ಮೊದಲ ಮಳೆಯ ಸಿಂಚನಕೆ ಅರಳಿ ನಿಂತಿದೆ ಭೂ ವನ ಮೊದಲ ಪ್ರೀತಿ ಸಂಭ್ರಮಕೆ ತೋಯ್ದು ಹೋಯ್ತು ಈ ಮನ ಮಳೆಯು ಗೀಚಿದೆ ಹಸಿರೆಲೆಗಳ ಮೇಲೆ ಹನಿಗವನಗಳ ಸಾಲು, ಈ ಮನದ ತುಂಬೆಲ್ಲಾ ಕನಸುಗಳ ಚಿಗುರು, ಸೋನೆ ಮಳೆಯು ಹನಿಗಳಷ್ಟೇಯಾದರೂ, ಕಾದು ನಿಂತ ಬರಡು ನೆಲಕೆ ಎಂದೂ ಬತ್ತದ ಪ್ರೀತಿಯೊರತೆಯು. ಹನಿಗಳು ಅಷ್ಟೇ ಜೋರು ಮಳೆಯಲ್ಲ ಆದರೂ ಸಾಕು ಜೀವನ ಸವೆಸಲು ನೆನಪುಗಳೇ ಮಧುರ.
ಆರೋಗ್ಯ ಸೇವೆಗೆ ರೂ.೪೮ ಕೋಟಿ ಇನ್ಫೊಸಿಸ್ ಫೌಂಡೇಷನ್
ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿನ ತಾಯಂದಿರು ಹಾಗೂ ಮಕ್ಕಳ ಆರೋಗ್ಯ ರಕ್ಷಣೆಗಾಗಿ ವೈದ್ಯಕೀಯ ಮೂಲ ಸೌಕರ್ಯ ಮತ್ತು ಸೌಲಭ್ಯಗಳನ್ನು ಬಲಪಡಿಸಲು ರೂ.48 ಕೋಟಿಗೂ ಹೆಚ್ಚಿನ ಅನುದಾನವನ್ನು ಇನ್ಫೊಸಿಸ್ ಫೌಂಡೇಷನ್ ಒದಗಿಸಲಿದೆ. ಇದಕ್ಕಾಗಿ, ವಿಶ್ವಸಂಸ್ಥೆಯಿಂದ ಮಾನ್ಯತೆ ಪಡೆದ ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಜೊತೆ ಪಾಲುದಾರಿಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದೆ. ಇದು ದುರ್ಬಲ ವರ್ಗಗಳ ಮಹಿಳೆಯರಿಗೆ, ಶಿಶುಗಳಿಗೆ ಮತ್ತು ಮಕ್ಕಳಿಗೆ ಉಚಿತವಾಗಿ ಆರೋಗ್ಯ ಸೇವೆಗಳನ್ನು ಒದಗಿಸಲು ಶ್ರೀ ಸತ್ಯಸಾಯಿ ಸರಳಾ ಸ್ಮರಣಾರ್ಥ ಆಸ್ಪತ್ರೆಗೆ ನೆರವು ನೀಡಲಿದೆ. ಕರ್ನಾಟಕದ ಗ್ರಾಮೀಣ ಪ್ರದೇಶಗಳ ತಾಯಂದಿರುವ […]
ಡಿಜಿಟಲ್ ವಂಚನೆಗೆ ಆರ್‌ಬಿಐ ತಡೆ
ಇತ್ತೀಚೆಗೆ ಜಾಗತಿಕ ಮಟ್ಟದಲ್ಲೂ ಮತ್ತು ಭಾರತದಲ್ಲೂ ಜಾಲತಾಣಗಳ ಮೂಲಕ ವ್ಯಾಪಕವಾದ ಹಣಕಾಸಿನ ವಂಚನೆಗಳು ವರದಿಯಾಗುತ್ತಿದ್ದು ಲಕ್ಷಾಂತರ ಜನರ ಕೋಟ್ಯಾಂತರ ರೂಪಾಯಿಗಳು ಕ್ಷಣಮಾತ್ರದಲ್ಲಿ ತಮ್ಮ ತಮ್ಮ ಬ್ಯಾಂಕ್ ಖಾತೆಗಳಿಂದ ವಂಚಕರ ಖಾತೆಗೆ ವರ್ಗಾವಣೆಯಾಗಿ ನಷ್ಟವುಂಟಾಗಿರುತ್ತದೆ. ಈ ಸೈಬರ್ ಅಪರಾಧಗಳ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಪ್ರಧಾನಮಂತ್ರಿಯವರ ನೇತೃತ್ವದ ಸಚಿವ ಸಂಪುಟದಲ್ಲಿ ನಿರ್ಣಯಿಸಿದಂತೆ ಈ ಡಿಜಿಟಲ್ ಹಣಕಾಸಿನ ವ್ಯವಹಾರಗಳಿಗೆ ರಕ್ಷಣೆ ಸ್ಪರ್ಶ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇದರ ಭಾಗವಾಗಿ ಭಾರತ ರಿಸರ್ವ್ ಬ್ಯಾಂಕ್ ತನ್ನ ಸುಪರ್ದಿಯಲ್ಲಿ ಬರುವ ಎಲ್ಲಾ ಹಣಕಾಸು ವ್ಯವಹಾರಗಳಿಗೆ […]
ಮಳೆಗಾಲ ಸಂತೋಷ ಕೊಡಲಿ
ಬೆಂಗಳೂರಿನ ಮಳೆ ಒಂಥರಾ ರಮ್ ಇದ್ದ ಹಾಗೆ. ಎಷ್ಟು ಕುಡಿದರೂ ನಶೆ ಏರುವುದೇ ಇಲ್ಲಾ, ಹಾಗೆ ಬೆಂಗಳೂರಿನಲ್ಲಿ ಎಷ್ಟು ಮಳೆ ಬಿದ್ದರೂ ಗೊತ್ತಾಗೋದೇ ಇಲ್ಲಾಇನ್ನು ಬೆಳಗಾವಿಯ ಮಳೆ ಮನೆ ಅಳಿಯ ಇದ್ದ ಹಾಗೆ ಒಮ್ಮೆ ಮನೆ ಹೊಕ್ಕರೆ ಮುಗಿತು, ನಮ್ಮ ಮನೆಯಲ್ಲೇ ಇರಪ್ಪ ಅಂದ್ರೂ ಫಜಿತಿ ಮತ್ತೆ ಬೇರೆ ಮನೆಗೆ ಹೋಗಪ್ಪಾ ಅನ್ನೋದು ಫಜೀತಿ.ಇನ್ನು ಮೈಸೂರಿನ ಮಳೆ ಪ್ರೇಯಸಿಯ ಪ್ರೇಮ ನಿವೇದನೆ ಇದ್ದ ಹಾಗೆ ಯಾವಾಗ ಬಂದು ಧೋ ಧೋ ಎಂದು ಸುರಿಯುವುದೋ, ಯಾವಾಗ ಇದ್ದಕ್ಕಿದ್ದಂತೆ ಮಾಯವಾಗುದೋ […]
ನಮ್ಮ ಸಂಸ್ಕೃತಿ, ಪರಂಪರೆಯ ಹೆಮ್ಮೆ ಕರ್ನಾಟಕ ಶಾಸ್ತ್ರೀಯ ಸಂಗೀತ
ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಪ್ರಚಲಿತದಲ್ಲಿದ್ದ ಸಂಗೀತ ವ್ಯವಸ್ಥೆಯ ಇತಿಹಾಸವು ವೇದಗಳವರೆಗೆ ತಲುಪುತ್ತದೆ. ಹೊಸ ರೀತಿಯ ಸಂಗೀತ ಅಭಿವ್ಯಕ್ತಿಯ ಅನ್ವೇಷಣೆಯಲ್ಲಿ ಮನುಷ್ಯನ ಪ್ರತಿಭೆ ಎಷ್ಟೊಂದು ಎತ್ತರಕ್ಕೆ ಏರಬಹುದು ಎಂಬುದನ್ನು ಭಾರತೀಯ ಸಂಗೀತ ವ್ಯವಸ್ಥೆಯು ತೋರಿಸುತ್ತದೆ. ಅದರ ಮನರಂಜನಾ ಮೌಲ್ಯದ ಹೊರತಾಗಿ, ಮಾನವಕುಲವನ್ನು ಉದಾತ್ತ ಮಟ್ಟಕ್ಕೆ ಏರಿಸುವ ಗುಣಮಟ್ಟಕ್ಕಾಗಿ ಸಂಗೀತವನ್ನು ಪಾಲಿಸಲಾಯಿತು ಮತ್ತು ಅಭ್ಯಾಸ ಮಾಡಲಾಯಿತು, ಇದು ಆತ್ಮವು ಶಾಶ್ವತ ಆನಂದವನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಪರಿಪೂರ್ಣ ಸ್ವರ ವ್ಯವಸ್ಥೆ ಮತ್ತು ಭಾರತೀಯ ಸಂಗೀತದ ವ್ಯಾಪಕವಾದ ರಾಗ ಮತ್ತು ತಾಳ […]
ಜೀತದಾಳಿನಿಂದ ಹೊರಬಂದು ಹಲವು ತಾಯಂದಿರ ಬಾಳಿಗೆ ಮಾದರಿ ಈ ‘ತಾಯಮ್ಮ’!
ತಾಯಂದಿರ ದಿನ ಅಂದರೆ ಕೇವಲ ಬೊಕ್ಕೆ, ಹೂಗುಚ್ಛ, ಉಡುಗೊರೆ ನೀಡುವ ದಿನ ಮಾತ್ರವಲ್ಲ. ನಮ್ಮನ್ನು ರಕ್ಷಿಸಲು, ಪೋಷಿಸಲು ಮತ್ತು ನಮ್ಮನ್ನು ಬಲಿಷ್ಠ ವ್ಯಕ್ತಿಗಳಾಗಿ ಬೆಳೆಸಲು ಸಮಾಜದಲ್ಲಿ ಎಲ್ಲಾ ರೀತಿಯಲ್ಲೂ ಹೋರಾಡುವ ಬಲಿಷ್ಠ ಮಹಿಳೆಯರಿಗೆ ಗೌರವ, ವಂದನೆ ಸಲ್ಲಿಸುವ ದಿನ ಇದಾಗಿದೆ.ತಾಯಮ್ಮ ಎಂಬ ಮಹಿಳೆಯ ಕಥೆಯು ಪ್ರಪಂಚದ ಪ್ರತಿಯೊಂದು ಮೂಲೆಯ ತಾಯಂದಿರ ಸಹಿಷ್ಣುತೆ ಮತ್ತು ತ್ಯಾಗಕ್ಕೆ ಅಂತಹ ಒಂದು ಸಾಕ್ಷಿಯಾಗಿದೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಒಂದು ಸಣ್ಣ ಹಳ್ಳಿಯಿಂದ ಬಂದ ತಾಯಮ್ಮ ಅವರಿಗೆ ಮೂವರು ಮಕ್ಕಳಿದ್ದಾರೆ : […]
ಗ್ರೇಟರ್ ಬೆಂಗಳೂರು : ಜಾರಿ ಇಂದು
2006 ರಿಂದ ಅಸ್ತಿತ್ವದಲ್ಲಿ ಇದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮೇ 2025 ರ 15ನೇ ತಾರೀಖಿನಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರವಾಗಿ ಉನ್ನತಿಕರಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯ ಪ್ರದೇಶವನ್ನು ಗ್ರೇಟರ್ ಬೆಂಗಳೂರು ಪ್ರದೇಶ ಎಂದು ಪರಿಗಣಿಸಲು ಹಾಗೂ ಗ್ರೇಟರ್ ಬೆಂಗಳೂರು ಆಡಳಿತ ಕಾಯಿದೆಯನ್ನು ಮೇ 15 ರಿಂದ ಜಾರಿಗೊಳಿಸಲು ಮೇ 09 ರಂದು ನಡೆದ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ರದೇಶವು ಗ್ರೇಟರ್ ಬೆಂಗಳೂರು ಪ್ರದೇಶವಾಗಿ ಪರಿವರ್ತನೆಯಾಗಲಿದೆ. ಹಾಲಿ ಈಗ ಇರುವ 8 […]
ಭಾರತದ ಕ್ಷಿಪಣಿ ಜ್ಞಾನ ಸಂಪತ್ತು ಮತ್ತು ಸಾಧನೆ
ಬ್ರಿಟಿಷ್ ಆಳ್ವಿಕೆಯ ಭಾರತದ ವಿಭಜನೆಯ ನಂತರ, ಎರಡು ಪ್ರತ್ಯೇಕ ರಾಷ್ಟ್ರಗಳು ರೂಪುಗೊಂಡವು, ಭಾರತ (ಹಿಂದೂಗಳ ಪ್ರಾಬಲ್ಯ) ಮತ್ತು ಪಾಕಿಸ್ತಾನ (ಮುಸ್ಲಿಮರ ಪ್ರಾಬಲ್ಯ). ಸ್ವಾತಂತ್ರ್ಯದ ನಂತರ ರಾಜತಾಂತ್ರಿಕ ಸಂಬಂಧಗಳು ಸ್ಥಾಪನೆಯಾದರೂ, ವಿಭಜನೆ ನಂತರ ತಕ್ಷಣದ ಹಿಂಸಾತ್ಮಕ ಘಟನೆಗಳು, ಯುದ್ಧಗಳು, ಭಯೋತ್ಪಾದಕ ದಾಳಿಗಳು ಮತ್ತು ಹಲವಾರು ಪ್ರಾದೇಶಿಕ ವಿವಾದಗಳು ಇನ್ನಷ್ಟು ಜಟಿಲಗೊಳಿಸಿ ಸಂಬಂಧವನ್ನು ಹದಗೆಡಿಸಿದೆ. 1947ರಲ್ಲಿ ಸ್ವಾತಂತ್ರ ಪಡೆದಾಗಿನಿಂದ, ಎರಡೂ ದೇಶಗಳು ಮೂರು ಪ್ರಮುಖ ಯುದ್ಧಗಳನ್ನು, ಒಂದು ಅಘೋಷಿತ ಯುದ್ಧವನ್ನು ಮಾಡಿವೆ ಮತ್ತು ಸಶಸ್ತ್ರ ಕದನಗಳು ಮತ್ತು ಗಡಿಗಳಲ್ಲಿ ಮಿಲಿಟರಿ […]
ಎಲ್ಲರಿಗೂ ದಾರಿದೀಪ ಸರ್ ಎಂ.ವಿ.ಜೀವನ
ಕರುನಾಡಿನ ಹೆಮ್ಮೆಯ ಪುತ್ರ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮದಿನವನ್ನು ಭಾರತದಲ್ಲಿ ಇಂಜಿನಿಯರ್‌ಗಳ ದಿನ ಎಂದು ಆಚರಿಸಲಾಗುತ್ತದೆ. ಸರ್ ಎಂ.ವಿ. ಎಂದರೇನೇ ಕರುನಾಡ ಹೆಮ್ಮೆ. ಭಾರತದ ಎಂಜಿನಿಯರಿಂಗ್ ಪಿತಾಮಹರೆಂದು ಮತ್ತು ಕರುನಾಡಿನ ಹೆಮ್ಮೆಯ ಪುತ್ರ. ಭಾರತ ದೇಶದ ಶ್ರೇಷ್ಠ ಆಸ್ತಿ. ಭಾರತ ಕಂಡ ಅಪ್ರತಿಮ ಇಂಜಿನಿಯರ್ ಇವರು. ಇವರ ಇಂಜಿನಿಯರಿಂಗ್ ಕೌಶಲ್ಯ. ದೂರದರ್ಶಿತ್ವದ ಯೋಜನೆಗಳು, ಜ್ಞಾನ ಎಲ್ಲವೂ ಅದ್ಭುತ, ನಮ್ಮ ನೆಲದ ಸಾಕ್ಷಿ ಪ್ರಜ್ಞೆ ಇವರು. ಇವರ ಜೀವನ, ಆದರ್ಶ, ಸಂದೇಶಗಳು ಇಂದಿಗೂ ಎಲ್ಲರಿಗೂ ದಾರಿದೀಪ, ಇದೇ ಕಾರಣಕ್ಕೆ ಸರ್ ಎಂ.ವಿ.ಅವರ […]
ಬಸವಣ್ಣ, ಎಲ್ಲರೂ ನಮ್ಮವರೆಂದ ಜನದಾರ್ಶನಿಕ
ಸುಮಾರು ೮೫೦ ವರ್ಷಗಳ ಹಿಂದೆಯೆ ಬಸವಣ್ಣನವರು ಸ್ವಾತಂತ್ರ್ಯ, ಸಮಾನತೆ, ವಿಚಾರವಾದ ಮತ್ತು ಭ್ರಾತೃತ್ವ ಆಧಾರಿತ ಸಮಾಜಕ್ಕಾಗಿ ಹಂಬಲಿಸಿದರು. ಜೀವಿಸಿದ್ದು ೬೫ ವರ್ಷಗಳಾದರೂ (೧೧೩೧-೧೧೯೬) ಅವರ ಸಾಧನೆ ಪರ್ವತಸದೃಶ. ವಿಶ್ವಗುರು ಎಂಬ ಮನ್ನಣೆಗೆ ಪಾತ್ರರಾದ ಅವರು ಪರಿಚಯಿಸಿದ ಸಾಮಾಜಿಕ ಸುಧಾರಣೆಗಳು ಸಾರ್ವಕಾಲಿಕ. ಭಾರತೀಯ ಸಾಂಸ್ಕೃತಿಕ ಮತ್ತು ಧಾರ್ಮಿಕ ಇತಿಹಾಸದಲ್ಲಿ ಬಸವಣ್ಣನವರ ಬದುಕು ಮತ್ತು ಬರಹಗಳು ಒಂದು ಕ್ರಾಂತಿಕಾರಕ ಪರಿವರ್ತನೆಯನ್ನು ಪ್ರತಿನಿಧಿಸುತ್ತದೆ. ನೇರವಾಗಿ ದೈವತ್ವಕ್ಕೆ ಮುಟ್ಟಿಸುವ ಅವರ ವಚನಗಳು ಸರಳ, ಸತ್ಯ ಮತ್ತು ಪಾರದರ್ಶಕ ಶ್ರಮದ ದುಡಿಮೆಯು ಆರಾಧನೆಯ ಅತಿ […]









