ಪತ್ರಿಕಾ ಸುದ್ದಿ

ಬೆಂಗಳೂರು ಸುರಂಗ ಮಾರ್ಗ – ಟ್ರಾಫಿಕ್ ಜಾಮ್‌ಗೆ ಮುಕ್ತಿಯೆಂದು?

1991 ರಿಂದ ಬೆಂಗಳೂರು ಮಹಾನಗರವು 330 ಕಿ.ಮೀ. ವಿಸ್ತೃತ ರಸ್ತೆ ಜಾಲವು ವಿಸ್ತೀರ್ಣವಾಗುತ್ತ ಅತಿ ಹೆಚ್ಚು ವಾಹನಗಳು ಮತ್ತು ಕೈಗಾರಿಕೆಗಳು ಅಭಿವೃದ್ಧಿ ಹೊಂದುವ ಸಮಯದಿಂದ 2006-07ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾದ ತಕ್ಷಣದಿಂದಲೆ 625 ಚ.ಕಿ.ಮೀ. ವ್ಯಾಪ್ತಿಯ 11,000 ಕಿ.ಮೀ. ರಸ್ತೆಗಳನ್ನು ಹೊಂದಿ 4 ಒಳಭಾಗದ ವರ್ತುಲ ರಸ್ತೆಗಳು ಮತ್ತು 2 ಹೊರಭಾಗದ ಉದ್ದದ ವರ್ತುಲ ರಸ್ತೆಗಳು ಈ 30 ವರ್ಷಗಳಲ್ಲಿ ನಿರ್ಮಾಣವಾಗಿ ಅದಕ್ಕೆ ಹೊಂದಿಕೊಂಡಂತೆ 35 ಕಿ.ಮೀ. ಉದ್ದ ನೈಸ್ ರಸ್ತೆಯಲ್ಲೂ ಪ್ರತಿ ದಿನಕ್ಕೆ 6.5 […]

ಇತಿಹಾಸ ಪುಟಗಳಿಂದ

ಸನ್ಮಾನ್ಯ ರಾಷ್ಣ್ರಪತಿಗಳಿಂದ ರಾಣಿ ಚೆನ್ನಭೈರಾದೇವಿ ಸ್ಮಾರಕ ಅಂಚೆ ಚೀಟಿ ಬಿಡುಗಡೆ…

ವಿಜಯನಗರದ ಸಾಳುವ ವಂಶದ ಒಂದು ಶಾಖೆಯ ಅರಸರು ಗೇರುಸೊಪ್ಪೆಯನ್ನು ಆಳುತ್ತಿದ್ದರೆ ಮತ್ತೊಂದು ವಂಶದವರು ಹಾಡುವಳ್ಳಿಯನ್ನು ಆಳುತ್ತಿದ್ದರು. ಗೇರುಸೊಪ್ಪೆಯ ಅರಸ ಇಮ್ಮಡಿ ದೇವರಾಯ (1515-50) ಪೋರ್ಚುಗೀಸರ ಮೇಲೆ ಯುದ್ಧ ಮಾಡಿದ. ಮಡಗೋವೆಯ ಬಳಿ 1542ರಲ್ಲಿ ನಡೆದ ಭೀಕರ ಯುದ್ಧದಲ್ಲಿ ಆತ ಸೋಲನ್ನಪ್ಪಿದ ಬಳಿಕ ಪೋರ್ಚುಗೀಸರು ಆತನ ರಾಜಧಾನಿ ಭಟ್ಕಳವನ್ನು ಸುಟ್ಟು ಹಾಕಿದರು. ಆತನ ಪತ್ನಿ ಚೆನ್ನಾದೇವಯ ತಂಗಿಯೇ ಚೆನ್ನಭೈರಾದೇವಿ. ಪೋರ್ಚುಗೀಸರ ಜೊತೆಗಿನ ಒಪ್ಪಂದದಂತೆ ಕಪ್ಪವನ್ನು ಕೊಡಲಿಲ್ಲವೆಂದು, ಕಾರ್ಟಜ್ ಪಡೆಯದ ಮಹಮದ್ದೀಯರ ಹಡಗುಗಳಿಗೆ ಭಟ್ಕಳ ಬಂದರಿನಲ್ಲಿ ಆಶ್ರಯ ಕೊಟ್ಟಿರುವಳೆಂದು ಆರೋಪಿಸಿ, […]

ಜ್ಞಾನ–ವಿಜ್ಞಾನ–ಪರಿಜ್ಞಾನ

ಬೆಂಗಳೂರು ಯೂನಿವರ್ಸಿಟಿ : ಏಷ್ಯಾದ ಅತ್ಯುತ್ತಮ ವಿಶ್ವವಿದ್ಯಾಲಯ

ಬೆಂಗಳೂರು ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯದ ಅತಿದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. 1964ರಲ್ಲಿ 32 ಕಾಲೇಜುಗಳು ಮತ್ತು 16000 ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾಯಿತು. ನಂತರ 700 ಕಾಲೇಜುಗಳು ಮತ್ತು 4 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ್ದು, ಇದು ಬೆಂಗಳೂರು ನಗರ, ಕೋಲಾರ ಮತ್ತು ತುಮಕೂರು ಜಿಲ್ಲೆಗಳನ್ನು ಒಳಗೊಂಡಿದೆ. ಬೆಂಗಳೂರು ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್ ಜ್ಞಾನಭಾರತಿ ಆಗಿದೆ. ಇಲ್ಲಿ 800 ಎಕರೆ ವಿಶಾಲ ಪ್ರದೇಶವಿದೆ. ವಿಶ್ವವಿದ್ಯಾಲಯವು ತನ್ನ ಎಲ್ಲಾ ಪದವಿ ಮತ್ತು ಸ್ನಾತಕೋತ್ತರ ಕಾರ್ಯಕ್ರಮಗಳಲ್ಲಿ ಚಾಯ್ಸ್ ಬೇಸ್ಡ್ ಕ್ರೆಡಿಟ್ ಸಿಸ್ಟಮ್ ಅನ್ನು ಅಳವಡಿಸಿಕೊಂಡು […]

ಸಭೆ ಸಾಹಿತ್ಯ ಕವನ

ಮಳೆಗಾಲದ ಮುದ ನೀಡುವ ರಾಗಗಳು

ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ, ರಾಗ ಅಹಿರ್ ಭೈರವ್ ಹಿಂದೂಸ್ತಾನಿ ಶಾಸ್ತ್ರೀಯ ರಾಗವಾಗಿದ್ದು, ಇದು ಮನಸ್ಸನ್ನು ಶಾಂತಗೊಳಿಸುವ ಮತ್ತು ಧ್ಯಾನಶೀಲ ಗುಣಗಳಿಗೆ ಹೆಸರುವಾಸಿಯಾಗಿದೆ, ಇದು ಹೆಚ್ಚಾಗಿ ಬೆಳಗಿನ ಸಮಯದೊಂದಿಗೆ ಸಂಬಂಧಿಸಿದ್ದು ಇದನ್ನು ಭೈರವ್ ಮತ್ತು ಅಹಿರಿ (ಅಥವಾ ಅಭಿರಿ) ರಾಗಗಳ ಸಂಯೋಜನೆ ಎಂದು ಪರಿಗಣಿಸಲಾಗುತ್ತದೆ, ಪುರಾಣದಲ್ಲಿ ಉಲ್ಲೇಖಿಸಿದಂತೆ ಶ್ರೀ ಕೃಷ್ಣಪರಮಾತ್ಮನೂ ಸ್ವತಃ ಆಲಾಪಿಸಿದ ಪ್ರಮುಖ ರಾಗವೆ ಅಹಿರ್ ಭೈರವ ರಾಗ. ಪಂಡಿತ್ ಭೀಮಸೇನ್ ಜೋಷಿಯವರು ಮತ್ತು ಇತ್ತೀಚೆಗೆ ನಿಧನರಾದ ಉಸ್ತಾದ್ ರಶೀದ್ ಖಾನ್ ನಂತರ ಈ ರಾಗವನ್ನು ಹಿಂದೂಸ್ತಾನಿ […]

ಸಭೆ ಸಾಹಿತ್ಯ ಕವನ

ಜೂನ್-ಜುಲೈ ಮುಂಗಾರು ಮಳೆ – ತುಂಬಿದ ರಾಜ್ಯದ ಅಣೆಕಟ್ಟುಗಳು

ಈ ವರ್ಷದ ಜೂನ್-ಜುಲೈ ರಣಭೀಕರ ಮುಂಗಾರು ಮಳೆಯಿಂದಾಗಿ ಉಕ್ಕಿ ಹರಿಯುತ್ತಿರುವ ರಾಜ್ಯದ ಎಲ್ಲಾ ನದಿಗಳು ತುಂಬಿಹರಿಯುತ್ತಿದ್ದು, ಬಹುತೇಕ ಎಲ್ಲಾ ಅಣೆಕಟ್ಟುಗಳು ತುಂಬಿ ಅಣೆಕಟ್ಟುಗಳಿಂದ ನದಿ ಪಾತ್ರಕ್ಕೆ ನೀರು ಬಿಡುವ ಪರಿಸ್ಥಿತಿ ಉಂಟಾಗಿದೆ. ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರಿದಿದ್ದು ಹಲವೆಡೆ ಅವಾಂತರಗಳನ್ನು ಸೃಷ್ಟಿಸಿದೆ. ನದಿಗಳು ಉಕ್ಕಿ ಹರಿದಿದ್ದು ಜನಸಂಚಾರಕ್ಕೆ ತೊಂದರೆಯಾಗಿದೆ. ನದಿ ಪಾತ್ರಗಳಲ್ಲಿ ವಾಸಿಸುತ್ತಿರುವ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ. ಮಲೆನಾಡಲ್ಲಿ ಭೂಕುಸಿತ ಸಂಭವಿಸುತ್ತಿದೆ. ಹಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಮುಂದುವರಿಸಲಾಗಿದೆ.ಜುಲೈ 18ರ ನಂತರ ಮುಂಗಾರು ಮಳೆ […]

ಆಡಳಿತ ಸುದ್ಧಿ

ಹೆಬ್ಬಾಳ ಜಂಕ್ಷನಲ್ಲಿ ಶೀಘ್ರ ಇನ್ನೊಂದು ಹೊಸ ಪಥ

ನಾಗವಾರ ಕಡೆಯಿಂದ ಹೆಬ್ಬಾಳ ಜಂಕ್ಷನ್ ಫ್ಲೆೈ ಓವರ್ ನಿರ್ಮಾಣ – ಸಂಚಾರ ದಟ್ಟಣೆ ನಿವಾರಣೆಗೆ ಕ್ರಮ ಹೆಬ್ಬಾಳ ಜಂಕ್ಷನ್‌ನಲ್ಲಿ ನಾಗವಾರ ಕಡೆಯಿಂದ ಮತ್ತೊಂದು ಹೊಸ ಮೇಲ್ಸೇತುವೆ (ಹೊಸಪಥ) ನಿರ್ಮಿಸಲು ಬಿಡಿಎ ಮುಂದಾಗಿದ್ದು, ಇದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಕಡೆಗೆ ಸಂಚಾರವನ್ನು ಸುಗಮಗೊಳಿಸುವ ಉದ್ದೇಶವನ್ನು ಹೊಂದಿದೆ. ನಾಗವಾರದ ಮೂಲಕ ವಿಮಾನ ನಿಲ್ದಾಣಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಗೆ ನೇರವಾಗಿ ಸಂಪರ್ಕಿಸುವ ಪ್ರಸ್ತಾವಿತ ಮೇಲ್ಸೇತುವೆಯ ಯೋಜನಾ ವರದಿ (ಡಿಪಿಆರ್) ತಯಾರಿಸಲು ಅನುಮತಿ ಈಗಾಗಲೇ ದೊರೆತಿದ್ದು, ಈ ಪ್ರದೇಶದಲ್ಲಿ ಹೆಚ್ಚುತ್ತಿರುವ […]

ಆಡಳಿತ ಸುದ್ಧಿ

ಗ್ರೇಟರ್ ಬೆಂಗಳೂರಿನಲ್ಲಿ ೫ ಮಹಾನಗರ ಪಾಲಿಕೆ?

ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ – ಅಕ್ಟೋಬರ್‌ನಿಂದ ಡಿಸೆಂಬರ್ ಒಳಗೆ ಚುನಾವಣೆ ನಿರೀಕ್ಷೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಸರ್ಜಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಗೆ ತೀರ್ಮಾನ ತೆಗೆದುಕೊಂಡಿರುವ ರಾಜ್ಯ ಸರಕಾರ ಇದೀಗ ಅಂತಿಮವಾಗಿ ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ 5 ಮಹಾನಗರ ಪಾಲಿಕೆಗಳನ್ನು ರಚಿಸಲು ಬಹುತೇಕ ಅಂತಿಮ ತೀರ್ಮಾನ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಸರ್ಕಾರದ ನಗರಾಭಿವೃದ್ಧಿ ಇಲಾಖೆಯು 19.07.2025 ರಂದು ಗೆಜೆಟ್ ಅಧಿಸೂಚನೆ ಹೊರಡಿಸಿ ಸಾರ್ವಜನಿಕರು ಮತ್ತು ಸಂಘಸಂಸ್ಥೆಗಳಿಂದ ಸಲಹೆ, ಸೂಚನೆ ಮತ್ತು […]

ಸಭೆ ಸಾಹಿತ್ಯ ಕವನ

ಪಿಯು ವಿದ್ಯಾರ್ಥಿನಿ ಅರ್ಚಕರ ಕುಟುಂಬದ ಮೊದಲ ಮಹಿಳಾ ಪುರೋಹಿತೆ ಅನಘ

ದಕ್ಷಿಣ ಕನ್ನಡದ ಅನಘಾ ಭಟ್ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದಾಗಲೇ ತಮ್ಮ ಪುರೋಹಿತರ (ಹಿಂದೂ ಅರ್ಚಕರು) ಕುಟುಂಬದಲ್ಲಿ ಪೌರೋಹಿತ್ಯ ಕರ್ತವ್ಯಗಳನ್ನು ನಿರ್ವಹಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರದಾರದು ಅವರು ತಮ್ಮ ತಂದೆಯೊಂದಿಗೆ ಮದುವೆಗಳನ್ನು ನೆರವೇರಿಸುವಲ್ಲಿ ಮತ್ತು ಇತರ ಧಾರ್ಮಿಕ ವಿಧಿಗಳನ್ನು ನಿರ್ವಹಿಸುವಲ್ಲಿ ಸಹಾಯ ಮಾಡುತ್ತಾರೆ. ಅನಘಾ ಅವರಿಗೆ ತಮ್ಮ ತಂದೆಯಿಂದ ಸಂಸ್ಕೃತ ಮತ್ತು ವೇದಗಳನ್ನು ಕಲಿಯಲು ಪ್ರೋತ್ಸಾಹ ದೊರೆತಿದೆ, ಅವರು ಋಗ್ವೇದದ 15 ಸೂಕ್ತಗಳನ್ನು ಮತ್ತು ಯಜುರ್ವೇದದ ರುದ್ರಪಾಟವನ್ನು ಕಲಿತಿದ್ದಾರೆ. ಮಹಿಳೆಯರು ಪುರುಷರಿಗೆ ಸರಿ ಸಮಾನವಾಗಿ ಎಲ್ಲ […]

E ಬೆಂಗಳೂರು ಬೆರಗು

ವರ್ತುಲ ರೈಲ್ವೆ – 2500 ಎಕರೆ ಭೂಸ್ವಾಧೀನ

ಬೆಂಗಳೂರು ಸುತ್ತಲಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ವರ್ತುಲ ರೈಲ್ವೆ ಯೋಜನೆಗೆ 2500 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಲಾಗಿದೆ. ಕೇಂದ್ರ ರೈಲ್ವೆ ಇಲಾಖೆಯು ಭೂಮಿ ನೀಡಿದವರಿಗೆ ಪರಿಹಾರ ನೀಡಲಿದೆ. ಈ ಯೋಜನೆಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 8 ಪಟ್ಟಣಗಳನ್ನು ರೈಲು ಸಂಪರ್ಕದ ಮೂಲಕ ಬೆಸೆಯಲಿದ್ದು, ೨೮೭ ಕಿ.ಮೀ. ವಿಸ್ತೀರ್ಣ ಹೊಂದಿರಲಿದೆ. ಮುಂದಿನ 50 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಡಿಪಿಆರ್ ಸಿದ್ಧಪಡಿಸಲಾಗುವುದು ಎಂದು ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.ವರ್ತುಲ ರೈಲ್ವೆ ಯೋಜನೆಗೆ ಬೆಂಗಳೂರು ಸುತ್ತಮುತ್ತಲ ಪ್ರದೇಶಗಳಲ್ಲಿ 2500 ಎಕರೆ ಭೂಸ್ವಾಧೀನ. ಭೂಮಿ […]

ಹಣಕಾಸು ವ್ಯಾಪಾರ

ಜಿಎಸ್‌ಟಿ ನೋಟಿಸ್ ಮತ್ತು ಬೆಂಗಳೂರು ಬಂದ್

ಯುಪಿಐ ಮೂಲಕ ವರ್ಷವೊಂದರಲ್ಲಿ ರೂ.40 ಲಕ್ಷಕ್ಕಿಂತ ಹೆಚ್ಚು ಆದಾಯ ಗಳಿಸಿದ ಬೇಕರಿ, ಹೋಟೆಲ್, ಬೀಡಾ ಅಂಗಡಿ, ಟೀ-ಅಂಗಡಿ ಮಾಲೀಕರಿಗೆ ವಾಣಿಜ್ಯ ತೆರಿಗೆ ಇಲಾಖೆಯು ಈಚೆಗೆ ನೋಟಿಸ್ ನೀಡಿದ್ದು, ರಾಜ್ಯದಲ್ಲಿ ಯುಪಿಐ ಮೂಲಕ ಹಣ ಪಡೆಯುತ್ತಿರುವ ಸುಮಾರು 65,000 ವರ್ತಕರ ಮಾಹಿತಿಯನ್ನು ಯುಪಿಐ ಪ್ಲಾಟ್‌ಫಾರ್ಮ್ಗಳಿಂದ ವಾಣಿಜ್ಯತೆರಿಗೆ ಇಲಾಖೆ ಪಡೆದುಕೊಂಡಿತ್ತು. ಎಲ್ಲರೂ ಜಿಎಸ್‌ಟಿಗೆ ನೋಂದಾಯಿಸಿ ಎಂದು ಸೂಚಿಸಿತ್ತು. ಆದರೆ ಮುಕ್ಕಾಲು ಭಾಗ ಸಣ್ಣ ವರ್ತಕರು ಬೇಕರಿ, ಪಾನ್ ಶಾಪ್, ಟೀ ಸ್ಟಾಲ್‌ನವರು ಈ ಮೂರು ವರ್ಷವು ತೆರಿಗೆ ಕಟ್ಟುವಲ್ಲಿ ನಿರ್ಲಕ್ಷಿಸಿದ್ದರು.‘ಆರ್ಥಿಕ […]

You May Like

Back To Top