ಜಗತ್ತಿನಾದ್ಯಂತ ಗಂಧದ ಸಾಬೂನು ಎಂದು ಪ್ರಸಿದ್ಧಿ ಹೊಂದಿದ ಮೈಸೂರು ಸ್ಯಾಂಡಲ್ ಸಾಬೂನು ನಮ್ಮ ಕರ್ನಾಟಕದ ಹೆಮ್ಮೆ. ಈ ಸಾಬೂನು ಕೇವಲ ಕರ್ನಾಟಕದಲ್ಲಿ ಅಷ್ಟೇ ಅಲ್ಲ. ವಿದೇಶದಲ್ಲಿಯೂ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದ್ದು ಇಂದಿಗೂ ಈ ಸಾಬೂನು ಭಾರತೀಯರು ಇರುವ ಕಡೆಗಳಲ್ಲೆಲ್ಲಾ ಬೇಡಿಕೆ ಹೆಚ್ಚಿದೆ. 1918ರಿಂದ ಬೆಂಗಳೂರಿನಲ್ಲಿ ತಯಾರಾಗುವ ಈ ಸಾಬೂನು ತನ್ನ ಬ್ರಾಂಡ್ ಅನ್ನು ಇನ್ನೂ ಹೆಚ್ಚಿನ ವಹಿವಾಟು ವೃದ್ಧಿಸುವ ನಿಟ್ಟಿನಲ್ಲಿ ಬಹುಭಾಷಾ ನಟಿ ತಮನ್ನಾ ಭಾಟಿಯಾರನ್ನು ಕರ್ನಾಟಕ ಸರ್ಕಾರ ಸಾಬೂನು ಉತ್ಪನ್ನದ ಬ್ರಾö್ಯಂಡ್ ಅಂಬಾಸಿಡರ್ ಆಗಿ ಮಾಡಿದೆ. 2 ವರ್ಷ 2 ದಿನ ಬ್ರಾಂಡ್ ಅಂಬಾಸಿಡರ್ ಆಗುವುದಕ್ಕೆ ತಮನ್ನಾ ಅವರಿಗೆ ರೂ.6.20 ಕೋಟಿ ರೂಪಾಯಿ ಸಂಭಾವನೆಯನ್ನು ನೀಡಿ ಅವರ ಒಪ್ಪಿಗೆ ಪಡೆದಿದ್ದಾರೆ. ಕಳೆದ ಕೆಲವು ದಿನಗಳಿಂದ ತಮನ್ನಾ ಭಾಟಿಯಾರನ್ನು ಮೈಸೂರು ಸ್ಯಾಂಡಲ್ ಸೋಪ್‌ಗೆ ರಾಯಬಾರಿ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿತ್ತು. ಇದು ಅವರ ಅಭಿಮಾನಿಗಳಿಗೆ ಖುಷಿ ತರುವ ವಿಷಯವಾದರೂ ಕರ್ನಾಟಕ ಸರ್ಕಾರವೇ ಮಿಲ್ಕಿ ಬ್ಯೂಟಿಗೆ ನೀಡಿದ ಸಂಭಾವನೆಯು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ದಕ್ಷಿಣ ಭಾರತದಲ್ಲಿ ಜನರು ಮಿಲ್ಕಿ ಬ್ಯೂಟಿ ಎಂದು ಬಾಯ್ತುಂಬ ಕರೆಯುತ್ತಿದ್ದ ಜನಪ್ರಿಯ ನಟಿ ತಮನ್ನಾ ಭಾಟಿಯಾರವರನ್ನು ಈ ಮೊತ್ತಕ್ಕೆ ರಾಯಭಾರಿಯನ್ನಾಗಿ ಮಾಡಿರುವುದು ದಕ್ಷಿಣ ಭಾರತದ ಅದರಲ್ಲೂ ಕನ್ನಡ ಚಿತ್ರ ನಟಿಯರಿಗೆ ಇರುಸು-ಮುರುಸು ಉಂಟು ಮಾಡಿದೆ. ಈ ವಿಷಯವನ್ನು ವಿವಾದಾತ್ಮಕವಾಗಿ ಪರಿವರ್ತನೆಯಾಗದಿರಲು ಕರ್ನಾಟಕ ಸರ್ಕಾರದ ಸಚಿವರು ಮತ್ತು ಸಾಬೂನು ಕಂಪನಿಯ ಅಧಿಕಾರಿಗಳು ತಮನ್ನಾ ಅವರ ಜನಪ್ರಿಯತೆ ಮತ್ತು ಉತ್ತರ ಭಾರತ ಮತ್ತು ವಿದೇಶಿಗಳಲ್ಲಿ ನಮ್ಮ ಸಾಬೂಬಿನ ಜನಪ್ರಿಯತೆಯು ಇನ್ನಷ್ಟು, ಮತ್ತಷ್ಟು ಹೆಚ್ಚಿಗೆ ಜನಪ್ರಿಯ ಹೊಂದಿ ವ್ಯಾಪಾರ ಹೊಂದಿ ವೃದ್ಧಿಸುವ ನಿಟ್ಟಿನಲ್ಲಿ ಈ ಮೊತ್ತಕ್ಕೆ ರಾಯಭಾರಿಕೆಯನ್ನು ಒಪ್ಪಿಸಲಾಗಿದೆ ಎಂದು ಸಮಜಾಯಿಷಿ ನೀಡಿರುತ್ತಾರೆ. ತಮನ್ನಾ ಭಾಟಿಯಾ ಕ್ರೇಜ್/ಜನಪ್ರಿಯತೆ ದಕ್ಷಿಣ ಚಿತ್ರರಂಗದ ಸಿನಿಮಾಗಳು ಕಡಿಮೆ ಆದರೂ, ಜಾಲತಾಣಗಳಲ್ಲಿ ಮತ್ತು ಹಿಂದಿ ಸಿನಿಮಾಗಳಲ್ಲಿ ಜನಪ್ರಿಯತೆ ಕಡಿಮೆಯಾಗಿಲ್ಲ. ಭಾರತದಾದ್ಯಂತ ಕ್ರೇಜಿ ಅಭಿಮಾನಿಗಳನ್ನು ಹೊಂದಿರುವ ತಮನ್ನಾ ಭಾಟಿಯಾ ಬಾಲಿವುಡ್‌ಗೆ ಹೋಗಿದ್ದರೂ ವಿವಾದಗಳ ಮಧ್ಯದಲ್ಲಿಯೇ ತಮನ್ನಾ ಭಾಟಿಯಾ ಅವರನ್ನು ವಿಶ್ವದಾದ್ಯಂತ ಜನಪ್ರಿಯವಾಗಿರುವ ಮೈಸೂರು ಸ್ಯಾಂಡಲ್ ಸೋಪ್‌ನ ರಾಯಭಾರಿಯಾಗಿ ಆಯ್ಕೆ ಒಪ್ಪಂದ ಮಾಡಿಕೊಂಡು ಆದೇಶ ಹೊರಡಿಸಿ ವಿವಾದಕ್ಕೆ ತೆರೆ ಎಳೆದಿದ್ದಾರೆ. ಆದರೆ ತಮನ್ನಾರ ಜನಪ್ರಿಯತೆ ಮತ್ತು ಮೈಸೂರು ಸ್ಯಾಂಡಲ್ ಸಾಬೂನು ವ್ಯಾಪಾರ ವೃದ್ಧಿ ಎಷ್ಟರಮಟ್ಟಿಗೆ ಫಲ ನೀಡುತ್ತದೆಂಬುದು ಮುಂದಿನ ವರ್ಷಗಳಲ್ಲಿ ಕಾದು ನೋಡಬೇಕಾಗಿದೆ.

