ಮಳೆಗಾಲದ ಮುದ ನೀಡುವ ರಾಗಗಳು

ಮಳೆಗಾಲದ ಮುದ ನೀಡುವ ರಾಗಗಳು

ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ, ರಾಗ ಅಹಿರ್ ಭೈರವ್ ಹಿಂದೂಸ್ತಾನಿ ಶಾಸ್ತ್ರೀಯ ರಾಗವಾಗಿದ್ದು, ಇದು ಮನಸ್ಸನ್ನು ಶಾಂತಗೊಳಿಸುವ ಮತ್ತು ಧ್ಯಾನಶೀಲ ಗುಣಗಳಿಗೆ ಹೆಸರುವಾಸಿಯಾಗಿದೆ, ಇದು ಹೆಚ್ಚಾಗಿ ಬೆಳಗಿನ ಸಮಯದೊಂದಿಗೆ ಸಂಬಂಧಿಸಿದ್ದು ಇದನ್ನು ಭೈರವ್ ಮತ್ತು ಅಹಿರಿ (ಅಥವಾ ಅಭಿರಿ) ರಾಗಗಳ ಸಂಯೋಜನೆ ಎಂದು ಪರಿಗಣಿಸಲಾಗುತ್ತದೆ, ಪುರಾಣದಲ್ಲಿ ಉಲ್ಲೇಖಿಸಿದಂತೆ ಶ್ರೀ ಕೃಷ್ಣಪರಮಾತ್ಮನೂ ಸ್ವತಃ ಆಲಾಪಿಸಿದ ಪ್ರಮುಖ ರಾಗವೆ ಅಹಿರ್ ಭೈರವ ರಾಗ.

ಪಂಡಿತ್ ಭೀಮಸೇನ್ ಜೋಷಿಯವರು ಮತ್ತು ಇತ್ತೀಚೆಗೆ ನಿಧನರಾದ ಉಸ್ತಾದ್ ರಶೀದ್ ಖಾನ್ ನಂತರ ಈ ರಾಗವನ್ನು ಹಿಂದೂಸ್ತಾನಿ ಪದ್ದತಿಯಲ್ಲಿ ಹಾಡುವುದರಲ್ಲಿ ಸುಪ್ರಸಿದ್ಧರಾಗಿದ್ದರು. ಉತ್ತರ ಭಾರತದ ಹಿಂದೂಸ್ತಾನಿ ಸಂಗೀತ ಬಾಣಿಯಲ್ಲಿ ಮೊದಲ ಐದು ಸ್ಥಾನದಲ್ಲಿ ಇರುವವರು ಕರ್ನಾಟಕದ ಸರಸ್ವತಿ ಪುತ್ರರಾದ ಕುಮಾರ್ ಗಾಂಧರ್ವ, ಮಲ್ಲಿಕಾರ್ಜುನ ಮನ್ಸೂರ್, ಪಂಡಿತ್ ಭೀಮಸೇನ್ ಜೋಶಿ, ಇತ್ತೀಚೆಗೆ ಪಂಡಿತ್ ಪದ್ಮಶ್ರೀ ವೆಂಕಟೇಶ್‌ಕುಮಾರ್. ಪಂಡಿತ್ ವೆಂಕಟೇಶ್ ಕುಮಾರ್ ಅವರು ಬಳ್ಳಾರಿ ಜಿಲ್ಲೆಯ ಸೊಂಡೂರು ತಾಲೂಕಿನವರಾಗಿದ್ದು ಮೊದಲು ಅವರ ತಂದೆಯವರ ಜೊತೆಗೆ ಬಯಲಾಟಕ್ಕೆ ಮತ್ತು ಹಿಂಮೇಳಕ್ಕೆ ಬರುತಿದ್ದವರು, ಮುಂದೆ ಗದುಗಿನ ವೀರಾಶ್ರಮ ಪುಟ್ಟರಾಜ ಗವಾಯಿಗಳ ಗರಡಿಯಲ್ಲಿ ೧೨ ವರುಷ ಅಭ್ಯಾಸ ಮಾಡಿ ಹತ್ತು ರಾಗ ಸಿದ್ದಿಸಿಕೊಂಡಿದ್ದರು. ನಂತರ ೭೨ ಮೇಳಕರ್ತ ರಾಗಗಳನ್ನು ಸಂಯೋಜಿಸಿ ಹಿಂದೂಸ್ತಾನಿಯ ೫೦ಕ್ಕೂ ಹೆಚ್ಚು ರಾಗದಲ್ಲಿ ೩೦ ವರ್ಷಗಳಿಂದ ಹಲವಾರು ಪ್ರಯೋಗಗಳನ್ನು ಹಲವಾರು ಕಛೇರಿಗಳಲ್ಲಿ ಸಂಗೀತ ಪ್ರಿಯರಿಗೆ ತಮ್ಮ ರಾಗ ವೈಭವವನ್ನು ಉಣಬಡಿಸಿದ್ದಾರೆ.

ರಾಗ ದೀಪಕ್, ಸಾಂಪ್ರದಾಯಿಕವಾಗಿ ಬೆಂಕಿಯೊಂದಿಗೆ ಸಂಬಂಧ ಹೊಂದಿದ್ದು, ಜ್ವಾಲೆಗಳನ್ನು ಹೊತ್ತಿಸುವ ಶಕ್ತಿಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಇದನ್ನು ಶಿವನು ಸೃಷ್ಟಿಸಿದ್ದಾನೆಂದು ನಂಬಲಾಗಿದೆ ಮತ್ತು ಇದನ್ನು ಸಾಮಾನ್ಯವಾಗಿ ಸಂಜೆಯ ಆರಂಭದಲ್ಲಿ ಪ್ರದರ್ಶಿಸಲಾಗುತ್ತದೆ. ಸಂಗೀತಗಾರ ತಾನ್ಸೇನ್ ಮತ್ತು ಅವನು ದೀಪಕ್ ರಾಗವನ್ನು ಹೇಗೆ ಹಾಡಿದನು, ಅದು ಉರಿಯುತ್ತಿರುವ ಪ್ರತಿಕ್ರಿಯೆಯನ್ನು ಉಂಟುಮಾಡಿತು ಮತ್ತು ನಂತರ ಅವನ ಮಗಳು ಮಳೆಯನ್ನು ತಂದು ಅವನನ್ನು ತಂಪಾಗಿಸಲು ರಾಗ ಮೇಘ ಮಲ್ಹಾರ್ ಅನ್ನು ಹೇಗೆ ಹಾಡಿದಳು ಎಂಬುದರ ಬಗ್ಗೆ ಒಂದು ಪ್ರಸಿದ್ಧ ದಂತಕಥೆಯಿದೆ.
ಅಕ್ಬರ್ ಸಿನಿಮಾದಲ್ಲಿ ತಾನಸೇನಾ ಪಾತ್ರ ಮಾಡಿದವರು ಕರ್ನಾಟಕದ ಧಾರವಾಡ ಮೂಲದ ಪಂಡಿತ ಕೈವಲ್ಯನಾಥ್ ಅವರ ತಂದೆ. ಅವರ ಮಗ ಸುಪ್ರ‍್ರಸಿದ್ದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರರು.

ದೀಪಕ್ ರಾಗ ಅದರದೇ ಋತುಮಾನ ನಿಭಂದನೆ ಇದೆ. ಬಹುಶ್ಯ ಜುಲೈ ಆಗಸ್ಟ್ ಸೆಪ್ಟೆಂಬರ್ ಅಕ್ಟೋಬರ್ ಋತುಮಾನದ ಹೆಸರು ಅಂದರೆ ಗ್ರೀಷ್ಮ ವರ್ಷ ಋತು ಇರಬೇಕು. ದೀಪಕ್ ರಾಗ ಹಾಡಿದ ಮೇಲೆ ಅಷ್ಟೇ ಸಿದ್ದಿಯಾದ ಸಂಗೀತಗಾರರು ಮೇಘ ಮಂದಾರ ರಾಗ ಹಾಡಿದರೆ ಮಳೆ ಸುರಿದು ದೀಪಕ್ ರಾಗ ಹಾಡಿದವರು ಬದುಕುತ್ತಾರೆ ಎಂಬ ಶಾಸ್ತ್ರ ನಿಯಮ ಇದೆ. ಈಗ ಯಾರೂ ಈ ರಾಗವನ್ನು ಪ್ರಯೋಗ ಮಾಡುವುದಿಲ್ಲ. ಇದು ಅಕ್ಬರ್ ಆಸ್ತಾನದಲ್ಲಿ ನಡೆದಿದೆ ದಾಖಲೆಯೂ ಇದೆ. ಅದೇ ತರಹ ಸಂದ್ಯಾ ರಾಗ ಅಂದರೆ ಪೂರ್ವ ಕಲ್ಯಾಣಿ ಅದನ್ನು ಹಾಡುವಾಗ ನರ ಬಿಗಿದು ಉಸಿರು ಕಟ್ಟುತ್ತದೆ ಯಾರು ಪೂರ್ಣ ಹಾಡುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಸನಾದಿ ಅಪ್ಪಣ್ಣ ಸಿನಿಮಾದಲ್ಲಿ “ಕರೆದರೂ ಕೇಳದೆ” ಹಾಡನ್ನು ಕಲ್ಯಾಣ ರಾಗದಲ್ಲಿ ಇನ್ನೊಂದು ರಾಗ ಮಿಶ್ರ ಮಾಡಿಕೊಂಡು ಉಸ್ತಾದ ಬಿಸ್ಮಿಲ್ಲಖಾನ್‌ರವರ ಶಹನಾಯಿ ವಾದ್ಯ ಹಿನ್ನೆಲೆ ಗಾಯಕಿ ಜಾನಕಿಯವರೊಂದಿಗೆ ಹಾಡಿಸಿದರು.

ಮುಂದುವರೆದು ಇದೇ ರೀತಿ ಅಮೃತವರ್ಷಿಣಿ ರಾಗವು ಸಹ ಮಳೆಗಾಲದ ಸವಿನೆನಪಿಗಾಗಿ ಕಡುಬಿಸಿಲಿನ ಬೇಸಿಗೆಯಲ್ಲಿ ಒಳ್ಳೆಯ ಸಂಗೀತಗಾರರು ಹಾಡಿದರೆ ಮಳೆ ಬರುವ ಅವಕಾಶವಿದೆಯೆಂದು ನಮ್ಮ ಜನ ಮಾನಸದಲ್ಲಿ ಇದೆ. ಇದಕ್ಕೆ ಉದಾಹರಣೆ ೧೯೭೦ರ ದಶಕದಲ್ಲಿ ಬಿಸಿಲಿನ ನಾಡಾದ ಬಳ್ಳಾರಿಯಲ್ಲಿ ನಡೆದ ಡಾ. ಬಾಲಮುರುಳಿ ಕೃಷ್ಣರವರ ಸಂಗೀತ ಕಛೇರಿಯಲ್ಲಿ ಹಾಡಿದ ಅಮೃತವರ್ಷಿಣಿ ರಾಗವು ಅದ್ಭುತವಾಗಿ ಪರಿಣಮಿಸಿದ್ದರಿಂದ ಗುಡುಗು ಸಿಡಿಲಿನ ಸಹಿತ ಧಾರಾಕಾರ ಮಳೆ ಬಂದಿರುವುದು ಈ ಲೇಖಕರ ಅನುಭವಕ್ಕೆ ಬಂದಿರುತ್ತದೆ. ಇದೇ ನಮ್ಮ ಕರ್ನಾಟಕ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ರಸಾನುಭವಗಳ ಮತ್ತು ಮಾಧುರ್ಯಕ್ಕೆ ಹೆಸರುವಾಸಿ.

Leave a Reply

Your email address will not be published. Required fields are marked *

Back To Top