥೆಯು ಭಾರತದ ವಾಯು ರಕ್ಷಣೆಯ ಮೂಲಾಧಾರವಾಗಿದೆ. ಇದು ಪೋರ್ಟಬಲ್, ಹೆಚ್ಚು ಚುರುಕು, ಕರಾರುವಾಕ್ಕು, ನಿಖರ ಮತ್ತು ಮಾರಕವಾಗಿದೆ. ಮುಂದುವರಿದ ಆಕಾಶ್-ಎನ್‌ಜಿ ರೂಪಾಂತರವು ಗಂಟೆಗೆ 2,500 ಕಿಮೀ ವೇಗದಲ್ಲಿ 80 ಕಿಮೀ ದೂರದ ಗುರಿಗಳನ್ನು ಹೊಡೆಯುವ ಸಾಮರ್ಥ್ಯವನ್ನು ಹೊಂದಿದೆ. ಇದು ಏಕಕಾಲದಲ್ಲಿ 64 ಗುರಿಗಳನ್ನು ಗುರಿಯಾಗಿಸುತ್ತದೆ ಮತ್ತು ಏಕಕಾಲದಲ್ಲಿ ೧೨ ಕ್ಷಿಪಣಿಗಳನ್ನು ಹಾರಿಸುವಷ್ಟು ಶಕ್ತಿಶಾಲಿಯಾಗಿದೆ.

ರಾಮರಾವ್ ಅವರ ಐತಿಹಾಸಿಕ ವೃತ್ತಿಜೀವನದಲ್ಲಿ ಆಕಾಶ್ ಕೇವಲ ಒಂದು ಅಧ್ಯಾಯ. ಅವರು ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಬಹುತೇಕ ಎಲ್ಲಾ ರೀತಿಯ ಕ್ಷಿಪಣಿಗಳಲ್ಲಿ ಕೆಲಸ ಮಾಡಿದ್ದಾರೆ. ಭೂಮಿಯಿಂದ ಗಗನಕ್ಕೆ ಚಿಮ್ಮುವ ಚಿಮ್ಮುವ ಕ್ಷಿಪಣಿಗಳು, ಆಗಸದಿಂದ ಆಗಸಕ್ಕೆ ಚಿಮ್ಮುವ ಕ್ಷಿಪಣಿಗಳು ಹಾಗೂ ಸಮುದ್ರದಿಂದ ಭೂಮಿ ಮತ್ತು ಆಗಸಕ್ಕೆ ಚಿಮ್ಮುವ ಕ್ಷಿಪಣಿಗಳ ವಿನ್ಯಾಸ ಮತ್ತು ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಬೆಂಗಳೂರಿನಲ್ಲಿ ಆಕಾಶ್ ಕ್ಷಿಪಣಿಯ ಯೋಜನಾ ನಿರ್ದೇಶಕರಾಗಿ ಮಹತ್ವದ ಕೆಲಸ ಮಾಡಿದ್ದಾರೆ. ಆಕಾಶ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಹೊರತಾಗಿ, ಡಾ. ರಾಮರಾವ್ ಅವರು ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಬಹುತೇಕ ಎಲ್ಲಾ ರೀತಿಯ ಕ್ಷಿಪಣಿಗಳ ತಯಾರಿಕೆಯಲ್ಲಿ ಕೆಲಸ ಮಾಡಿದ್ದಾರೆ. ಅಲ್ಲದೇ ಪೃಥ್ವಿ, ಅಗ್ನಿ ಮತ್ತು ನಾಗ್ ಕ್ಷಿಪಣಿಗಳ ಮುಖ್ಯ ವಿನ್ಯಾಸಗಾರರಾಗಿರಯೂ ಕಾರ್ಯ ನಿರ್ವಹಿಸಿದ್ಧಾರೆ. ಬ್ರಹ್ಮೋಸ್ ಅತ್ಯಾಧುನಿಕ ಕ್ಷಿಪಣಿಯ ಯೋಜನಾ ನಿರ್ದೇಶಕರಾಗಿಯೂ ಇವರು ಕೆಲಸ ಮಾಡಿ ಗಮನಸೆಳೆದಿದ್ದಾರೆ. ಇಂಡೋ-ರಷ್ಯಾದ ಜಂಟಿ ಕ್ಷಿಪಣಿ ಅಭಿವೃದ್ಧಿಯಲ್ಲಿಯೂ ಇವರ ಸೇವೆ ಅನನ್ಯ. ಡಾ.ರಾವ್ 10ಕ್ಕಿಂತಲೂ ಹೆಚ್ಚು ರೀತಿಯ ಕ್ಷಿಪಣಿ ವಿನ್ಯಾಸ ಮತ್ತು ಸೃಷ್ಟಿಗಳಲ್ಲಿ ಕೆಲಸ ಮಾಡಿದ್ದಾರೆ.

ರಾಮರಾವ್ ಅವರ ಪ್ರಕಾರ, ಭಾರತದ ಕ್ಷಿಪಣಿಗಳು ವೆಚ್ಚ-ಪರಿಣಾಮಕಾರಿ, ಬಳಕೆದಾರ ಸ್ನೇಹಿ ಮತ್ತು ಕಾರ್ಯಕ್ಷಮತೆ-ಸ್ಪರ್ಧಾತ್ಮಕವೆಂದು ಪರಿಗಣಿಸಲ್ಪಟ್ಟಿದ್ದು, ವಿಶ್ವಾದ್ಯಂತ ರಕ್ಷಣಾ ಖರೀದಿದಾರರಿಗೆ ಅತ್ಯಂತ ಪ್ರಬಲ ಅಸ್ತ್ರಗಳಾಗಿವೆ.

“ನನ್ನ ಮಗು ಶತ್ರುಗಳ ವೈಮಾನಿಕ ಗುರಿಗಳನ್ನು ಹೊಡೆದುರುಳಿಸುವಲ್ಲಿ ನಿಖರವಾಗಿ ಮತ್ತು ಸುಂದರವಾಗಿ ಕೆಲಸ ಮಾಡುತ್ತಿರುವುದನ್ನು ನೋಡಿ ನನಗೆ ತುಂಬಾ ಸಂತಸವಾಗಿದೆ. ಇದು ನಿರೀಕ್ಷೆಗಳನ್ನು ಮೀರಿ ಕೆಲಸ ಮಾಡಿದೆ… ದೇಶದೊಳಗೆ ನುಗ್ಗಿ ಬರುವ ವೈರಿಗಳ ಗುರಿಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಿದೆ ಎಂದು ಡಾ. ರಾವ್ ಹೆಮ್ಮೆಯಿಂದ ಹೇಳಿದ್ದಾರೆ. ಇದು ಭಾರತವು 75 ವರ್ಷಗಳಲ್ಲಿ ಕ್ಷಿಪಣಿ ತಂತ್ರಜ್ಞಾನದಲ್ಲಿ ದೇಶೀಯವಾಗಿ ಅಭಿವೃದ್ಧಿ ಹೊಂದಿ ಸ್ವಾವಲಂಬನೆ ಮತ್ತು ಸಂರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿ ಸಾಧನೆ ಮಾಡಿರುತ್ತದೆ. ಇದರಿಂದಾಗಿ ಇತ್ತೀಚಿನ ಭಾರತ ಪಾಕಿಸ್ತಾನ್ ಪ್ರಕ್ಷುಬ್ದ ಪರಿಸ್ಥಿತಿಯಲ್ಲಿ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ ವ್ಯವಸ್ಥೆಯಿಂದ 20 ಕಿ.ಮೀ. ಎತ್ತರದ ಮತ್ತು ಆಳದ ಗುರಿಗಳನ್ನು ನಿಖರವಾಗಿ ಬೇಧಿಸಿ ಶತ್ರುಗಳ ಹುಟ್ಟಡಗಿಸಿದೆ. ಮತ್ತು ವ್ಯಾಪಕ ಹಾನಿಗೊಳಿಸಿರುತ್ತದೆ.

Leave a Reply

Your email address will not be published. Required fields are marked *

Back To Top