ಜಾಲತಾಣ ಬೆರಗು

ಮೈಸೂರು ಸ್ಯಾಂಡಲ್ ಸೋಪ್ ತಮನ್ನಾ ರಾಯಭಾರಿಕೆ

ಜಗತ್ತಿನಾದ್ಯಂತ ಗಂಧದ ಸಾಬೂನು ಎಂದು ಪ್ರಸಿದ್ಧಿ ಹೊಂದಿದ ಮೈಸೂರು ಸ್ಯಾಂಡಲ್ ಸಾಬೂನು ನಮ್ಮ ಕರ್ನಾಟಕದ ಹೆಮ್ಮೆ. ಈ ಸಾಬೂನು ಕೇವಲ ಕರ್ನಾಟಕದಲ್ಲಿ ಅಷ್ಟೇ ಅಲ್ಲ. ವಿದೇಶದಲ್ಲಿಯೂ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದ್ದು ಇಂದಿಗೂ ಈ ಸಾಬೂನು ಭಾರತೀಯರು ಇರುವ ಕಡೆಗಳಲ್ಲೆಲ್ಲಾ ಬೇಡಿಕೆ ಹೆಚ್ಚಿದೆ. 1918ರಿಂದ ಬೆಂಗಳೂರಿನಲ್ಲಿ ತಯಾರಾಗುವ ಈ ಸಾಬೂನು ತನ್ನ ಬ್ರಾಂಡ್ ಅನ್ನು ಇನ್ನೂ ಹೆಚ್ಚಿನ ವಹಿವಾಟು ವೃದ್ಧಿಸುವ ನಿಟ್ಟಿನಲ್ಲಿ ಬಹುಭಾಷಾ ನಟಿ ತಮನ್ನಾ ಭಾಟಿಯಾರನ್ನು ಕರ್ನಾಟಕ ಸರ್ಕಾರ ಸಾಬೂನು ಉತ್ಪನ್ನದ ಬ್ರಾö್ಯಂಡ್ ಅಂಬಾಸಿಡರ್ ಆಗಿ ಮಾಡಿದೆ. […]

ಜಾಲತಾಣ ಬೆರಗು

Camera

The world’s biggest camera is about to open its eye this 3,200 megapixel Titan housed at the Vera c Rubin Observatory in Chile is ready to show us its first ever images a camera so power it can see a golf ball from 15 miles away on June 23rd it will reveal what is sees and […]

ಮಾಧ್ಯಮ ಸುದ್ದಿ

ಅಯೋಧ್ಯೆಯಲ್ಲಿ ಶ್ರೀರಾಮನ ದರ್ಬಾರ್

ಉತ್ತರ ಪ್ರದೇಶದ ಅಯೋಧ್ಯೆ (Ayodhya)ಯಲ್ಲಿರುವ ರಾಮ ಮಂದಿರದಲ್ಲಿ ಶ್ರೀ ರಾಮನ ಎರಡನೇ ಪ್ರಾಣ ಪ್ರತಿಷ್ಠಾ ಸಮಾರಂಭವು ಮತ್ತು ರಾಮ ದರ್ಬಾರ್ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ತುಂಬಾ ಶ್ರದ್ಧಾಭಕ್ತಿಯಿಂದ ಶಾಸ್ತ್ರೋಕ್ತವಾಗಿ ಜೂನ್ ೩ ರಂದು ನಡೆಯಿತು. ಈ ಪವಿತ್ರ ಸಮಾರಂಭದಲ್ಲಿ ಶ್ರೀರಾಮ ಜನ್ಮಭೂಮಿ ಸಂಕೀರ್ಣದೊಳಗೆ ರಾಜಾ ರಾಮ ಮತ್ತು ಇತರ ದೇವತೆಗಳ ಪ್ರತಿಷ್ಠಾಪನೆ ನಡೆದಿದ್ದು, ಇದೇ ಸಂದರ್ಭದಲ್ಲಿ ರಾಮ ಜನ್ಮಭೂಮಿ ದೇವಸ್ಥಾನದ ಮೊದಲ ಮಹಡಿಯಲ್ಲಿರುವ ರಾಮ ದರ್ಬಾರ್‌ನ ಎಂಟು ದೇವಾಲಯಗಳು, ಪಾರ್ಕೋಟಾ, ಶಿವಲಿಂಗ, ಗಣಪತಿ, ಹನುಮಾನ್, ಸೂರ್ಯ, ಭಗವತಿ […]

ಪತ್ರಿಕಾ ಸುದ್ದಿ

ಪಶ್ಚಿಮ ಘಟ್ಟಗಳ ಸಂರಕ್ಷಣೆ: ಪ್ರಗತಿ ಮುಖ್ಯವೋ ಪ್ರಕೃತಿ ಮುಖ್ಯವೋ..?

ಯುನೆಸ್ಕೋದ ವಿಶ್ವ ಪಾರಂಪಾರಿಕ ತಾಣಗಳ ಪಟ್ಟಿಯಲ್ಲಿ ಮಹತ್ವದ ಸ್ಥಾನ ಪಡೆದಿರುವ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅಭಿವೃದ್ಧಿ ಮುಖ್ಯವೋ ಅಥವಾ ಪರಿಸರ ಸಂರಕ್ಷಣೆಗೆ ಮುಖ್ಯವೋ ಎಂಬ ಸಂದಿಗ್ಧ ಪ್ರಶ್ನೆ ಉದ್ಭವಿಸಿದೆ. ನಾಗಾಲೋಟದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಅಭಿವೃದ್ಧಿ ಅಗತ್ಯಗಳಿಗೆ ಅನುಗುಣವಾಗಿ ಪರಿಸರ ಸಂರಕ್ಷಣೆ ಮತ್ತು ವಾಣಿಜ್ಯ ಅವಕಾಶಗಳ ಆರ್ಥಿಕ ಅಭಿವೃದ್ಧಿಯ ನಡುವಿನ ಸೂಕ್ಷ÷್ಮ ಸಮತೋಲನವನ್ನು ಕಾಪಾಡಿಕೊಳ್ಳಬೇಕಿದೆ. ಸುಸ್ಥಿರ ಅಭಿವೃದ್ಧಿಯ ಗುರಿಗಳೊಂದಿಗೆ ಪಶ್ಚಿಮ ಘಟ್ಟಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಬೇಕಿದೆ. ಇದು ಸರ್ಕಾರ, ಜನಪ್ರತಿನಿಧಿಗಳು, ಪರಿಸರವಾದಿಗಳು, ಪರಿಸರ ಸಂರಕ್ಷಣಾ ಸಂಸ್ಥೆಗಳು, ಜೀವ […]

ಪತ್ರಿಕಾ ಸುದ್ದಿ

ನಿಮ್ಮ ದಿನಬಳಕೆಯ ಸಾಧನಗಳಲ್ಲೇ ಇದೇ ಬೇಹುಗಾರನ ಕಳ್ಳಗಿಂಡಿ …ಹುಷಾರ್ !

ಸ್ಮಾರ್ಟ್ಫೋನ್‌ಗಳಲ್ಲಿ ಕಳ್ಳಗಣ್ಣು-ಕಳ್ಳಗಿವಿಸೈಬರ್ ಕ್ರೆೈಮ್-ಹೈಟೆಕ್ ಯುಗ ಮತ್ತು ಆತ್ಯಾಧುನಿಕ ಮಾನವನಿಗೆ ಸಂಚಕಾರವಾಗಿ ಪರಿಗಣಿಸಿದೆ. ಮಾಧ್ಯಮಗಳಲ್ಲಿ ಇದು ದಿನಿನಿತ್ಯದ ಸುದ್ದಿಗಳಾಗಿ ಕಣ್ಣಿಗೆ ರಾಚುತ್ತವೆ. ಒಂದೆಡೆ ಕಂಪ್ಯೂಟರ್ ಮತ್ತು ಕಂಪ್ಯೂಟರ್ ನೆಟ್‌ವರ್ಕ್ನಲ್ಲಿ ಹ್ಯಾಕರ್‌ಗಳ ಹಾವಳಿ ಹೆಚ್ಚಾಗಿದ್ದರೆ, ಮತ್ತೊಂದೆಡೆ ಮೊಬೈಲ್ ಫೋನ್‌ಗಳಲ್ಲಿ ಹೂಕರ್‌ಗಳ ಕಾಟವೂ ಅವ್ಯಾಹತವಾಗಿ ಕಾಡುತ್ತಿದೆ. ಇಸ್ರೇಲ್ ಮೂಲದ ಪೆಗಾಸಸ್ ಸಾಫ್ಟ್ವೇರ್ ಬಳಸಿ ದೇಶದ ೩೦೦ಕ್ಕೂ ಹೆಚ್ಚು ಗಣ್ಯರು ಮತ್ತು ಪ್ರಭಾವಿಗಳ ಮಾಹಿತಿ ಸಂಗ್ರಹಿಸಿದ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಚರ್ಚೆ, ವಿವಾದ ಮತ್ತು ಪ್ರತಿಭಟನೆಗಳಿಗೂ ಕಾರಣವಾಗಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಸ್ಟಾಕರ್‌ವೇರ್ […]

ಮಾಧ್ಯಮ ಸುದ್ದಿ

ಐಪಿಎಲ್ ಸಂಭ್ರಮ ಮತ್ತು ಸರ್ಕಾರದ ವೈಫಲ್ಯ

ಕನ್ನಡಿಗರ ನಾಡು ಕರ್ನಾಟಕದಲ್ಲಿ ಕ್ರಿಕೆಟ್ ಆಟವನ್ನು ತುಂಬಾ ಪ್ರೀತಿಸುತ್ತಾರೆ ಮತ್ತು ಆದರಿಸುತ್ತಾರೆ. ಅದರಲ್ಲೂ ನಮ್ಮ ಬೆಂಗಳೂರಿನ ಪ್ರತಿಭಾನ್ವಿತ ಕ್ರಿಕೆಟ್ ಕಲಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭೆಯಿಂದ ಭಾರತ ತಂಡವನ್ನು ಪ್ರತಿನಿಧಿಸಿ ಹಲವಾರು ಭಾರತದ ಗೆಲುವಿನ ರುವಾರಿಗಳಾಗಿರುತ್ತಾರೆ. 75 ವರ್ಷಗಳಿಂದಲೂ ವಿಶೇಷವಾಗಿ ಬಿ.ಎಸ್.ಚಂದ್ರಶೇಖರ್, ಬುದ್ಧಿ ಕುಂದರಮ್, ರ‍್ರಪಳ್ಳಿ ಪ್ರಸನ್ನ, ಜಿ.ಆರ್.ವಿಶ್ವನಾಥ್, ಬ್ರಿಜೇಶ್ ಪಟೇಲ್, ರಾಹುಲ್ ದ್ರಾವಿಡ್, ಸುನೀಲ್ ಜೋಶಿ, ಅನಿಲ್ ಕುಂಬ್ಳೆ, ರಾಬಿನ್ ಉತ್ತಪ್ಪ, ಸದಾನಂದ ವಿಶ್ವನಾಥ್, ಸಯ್ಯದ್ ಕರ‍್ಮಾನಿ ಮುಂತಾದ ಕ್ರೀಡಾಪಟುಗಳು ಭಾರತ ತಂಡದಲ್ಲಿ ಪ್ರಜ್ವಲಿಸಿದ್ದು ಇಂದಿಗೂ ಕೆ.ಎಲ್.ರಾಹುಲ್, […]

ಸಭೆ ಸಾಹಿತ್ಯ ಕವನ

ಕರ್ಮಫಲ

81 ವರ್ಷದ ಆ ಕಪ್ಪು ಟೋಪಿದಾರಿ, ಕಪ್ಪು ಪ್ಯಾಂಟ್ ಜೊತೆ ಬಿಳಿ ಅಂಗಿ ತೊಟ್ಟಿದ್ದರು. ಜೊತೆಯಲ್ಲೊಂದು ಬಟ್ಟೆ ಚೀಲವಿತ್ತು ಕಂಕುಳಲ್ಲಿ. ಸುಮಾರು ಅರ್ಧ ಗಂಟೆ ಆಗಿತ್ತು ಮೆಡಿಕಲ್ ಶಾಪ್ ನಲ್ಲಿ ತಮ್ಮ 4 ಮಾತ್ರೆಗಳ ಲಿಸ್ಟ್ ಕೊಟ್ಟು, ಅವುಗಳ ದರ ವಿಚಾರಿಸುತ್ತಿದ್ದರು. ತಮ್ಮ ಚಿಕ್ಕ ಮೊಬೈಲ್‌ನ ಕ್ಯಾಲ್ಕೂಕ್ಲೇಲೇಟರ್‌ನಲ್ಲಿ ಪದೇಪದೇ ಲೆಕ್ಕ ಮಾಡುತಿದ್ದರು. ಕೊನೆಗೆ 17 ದಿನದ ಔಷಧಿ ಕೊಡುವಂತೆ ತಿಳಿಸಿದರು. ಅಂಗಡಿಯಾತ ಚೀಟಿಯಲ್ಲಿದ್ದಂತೆ 30 ದಿನದ ಔಷದಿ ತಂದಿದ್ದ, ಮತ್ತೆ 17 ದಿನ ಎಂದಾಗ, ಮತ್ತೆ ಮತ್ತೆ […]

ಸಭೆ ಸಾಹಿತ್ಯ ಕವನ

ಬೆಂಗಳೂರು ಮಳೆ

ಬೆಂಗಳೂರಿನ ಮಳೆ ಒಂಥರಾ ರಮ್ ಇದ್ದ ಹಾಗೆ. ಎಷ್ಟು ಕುಡಿದರೂ ನಶೆ ಏರುವುದೇ ಇಲ್ಲಾ, ಹಾಗೆ ಬೆಂಗಳೂರಿನಲ್ಲಿ ಎಷ್ಟು ಮಳೆ ಬಿದ್ದರೂ ಗೊತ್ತಾಗೋದೇ ಇಲ್ಲಾ ಇನ್ನು ಬೆಳಗಾವಿಯ ಮಳೆ ಮನೆ ಅಳಿಯ ಇದ್ದ ಹಾಗೆ ಒಮ್ಮೆ ಮನೆ ಹೊಕ್ಕರೆ ಮುಗಿತು, ನಮ್ಮ ಮನೆಯಲ್ಲೇ ಇರಪ್ಪ ಅಂದ್ರೂ ಫಜಿತಿ ಮತ್ತೆ ಬೇರೆ ಮನೆಗೆ ಹೋಗಪ್ಪಾ ಅನ್ನೋದು ಫಜೀತಿ. ಇನ್ನು ಮೈಸೂರಿನ ಮಳೆ ಪ್ರೇಯಸಿಯ ಪ್ರೇಮ ನಿವೇದನೆ ಇದ್ದ ಹಾಗೆ ಯಾವಾಗ ಬಂದು ಧೋ ಧೋ ಎಂದು ಸುರಿಯುವುದೋ, ಯಾವಾಗ […]

You May Like

Back To Top